ಶ್ರದ್ಧಾ ವಾಕರ್ ಹತ್ಯೆ ನಂತರ ದೆಹಲಿಯ ಜನತೆಯನ್ನು ಬೆಚ್ಚಿ ಬೇಳಿಸುವ ಮತ್ತೊಂದು ಘಟನೆ ನಡೆದಿದೆ. ಫ್ಲೈಓವರ್ ಒಂದರ ಬಳಿಕ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಗೀತಾ ಕಾಲೋನಿಯ ಫ್ಲೈಓವರ್ ಬಳಿ ಮಹಿಳೆಯೊಬ್ಬರ ದೇಹದ ಭಾಗಗಳನ್ನು ಪತ್ತೆ ಮಾಡಲಾಗಿದೆ.
ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಫ್ಲೈಓವರ್ ಬಳಿ ಆರೋಪಿಗಳು ಎಸೆದು ಹೋಗಿದ್ದು, ತನಿಖೆ ಆರಂಭಗೊಂಡಿದೆ.
ದೆಹಲಿಯಲ್ಲಿ ಕೆಲವು ತಿಂಗಳ ಹಿಂದೆ ನಡೆದಿದ್ದ ಶ್ರದ್ಧಾ ವಾಕರ್ ಹತ್ಯೆ ಮತ್ತೊಮ್ಮೆ ನೆನಪಿಗೆ ಬಂದಿದೆ, ಲಿವ್ ಇನ್ ರಿಲೇಷನ್ ಸಂಗಾತಿಯಾಗಿದ್ದ ಅಫ್ತಾಬ್ ಪೂನಾವಾಲಾ ಎಂಬಾತ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ಒಳಗೆ ಶೇಖರಿಸಿಟ್ಟು 18 ದಿನಗಳ ಕಾಲ ನಗರದ ವಿವಿಧೆಡೆ ಎಸೆದು ಬಂದಿದ್ದ.
ಮತ್ತಷ್ಟು ಓದಿ: ರಾಯಚೂರಿನಲ್ಲಿ ಟೊಮ್ಯಾಟೊಗಾಗಿ ಚಾಕು ಇರಿತ; ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಕೆಲವನ್ನು ಸುಟ್ಟಿದ್ದ. ಬಳಿಕ ದೆಹಲಿ ಪೊಲೀಸರು ಆತನನ್ನು ಬಂಧಿಸಿ, ಕೊಲೆ, ಸಾಕ್ಷ್ಯ ನಾಶದ ಆರೋಪ ಹೊರಿಸಿದ್ದರು. ಈಗಲೂ ಇಂಥದ್ದೇ ಘಟನೆ ನಡೆದಿದ್ದು, ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ, ಸಾಕ್ಷ್ಯಗಳನ್ನು ಕಲೆ ಹಾಕಿ, ಆರೋಪಿಯ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ