ರಾಯಚೂರಿನಲ್ಲಿ ಟೊಮ್ಯಾಟೊಗಾಗಿ ಚಾಕು ಇರಿತ; ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಜಿಲ್ಲೆಯ ಮಾನ್ವಿ ಪಟ್ಟಣದ ಮಾರ್ಕೆಟ್​ನಲ್ಲಿ ಟೊಮ್ಯಾಟೊಗಾಗಿ ಚಾಕು ಇರಿದ ಘಟನೆ ನಡೆದಿದೆ. ಇದೇ ಜುಲೈ 8 ರ ತಡರಾತ್ರಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಚಾಕು ಇರಿತದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದೆ.

ರಾಯಚೂರಿನಲ್ಲಿ ಟೊಮ್ಯಾಟೊಗಾಗಿ ಚಾಕು ಇರಿತ; ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಚಾಕು ಇರಿತಕ್ಕೊಳಗಾದವ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 12, 2023 | 1:59 PM

ರಾಯಚೂರು: ಜಿಲ್ಲೆಯ ಮಾನ್ವಿ(Manvi ) ಪಟ್ಟಣದ ಮಾರ್ಕೆಟ್​ನಲ್ಲಿ ಟೊಮ್ಯಾಟೊ(Tomato)ಗಾಗಿ ಚಾಕು ಇರಿದ ಘಟನೆ ನಡೆದಿದೆ. ಇದೇ ಜುಲೈ 8 ರ ತಡರಾತ್ರಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾನ್ವಿ ಪುರಸಭೆ ಮಳಿಗೆಯ ತರಕಾರಿ ಮಾರ್ಕೆಟ್​ನಲ್ಲಿ ರಫಿ ಎಂಬಾತ ಕಾವಲಿಗಾಗಿ ತಳ್ಳುವ ತರಕಾರಿ ಗಾಡಿಯಲ್ಲಿ ಮಲಗಿದ್ದ. ಈ ವೇಳೆ ರಫಿ ಜೊತೆ ಮಾತನಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಸಡನ್​ ಆಗಿ ಕುತ್ತಿಗೆ ಭಾಗಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ.ಆರೋಪಿಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಾಳು ರಫಿಗೆ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಟೊಮ್ಯಾಟೊ ಕಳ್ಳತನಕ್ಕೆ ಯತ್ನಿಸಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಟೊಮ್ಯಾಟೊ ಕಾವಲುಗಾರನಿಗೆ ಚಾಕು ಇರಿತ ಪ್ರಕರಣ; ಸ್ಪಷ್ಟನೆ ನೀಡಿದ ಮಾನ್ವಿ ಪೊಲೀಸ್​

ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಘಟನೆ ಕುರಿತು ‘ ರಫಿ ಎಂಬ ಯುವಕ ಭಾಷಾ ಅನ್ನೋರ ತರಕಾರಿ ಅಂಗಡಿಯಲ್ಲಿ ರಾತ್ರಿ ಕಾವಲು ಕೆಲಸ ಮಾಡ್ತಿದ್ದ. ಟೊಮ್ಯಾಟೊ ದರ ಹೆಚ್ಚಾಗಿರೊದರಿಂದ ಸ್ವಲ್ಪ ಕಟ್ಟುನಿಟ್ಟಾಗಿ ಕೆಲಸ ಮಾಡಲು ಸೂಚಿಸಲಾಗಿತ್ತು. ಈ ಹಿನ್ನೆಲೆ ಘಟನಾ ದಿನ ಆರೋಪಿ ಅಬ್ದುಲ್‌ ಬಂದು ಮಾತನಾಡಿಸಿದಾಗ ರಫಿ ಎದ್ದು ಕುಳಿತಿದ್ದ. ಟೊಮ್ಯಾಟೊ ಕಳ್ಳತನಕ್ಕೆ ಆರೋಪಿ ಹೋಗಿರಲಿಲ್ಲ. ಬದಲಾಗಿ ರಫಿ ಬಳಿ ಬಿಡಿ ಹೇಳಿದ್ದ ಆರೋಪಿ ಅಬ್ದುಲ್. ನಂತರ ಬೀಡಿ ನೀಡದೇ ಇದ್ದಾಗ ಮೊಬೈಲ್ ಕೇಳಿದ್ದನಂತೆ. ಕೊನೆಗೆ ತರಕಾರಿ ಕಾವಲುಗಾರ ರಫಿಗೆ ಚಾಕುವಿನಿಂದ ಇರಿದಿದ್ದಾಗಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

ಟೊಮ್ಯಾಟೊಗೆ ಚಿನ್ನದ ಬೆಲೆ ಹಿನ್ನಲೆ ಹೆಚ್ಚಾದ ಕಳ್ಳರ ಕಾಟ

ಇದೀಗ ಟೊಮ್ಯಾಟೊಗೆ ಹೆಚ್ಚಿನ ಬೆಲೆ ಬಂದ ಹಿನ್ನಲೆ ಕಳ್ಳರ ಕಾಟ ಹೆಚ್ಚಾಗಿದೆ. ಚಿಂತಾಮಣಿ ತಾಲೂಕಿನ ವಿವಿಧೆಡೆ ಸೇರಿದಂತೆ ಅನೇಕ ಕಡೆಗಳಲ್ಲಿ ತೋಟಗಳಿಗೆ ನುಗ್ಗಿ ಟೊಮೆಟೊವನ್ನ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಕಳ್ಳರ ಪಾಲಾಗುವ ಆತಂಕ ಎದುರಾಗಿದೆ. ಈ ಕಾರಣಕ್ಕಾಗಿ ರೈತರು ಕಷ್ಟಪಟ್ಟು ಬೆಳೆದ ಟೊಮ್ಯಾಟೊ ತೋಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಹಗಲು ರಾತ್ರಿ ಎನ್ನದೇ ಕಾಯುತ್ತಿದ್ದಾರೆ.

ಇದನ್ನೂ ಓದಿ:ಏರುತ್ತಲೇ ಇದೆ ಟೊಮ್ಯಾಟೊ ದರ; ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಲ್ಲಿ ಟೊಮ್ಯೊಟೊ ದರ ಎಷ್ಟು ಗೊತ್ತಾ?

ಇನ್ನು ಈ ಕುರಿತು ಮಾತನಾಡಿದ ರೈತರೊಬ್ಬರು ‘14 ಕೆ.ಜಿ ಯ ಟೊಮ್ಯಾಟೊ ಬಾಕ್ಸ್ ಬೆಲೆ 2000 ರೂಪಾಯಿ ಆಗಿದೆ. ಟೊಮ್ಯಾಟೊಗೆ ಚಿನ್ನದ ಬೆಲೆ ಹಿನ್ನಲೆ ರಾತ್ರೊ ರಾತ್ರಿ ಕಳ್ಳರು ಟೊಮ್ಯಾಟೊ ಕೀಳುತ್ತಿದ್ದಾರೆ. ಟೊಮ್ಯಾಟೊ ಗೆ ಇಷ್ಟೊಂದು ಡಿಮ್ಯಾಂಡ್ ಯಾವತ್ತು ಬಂದಿಲ್ಲ. ಬಕ್ರಿದ್ ಹಬ್ಬದ ಸಮಯದಲ್ಲೂ 14 ಕೆ.ಜಿ ಟೊಮ್ಯಾಟೊ ಬಾಕ್ಸ್ 1600 ರೂಪಾಯಿ ಮಾರಾಟವಾಗಿತ್ತು. ಇದೀಗ ಕಳ್ಳರಿಂದ ತೋಟ ರಕ್ಷಣೆಯೇ ದೊಡ್ಡ ಸವಾಲು ಆಗಿದೆ. ಮಕ್ಕಳು ಸಮೇತ ರಾತ್ರಿಯಿಡಿ ತೋಟ ಕಾದಿದ್ದೇವೆ ಎಂದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:50 am, Wed, 12 July 23

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್