Delhi Murder: ಅಪ್ರಾಪ್ತ ಬಾಲಕಿಯನ್ನು 20 ಬಾರಿ ಚಾಕುವಿನಿಂದ ಚುಚ್ಚಿ ಕೊಂದಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ಹೇಗೆ?

|

Updated on: May 30, 2023 | 8:36 AM

ದೆಹಲಿಯಲ್ಲಿ ಭೀಕರ ಕೊಲೆಯೊಂದು ನಡೆದಿದೆ. 16 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬಳಿಕ ಆಕೆಯ ಮೇಲೆ ಕಲ್ಲೊಂದನ್ನು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಈ ಇಡೀ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Delhi Murder: ಅಪ್ರಾಪ್ತ ಬಾಲಕಿಯನ್ನು 20 ಬಾರಿ ಚಾಕುವಿನಿಂದ ಚುಚ್ಚಿ ಕೊಂದಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ಹೇಗೆ?
ಕೊಲೆ ಆರೋಪಿ ಸಾಹಿಲ್
Follow us on

ದೆಹಲಿಯಲ್ಲಿ ಭೀಕರ ಕೊಲೆಯೊಂದು ನಡೆದಿದೆ. 16 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬಳಿಕ ಆಕೆಯ ಮೇಲೆ ಕಲ್ಲೊಂದನ್ನು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಈ ಇಡೀ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ಆತ ಸಿಕ್ಕಿಬಿದ್ದಿದ್ದು ಹೇಗೆ ಎನ್ನುವ ಮಾಹಿತಿ ನೀಡಿದ್ದಾರೆ. ಆತ ಮೊಬೈಲ್ ಸ್ವಿಚ್ಡ್​ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ, ಆರೋಪಿಯು ತನ್ನ ತಂದೆಗೆ ದೂರವಾಣಿ ಕರೆ ಮಾಡಿದ್ದ, ನಂತರ ಆತನ ಮೇಲೆ ಆತನ ಮೇಲೆ ನಿಗಾ ಇಡಲಾಗಿತ್ತು.

ಆರೋಪಿ ಸಾಹಿಲ್ ಬುಲಂದ್​ಶಹರ್​ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಅಲ್ಲಿಗೆ ತಲುಪಿದ ಬಳಿಕ ಆತ ತಂದೆಗೆ ಕರೆ ಮಾಡಿದ್ದ, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹತ್ಯೆಗೀಡಾದ ಶಹಬಾದ್ ಡೈರಿ ಪ್ರದೇಶದ ಜೆ.ಜೆ. ಕಾಲೊನಿಯ ಯುವತಿ ಎಂದು ಹೇಳಲಾಗಿದ್ದು, ರಸ್ತೆ ಬದಿ ನಡೆದುಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿ, ಹಲವು ಬಾರಿ ಚುಚ್ಚಿ ಹತ್ಯೆ ಮಾಡಿದ್ದಾನೆ. ಹತ್ಯೆಗೀಡಾದ ಯುವತಿ ಜೊತೆ ಆರೋಪಿಯು ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ದ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಓದಿ: Delhi murder: ದೆಹಲಿಯಲ್ಲಿ 16ರ ಹರೆಯದ ಬಾಲಕಿಯ ಬರ್ಬರ ಕೊಲೆ ಮಾಡಿದ ಆರೋಪಿ ಸಾಹಿಲ್ ಬಂಧನ

ಸ್ನೇಹಿತೆಯ ಮಗನ ಬರ್ತ್‌ಡೇ ಪಾರ್ಟಿ ವಿಚಾರವಾಗಿ ಶನಿವಾರ ಮತ್ತು ಭಾನುವಾರ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಅದೇ ವಿಚಾರವಾಗಿ ಯುವಕ, ಯುವತಿಗೆ ಚುಚ್ಚಿದ್ದಾನೆ. ಬಳಿಕ, ಕಲ್ಲಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. 20ಕ್ಕೂ ಅಧಿಕ ಬಾರಿ ಯುವತಿಗೆ ಇರಿಯಲಾಗಿದೆ ಎಂದು ದೆಹಲಿ ಉತ್ತರ ಹೊರವಲಯದ ಹೆಚ್ಚುವರಿ ಡಿಸಿಪಿ ರಾಜಾ ಬಂತಿಯಾ ತಿಳಿಸಿದ್ದಾರೆ.

ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃತ ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 302ರಡಿ ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ವಿವರವಾದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಪೊಲೀಸರು ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆಕೆ ಕೈಯಲ್ಲಿ ಪ್ರವೀಣ್​ ಎನ್ನುವ ಹಚ್ಚೆ ಇತ್ತು ಎಂದು ಹೇಳಲಾಗುತ್ತಿದೆ. ಆರೋಪಿ ಸಾಹಿಲ್ ಮತ್ತು ಬಾಲಕಿ ಕಳೆದ 3 ವರ್ಷಗಳಿಂದ ಸ್ನೇಹಿತರಾಗಿದ್ದರು. ಸಂತ್ರಸ್ತೆ ಸಾಹಿಲ್‌ನಿಂದ ಬೇರೆಯಾಗಲು ಬಯಸಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.   ಸ್ಥಳದಲ್ಲಿ ಹಲವಾರು ಸ್ಥಳೀಯರು ಇರುವುದನ್ನು ಕಾಣಬಹುದು, ಎಲ್ಲರೂ ಮಾನವೀಯತೆ ಮರೆತವರಂತೆ ಕಂಡರು. ಯಾರೂ ಕೂಡ ಮಧ್ಯಪ್ರವೇಶಿಸಿ ಹತ್ಯೆಯನ್ನು ತಡೆಯುವ ಪ್ರಯತ್ನ ಮಾಡಿಲ್ಲ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ