Bengaluru News| ಮದುವೆಯಾಗಲು ನಿರಾಕರಿಸಿದ್ದ ಪ್ರಿಯಕರನನ್ನ ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ ಮಹಿಳೆ

ಪ್ರೀತಿ ಮಾಡಿ ಬೇರೆ ಯುವತಿ ಜೊತೆ ಮದುವೆಯಾಗಿ ಬಂದಿದ್ದ ಪ್ರಿಯಕರನ್ನು ಮಹಿಳೆ ಮನೆಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru News| ಮದುವೆಯಾಗಲು ನಿರಾಕರಿಸಿದ್ದ ಪ್ರಿಯಕರನನ್ನ ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ ಮಹಿಳೆ
Follow us
ರಮೇಶ್ ಬಿ. ಜವಳಗೇರಾ
|

Updated on:May 30, 2023 | 9:18 AM

ಬೆಂಗಳೂರು: ಮದುವೆಯಾಗಲು(Marriage) ನಿರಾಕರಿಸಿದ್ದಕ್ಕೆ ಪ್ರಿಯತಮನ (Lover) ಮೇಲೆ ಮಹಿಳೆಯೊಬ್ಬರು ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನ(Bengaluru) ಚಾಮರಾಜಪೇಟೆಯಲ್ಲಿ ನಡೆದಿದೆ. ಮೇ 25 ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ವಿಜಯಶಂಕರ ಆರ್ಯ ಹಾಗೂ ಅಫ್ಜಲ್ಪುರದ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಎನ್ನುವ ಮಹಿಳೆ ಪರಿಚಯವಾಗಿದ್ದು, ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಆದ್ರೆ, ಇದೀಗ ವಿಜಯ್​ ಜ್ಯೀತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಜ್ಯೋತಿ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ್ದಾಳೆ. ಇದರಿಂದ ಪ್ರಿಯಕರ ವಿಜಯಶಂಕರಗೆ ಗಂಭಿರ ಗಾಯಗೊಂಡಿದ್ದಾನೆ.

ಇದನ್ನೂ ಓದಿ: Shivamogga News: ಮುಸ್ಲಿಂ ಗೆಳತಿಯನ್ನು ಬೈಕ್‌ನಲ್ಲಿ ಡ್ರಾಪ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಘಟನೆ ಹಿನ್ನೆಲೆ

ಕಲಬುರಗಿ ಮೂಲದ ವಿಜಯಶಂಕರ ಆರ್ಯ ಹಾಗೂ ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಜ್ಯೋತಿ ಬೆಂಗಳೂರಿನಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಚಾಮರಾಜಪೇಟೆಯ ಬೋರೋ ಕ್ಲಾಥಿಂಗ್​ನಲ್ಲಿ ಫೋಟೋ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ ವಿಜಯ್​, ಚಾಮರಾಜಪೇಟೆಯಲ್ಲಿನ ತನ್ನ ಬಾಡಿಗೆ ರೂಂ ಜ್ಯೋತಿಗರ ಬಿಟ್ಟು ಕೊಟ್ಟು, ತನ್ನ ಸ್ನೇಹಿತನ ಜೊತೆ ಬೊಮ್ಮಸಂದ್ರದ ಹೆರಾಂಡಳ್ಳಿಯಲ್ಲಿ ವಾಸವಾಗಿದ್ದ. ಇನ್ನು  ಇನ್ನು ಜ್ಯೋತಿ ಬೃಂದಾವನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು.​  ಸುಮಾರು 4 ವರ್ಷದ ಹಿಂದೆ ಇಬ್ಬರ ಪರಿಚಯವಾಗಿದ್ದು, ಜ್ಯೋತಿ ತನಗೆ ಮದುವೆ ಆಗಿರುವುದನ್ನು ಮುಚ್ಚಿಟ್ಟಿದ್ದಳು. ಹೀಗೆ ಇಬ್ಬರ ನಡುವೆ ಲವ್ವಿ ಡವ್ವಿ ಮುಂದುವರೆದಿದ್ದು, 2 ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿರುವ ವಿಚಾರ ವಿಜಯ್​ಗೆ ಗೊತ್ತಾಗಿದೆ.

ನಂತರ ಜ್ಯೋತಿಯನ್ನು ದೂರ ಮಾಡಲು ಶುರು ಮಾಡಿದ್ದಾನೆ. ಹೀಗೆ ಮೇ 5ರಂದು ಮಾತನಾಡಬೇಕು ಬಾ ಎಂದು ಜ್ಯೋತಿ ಮನೆಗೆ ಕರೆಯಿಸಿಕೊಂಡಿದ್ದಾಳೆ. ಬಳಿಕ ನಮ್ಮಬ್ಬರಿಗೂ ಇಬ್ಬರಿಗೂ ಮದುವೆಯಾಗಿದೆ. ಇನ್ನು ಮುಂದೆ ಇದೆಲ್ಲಾ ಬೇಡ. ಇಲ್ಲಿಗೆ ನಿಲ್ಲಿಸೋಣ ಎಂದು ವಿಜಯ್, ಜ್ಯೋತಿಗೆ ಹೇಳಿದ್ದಾನೆ. ಇದರಿಂದ ಜ್ಯೋತಿ ಆಕ್ರೋಶಗೊಂಡಿದ್ದಳು. ಆದರೂ ಸುಮ್ಮನಿದ್ದಳು. ನಂತರ ವಿಜಯ್ ಯಾಕೋ ಮೈಗೆ ಹುಷಾರಿಲ್ಲ ಡ್ರಿಪ್ಸ್ ಹಾಕು ಎಂದು ಹೇಳಿ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದ.ಜ್ಯೋತಿಯು ಸಹ ವಿಜಯ್​ಗೆ ಡ್ರಿಪ್ಸ್ ಹಾಕಿದ್ದಾಳೆ. ನಂತರ ಮೇ 26ರ ಬೆಳಗಿನ ಜಾವ 4 ರಿಂದ 5 ಗಂಟೆಗೆ ಬಿಸಿ ನೀರು ಎರಚಿದ್ದಾಳೆ.

ಅಲ್ಲದೇ ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ನಂತರ ರೂಮಿನೊಳಗೆ ವಿಜಯ್​ ತೀವ್ರವಾಗಿ ಗಾಯಗೊಂಡು ಕಿರುಚಾಡುವುದನ್ನು ಮನೆ ಮಾಲೀಕ ಸೈಯದ್ ಕೇಳಿಸಿಕೊಂಡು ಓಡಿ ಹೋಗಿ ಭೀಮಶಂಕರನನ್ನು ರಕ್ಷಿಸಿ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದಾನೆ.

ಬಿಸಿ ನೀರು ಬಿದ್ದು ಶೇಕಡಾ 40-50 ರಷ್ಟು ಗಾಯಗಳಾಗಿದ್ದು, ಈ ಬಗ್ಗೆ ವಿಜಯ್, ಜ್ಯೋತಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಎಫ್​ಐಆರ್ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.

Published On - 8:59 am, Tue, 30 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ