AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಟೊಮ್ಯಾಟೊ ತೋಟಕ್ಕೆ ನುಗ್ಗಿದ ಕಾರು, ಇಬ್ಬರ ಸಾವು

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಟೊಮ್ಯಾಟೊ ತೋಟಕ್ಕೆ ನುಗ್ಗಿದ ಕಾರು, ಇಬ್ಬರ ಸಾವು

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Jul 10, 2023 | 5:48 PM

Share

Gownipalli Police: ಮಹೀಂದ್ರಾ XUV ಕಾರು ಹಾಗೂ ಸ್ಪಲೆಂಡರ್ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರ: ಅಪಘಾತಗಳು (Road Accident) ಹೇಗೆಲ್ಲಾ ಸಂಭವಿಸುತ್ತಿವೆ ನೋಡಿ. ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ರಸ್ತೆ ಅಪಘಾತವಾಗಿದೆ. ಅಪಘಾತದ ನಂತರ ಟೊಮ್ಯಾಟೊ ತೋಟಕ್ಕೆ ನುಗ್ಗಿ ನಿಂತಿದೆ ಕಾರು. ಈ ಮಧ್ಯೆ ದ್ವಿಚಕ್ರ ವಾಹನ ಸವಾರರು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ (Death).

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ (Srinivasapur, Kolar) ತಾಡಿಗೋಲ್ ಕ್ರಾಸ್ ನಲ್ಲಿ ಈ ದುರ್ಘಟನೆ ನಡೆದಿದೆ. ಮೃತರು ತಾಡಿಗೋಲ್ ಗ್ರಾಮದ ಶಂಕರಪ್ಪ(38) ಮತ್ತು ಮ್ಯಾಕಲಗಡ್ಡ ಗ್ರಾಮದ ಮುನಿಶಾಮಿ (40) ಎಂದು ಗುರುತಿಸಲಾಗಿದೆ. ಮಹೀಂದ್ರಾ XUV ಕಾರು ಹಾಗೂ ಸ್ಪಲೆಂಡರ್ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು (Gownipalli Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 10, 2023 05:44 PM