ಕೇವಲ‌ ಪತ್ನಿ ಬಳಿ ನಡುರಾತ್ರಿ 500 ರೂ ಸಿಕ್ತು ಅಂತಾ ಪತ್ನಿ, 3 ಮಕ್ಕಳಿಗೆ ಬೆಂಕಿ ಇಟ್ಟು ಪತ್ನಿಯ ಸಾಯಿಸಿದ ಭೂಪ ಜೈಲು ಪಾಲು

Illicit Relation: ಅನೈತಿಕ ಸಂಬಂಧ ಹೊಂದಿರಬಹುದೆಂದು ಅನುಮಾನಗೊಂಡ ಪತಿ ತುಮಕೂರು ಜಿಲ್ಲೆಯಲ್ಲಿ ತನ್ನ ಪತ್ನಿ, 3 ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅವರ ಕೊಲೆಗೆ ಯತ್ನಿಸಿದ್ದಾನೆ. ಬೆಂಕಿ ಇಟ್ಟ ಬಳಿಕ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.

ಕೇವಲ‌ ಪತ್ನಿ ಬಳಿ ನಡುರಾತ್ರಿ 500 ರೂ ಸಿಕ್ತು ಅಂತಾ ಪತ್ನಿ, 3 ಮಕ್ಕಳಿಗೆ ಬೆಂಕಿ ಇಟ್ಟು ಪತ್ನಿಯ ಸಾಯಿಸಿದ ಭೂಪ ಜೈಲು ಪಾಲು
ಕೇವಲ‌ ಪತ್ನಿ ಬಳಿ ನಡುರಾತ್ರಿ 500 ರೂ ಸಿಕ್ತು ಅಂತಾ ಪತ್ನಿ, 3 ಮಕ್ಕಳಿಗೆ ಬೆಂಕಿ ಇಟ್ಟು ಪತ್ನಿಯ ಸಾಯಿಸಿದ ಪತಿ ಜೈಲು ಪಾಲು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 14, 2023 | 11:45 AM

ಅದೊಂದು ಸುಂದರ ಸಂಸಾರ ಚೆನ್ನಾಗಿಯೇ ಇತ್ತು.. ಮಡದಿ ಮೂವರು ಮಕ್ಕಳೊಂದಿಗೆ ಸುಖ ದಾಂಪತ್ಯ ನಡೆಸುತ್ತಿದ್ದ ಪತಿಗೆ ಅದೇನಾಯ್ತೋ ಗೊತ್ತಿಲ್ಲಾ, ಹೆಂಡತಿ ಬಳಿ 500 ರೂಪಾಯಿ ಕಾಸು ಸಿಕ್ಕಿದ್ದೇ ಕಾರಣ, ಆ ಸಂಸಾರದಲ್ಲಿ ನಡೆಯಬಾರದು ನಡೆದೇಹೊಯ್ತು.. ಅಷ್ಟಕ್ಕೂ ಆ ಐನೂರು ರೂ ಇವ್ರ ಸಂಸಾರದಲ್ಲಿ ಏನ್ ಮಾಡ್ತು ಹೇಳ್ತೀವಿ.. ಈ ಸ್ಟೋರಿ ಓದಿ. ಇಲ್ಲೊಂದು ನಡೆಯಬಾರದ ಅನಾಹುತ ನಡೆದುಹೋಗಿದೆ.. ಪತಿ ಇಟ್ಟ ದ್ವೇಷದ ಬೆಂಕಿಗೆ ನಾಲ್ಕು ಜೀವಗಳು ನಲುಗಿಹೋಗಿವೆ. ಒಂದು ಜೀವ ಇಹಲೋಕ ತ್ಯಜಿಸಿದ್ದರೆ (Murder), ಇನ್ನುಳಿದ ಮೂವರು ಆಸ್ಪತ್ರೆ ಪಾಲಾಗಿದ್ದಾರೆ. ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ.. ಹೆಂಡತಿ ಬಳಿ ಸಿಕ್ಕ 500 ರೂಪಾಯಿ. ಅನೈತಿಕ ಸಂಬಂಧ ಹೊಂದಿರಬಹುದೆಂದು ಅನುಮಾನಗೊಂಡ ಪತಿ (Illicit Relation) ತನ್ನ ಪತ್ನಿ, ಮೂವರು ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅವರ ಕೊಲೆಗೆ ಯತ್ನಿಸಿದ್ದಾನೆ. ಬೆಂಕಿ ಇಟ್ಟ ಬಳಿಕ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ತುಮಕೂರು (Tumakur) ಜಿಲ್ಲೆಯ ಮಧುಗಿರಿ (Madhugiri) ತಾಲ್ಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ.

ಇದೇ ಗ್ರಾಮದ ರಾಮಾಂಜಿನಪ್ಪ, ಶಾಂತಮ್ಮ ಎನ್ನುವವಳನ್ನ ಮದುವೆಯಾಗಿದ್ದ. ರಾಮಾಂಜಿನಪ್ಪ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ರಾಮಾಂಜಿನಪ್ಪ ಹಾಗೂ ಪತ್ನಿ ಶಾಂತಮ್ಮ ನಡುವೆ ಆಗಾಗ ಜಗಳವಾಗ್ತಿತ್ತಂತೆ. ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸುತ್ತಿದ್ದ ಗಂಡ ರಾಮಾಂಜಿನಪ್ಪ ಆಗಾಗ ಗಲಾಟೆ ಮಾಡ್ತಿದ್ದ ಎನ್ನಲಾಗಿದೆ. ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ರಾಮಾಂಜಿನಪ್ಪಗೆ ಪತ್ನಿ ಶಾಂತಮ್ಮ ಬಳಿ 500 ರೂಪಾಯಿ ಹಣ ಸಿಕ್ಕಿದೆ. ಈ ಹಣ ನಿನಗೆ ಎಲ್ಲಿಂದ ಬಂತು? ಅನ್ನೋ‌ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಗಲಾಟೆ ವಿಕೋಪಕ್ಕೆ ತೆರಳಿ ಹೊಡೆದಾಟ ಕೂಡ ಆಗಿದೆ‌‌‌.

ಆ ಬಳಿಕ ತಡರಾತ್ರಿ ಮನೆಗೆ ಬಂದು ಮಲಗಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ. ಅವನಲ್ಲಿದ್ದ ದ್ವೇಷಾಗ್ನಿ ಅಷ್ಟಕ್ಕೇ ಶಮನಗೊಂಡಿಲ್ಲ. ಬೆಂಕಿ ಹಚ್ಚಿದ ಬಳಿಕ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಗಾಯಾಳುಗಳ ಕಿರುಚಾಟದಿಂದ ಎಚ್ಚೆತ್ತ ಗ್ರಾಮಸ್ಥರು ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಪತ್ನಿ ಶಾಂತಮ್ಮ (49) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಹೆಣ್ಣು ಮಕ್ಕಳಿಗೆ ಸುಟ್ಟು ಗಾಯಗಳಾಗಿವೆ. ಎಲ್ಲರೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತ ಬಾಳಿಗೆ ಕೊಳ್ಳಿಯಿಟ್ಟು ಪರಾರಿಯಾಗಿದ್ದ ಆರೋಪಿ ರಾಮಾಂಜಿನಪ್ಪನನ್ನ ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ. ಕೇವಲ‌ ಪತ್ನಿ ಬಳಿ 500 ರೂಪಾಯಿ ಹಣ ಸಿಕ್ತು ಅಂತಾ ಪತ್ನಿ, ಮೂವರು ಮಕ್ಕಳಿಗೆ ಬೆಂಕಿ ಇಡೋಕೆ ಹೊರಟ ಪತಿ ಇದೀಗ ಜೈಲು ಪಾಲಾಗಿದ್ದಾನೆ.

ವರದಿ: ಮಹೇಶ್ ಟಿವಿ9 ತುಮಕೂರು