ತ್ರಿಕೋನ ಪ್ರೇಮಕಥೆಯಲ್ಲಿ ವಿಲನ್ ಅಂತು ಇದ್ದೇ ಇರುತ್ತಾನೆ. ಇಲ್ಲಿ ವಿಲನ್ ಯಾರು ಹೀರೋ ಯಾರು ಎಂದು ನಿರ್ಧರಿಸುವುದು ಹುಡುಗಿ. ಹೀಗೆ ತೆಗೆದುಕೊಂಡ ನಿರ್ಧಾರದಿಂದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಕಳೆದುಕೊಂಡಿದ್ದಾಳೆ ಎನ್ನುವುದಕ್ಕಿಂತ ನೀಚನೊಬ್ಬ ಪ್ರಾಣ ತೆಗೆದಿದ್ದಾನೆ. ಹೌದು, ಇಂತಹದೊಂದು ಅಚ್ಚರಿಯ ಪ್ರಕರಣ ನಡೆದಿರುವುದು ದೆಹಲಿಯಲ್ಲಿ. ಕಾಳಿಂದಿ ಕುಂಜ್ ನಿವಾಸಿ ನಿಜಾಮುದ್ದೀನ್ ರುಬಿಯಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಗೆಳೆತಿಯಾಗಿದ್ದರಿಂದ ಇಬ್ಬರ ನಡುವೆ ಆತ್ಮೀಯ ಸಲುಗೆಯಿತ್ತು. ಅದುವೇ ಬಳಿಕ ಪ್ರೇಮವಾಗಿ ಮಾರ್ಪಟ್ಟಿದೆ. ಆದರೆ ರುಬಿಯಾ ಬೇರೊಬ್ಬನನ್ನು ಇಷ್ಟಪಟ್ಟಿದ್ದಳು.
ದೆಹಲಿ ಸರ್ಕಾರದ ನಾಗರಿಕ ರಕ್ಷಣೆಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ರಬಿಯಾ ನಿಜಾಮುದ್ದೀನ್ ಪ್ರೀತಿಯನ್ನು ನಿರಾಕರಿಸಿದ್ದಳು. ಹಾಗೆಯೇ ತನ್ನ ಪ್ರಿಯತಮ ಜೊತೆ ಸಲುಗೆಯಿಂದಳು. ಇದರಿಂದ ಕುಪಿತಗೊಂಡಿದ್ದ ನಿಜಾಮುದ್ದೀನ್ ಹಲವು ಬಾರಿ ರುಬಿಯಾಳಿಗೆ ಎಚ್ಚರಿಕೆ ನೀಡಿದ್ದ. ಆದರೆ ಬಾಯ್ ಫ್ರೆಂಡ್ ವಿಚಾರದಲ್ಲಿ ತಲೆಹಾಕದಂತೆ ರುಬಿಯಾ ಹಲವು ತಾಕೀತು ಮಾಡಿದ್ದಳು. ಬರು ಬರುತ್ತಾ ರುಬಿಯಾ ನಿಜಾಮುದ್ದೀನ್ನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ವಿಲಕ್ಷಣ ಪ್ರೇಮಿ ಮಾತನಾಡಬೇಕೆಂದು ಕರೆದು ರುಬಿಯಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಈ ಹತ್ಯೆಯ ನಂತರ ನೇರವಾಗಿ ಕಾಳಿಂದಿ ಕುಂಜ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ತಾನು ರುಬಿಯಾಳನ್ನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಹುಡುಗಿಯ ಮನೆಯವರು ನಮ್ಮ ಮದುವೆಯನ್ನು ನಿರಾಕರಿಸಿದ್ದರು. ಹೀಗಾಗಿ ನಾವಿಬ್ಬರು ರಿಜಿಸ್ಟರ್ ವಿವಾಹವಾಗಿದ್ದೆವು. ಅದಾಗ್ಯೂ ಆಕೆ ಆ ಬಳಿಕ ನನ್ನನ್ನು ಬಿಟ್ಟು ಬೇರೊಬ್ಬನನ್ನು ಪ್ರೀತಿಸುತ್ತಿದ್ದ. ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಳು. ಇದರಿಂದ ಹತಾಶೆಗೊಂಡು ನಾನು ಆಕೆಯನ್ನು ಹತ್ಯೆ ಮಾಡಿರುವುದಾಗಿ ನಿಜಾಮುದ್ದೀನ್ ಪ್ರಾಥಮಿಕ ತನಿಖೆ ವೇಳೆ ತಿಳಿಸಿದ್ದಾನೆ.
ಇನ್ನು ಸಂತ್ರಸ್ತೆಯ ಕುಟುಂಬವು, ತಮ್ಮ ಮಗಳನ್ನು ಪಿತೂರಿಯ ಅಡಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಆಫೀಸಿನ ಮನೆಗೆ ಹೋಗುತ್ತಿದ್ದಾಗ ನಿಜಾಮುದ್ದೀನ್ ನಮ್ಮ ಮಗಳನ್ನು ಅಪಹರಿಸಿ ಆ ಬಳಿಕ ಸೂರಜ್ ಕುಂಡ್ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇದೀಗ ಈ ತ್ರಿಕೋನ ಪ್ರೇಮಕಥೆಯ ಮೂರನೇ ವ್ಯಕ್ತಿ ತಲೆ ಮರೆಸಿಕೊಂಡಿದ್ದಾನೆ. ಇತ್ತ ಪಕ್ಕಾ ಲೋಕಲ್ ಸ್ಟೋರಿಯ ದುರಂತ ಅಂತ್ಯ ಕಂಡು ಕಾಳಿಂದಿ ಕುಂಜ್ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?
ಇದನ್ನೂ ಓದಿ: Afghanistan Cricket: ಅಫ್ಘಾನಿಸ್ತಾನದ ಕ್ರಿಕೆಟ್ ಕುರಿತಾಗಿ ಹೊಸ ಆದೇಶ ಹೊರಡಿಸಿದ ತಾಲಿಬಾನ್
(Delhi boyfriend killed his girlfriend after ignorance)