ಸ್ನೇಹಿತರೆಂದರೆ ಇಷ್ಟೇನಾ ಎನಿಸಿಬಿಡುತ್ತದೆ, ಎಲ್ಲಾ ಕಷ್ಟಸುಖಗಳಲ್ಲಿ ಹೆಗಲಿಗೆ ಹೆಗಲಾಗಿ ನಿಲ್ಲಬೇಕಾದವರು ಸತ್ತಾಗಲೂ ಹೆಗಲು ಕೊಡಲಾಗದೆ ಸ್ನೇಹಿತನೆಂದೂ ನೋಡದೆ, ಒಂದು ಹನಿ ಕಣ್ಣೀರು ಹಾಕದೆ ಶವವನ್ನು ಎಲ್ಲೋ ಬಿಸಾಡಿ ಹೋಗುವವರು ಸ್ನೇಹಿತರೆನ್ನುವ ಪದಕ್ಕೆ ಕಳಂಕ ಅಂದರೆ ತಪ್ಪಾಗಲಾರದು.
ಅಪಘಾತದಲ್ಲಿ ಮೃತಪಟ್ಟ ಸ್ನೇಹಿತನ್ನು ಅಂಡರ್ಪಾಸ್ನಲ್ಲಿ ಎಸೆದು ಹೋಗಿರುವ ಘಟನೆ ದೆಹಲಿಯ ವಿವೇಕ ವಿಹಾರದಲ್ಲಿ ನಡೆದಿದೆ. ನಾಲ್ವರು ಸ್ನೇಹಿತರು ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದರು, ಆಟೋ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದ, ಆತನ ಶವವನ್ನು ಮೂವರು ಸ್ನೇಹಿತರು ಅಂಡರ್ಪಾಸ್ ಕೆಳಗೆ ಎಸೆದು ಹೋಗಿದ್ದರು.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅವರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾ ಅಪಘಾತಕ್ಕೀಡಾಗಿ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಮತ್ತಷ್ಟು ಓದಿ: ಬಾಗಲಕೋಟೆ: ಅಕ್ಕನ ಮನೆಗೆ ನುಗ್ಗಿ ಬಾಮೈದನ ಅಟ್ಟಹಾಸ; ಕಲ್ಲಿನಿಂದಲೇ ಜಜ್ಜಿ ಇಬ್ಬರ ಕೊಲೆ
ಗಾಯಗೊಂಡಿದ್ದ ಯುವಕ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದ, ನಂತರ ಆತನ ಮೂವರು ಸ್ನೇಹಿತರು ಆಟೋ ರಿಕ್ಷಾದಲ್ಲಿ ಸ್ಥಳದಿಂದ ಕರೆದೊಯ್ದು, ಆಸ್ಪತ್ರೆಗೆ ಕರೆದೊಯ್ಯುವ ಬದಲು ವಿವೇಕ ವಿಹಾರ ಅಂಡರ್ಪಾಸ್ನಲ್ಲಿ ಎಸೆದಿದ್ದಾರೆ.
ಪೊಲೀಸರ ಪ್ರಕಾರ ಈ ಆಟೋರಿಕ್ಷಾವು ಆ ಮೂವರಲ್ಲಿ ಒಬ್ಬರಿಗೆ ಸೇರಿದ್ದಾಗಿದೆ, ಮೂವರನ್ನು ಬಂಧಿಸಲಾಗಿದೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ