ಇಎಂಐ ಕಟ್ಟಲು ಸಾಧ್ಯವಾಗಿಲ್ಲವೆಂದು ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ, ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ

|

Updated on: Sep 26, 2023 | 2:02 PM

ಮನೆಯ ಖರ್ಚನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು, ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ, ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆರೋಪಿ ಹೊಸ ಬೈಕ್ ತೆಗೆದುಕೊಂಡಿದ್ದ ಅದರ ಇಎಂಐ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಸಚಿನ್ ತನ್ನ ಸ್ನೇಹಿತನನ್ನು ಅಪಹರಿಸಿ 2 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟು, ಸುಲಿಗೆ ಮಾಡಲು ಸಂಚು ರೂಪಿಸಿದ್ದ. ಸಚಿನ್​ಗೆ ಎರಡು ತಿಂಗಳ ಮಗುವಿದ್ದು, ಕುಟುಂಬ ನಿರ್ವಹಣೆ ತೀರಾ ಕಷ್ಟವಾಗಿತ್ತು. ಸಚಿನ್‌ಗೆ 2018 ರಿಂದ ನಿತಿನ್ ಪರಿಚಯವಿತ್ತು.

ಇಎಂಐ ಕಟ್ಟಲು ಸಾಧ್ಯವಾಗಿಲ್ಲವೆಂದು ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ, ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ
ಸಚಿನ್
Follow us on

ಮನೆಯ ಖರ್ಚನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು, ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ, ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆರೋಪಿ ಹೊಸ ಬೈಕ್ ತೆಗೆದುಕೊಂಡಿದ್ದ ಅದರ ಇಎಂಐ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಸಚಿನ್ ತನ್ನ ಸ್ನೇಹಿತನನ್ನು ಅಪಹರಿಸಿ 2 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟು, ಸುಲಿಗೆ ಮಾಡಲು ಸಂಚು ರೂಪಿಸಿದ್ದ. ಸಚಿನ್​ಗೆ ಎರಡು ತಿಂಗಳ ಮಗುವಿದ್ದು, ಕುಟುಂಬ ನಿರ್ವಹಣೆ ತೀರಾ ಕಷ್ಟವಾಗಿತ್ತು. ಸಚಿನ್‌ಗೆ 2018 ರಿಂದ ನಿತಿನ್ ಪರಿಚಯವಿತ್ತು.

ಸುಮಾರು 15 ದಿನಗಳ ಹಿಂದೆ ಸಚಿನ್ ತನ್ನ ಯೋಜನೆಯನ್ನು ಮತ್ತೊಬ್ಬ ಸ್ನೇಹಿತ ಅರುಣ್ ಜೊತೆ ಚರ್ಚಿಸಿದ್ದ. ನಿತಿನ್ ಕುಟುಂಬವು ಈಶಾನ್ಯ ದೆಹಲಿಯಲ್ಲಿ ಮನೆ ಹೊಂದಿದ್ದು, 2 ಲಕ್ಷವನ್ನು ಸುಲಭವಾಗಿ ಕೊಡಬಹುದೆಂದು ನಂಬಿದ್ದರು. ಸೆಪ್ಟೆಂಬರ್ 19 ರಂದು ಸಚಿನ್ ನಿತಿನ್​ನನ್ನು ಸಚಿನ್ ಮನೆಗೆ ಕರೆದಿದ್ದ, ಅಲ್ಲಿ ಅರುಣ್ ಆಗಲೇ ಹೋಗಿದ್ದ.

ಗಾಜಿಯಾಬಾದ್‌ಗೆ ತೆರಳಿ ರೈಲು ಹಳಿಗಳ ಬಳಿ ಮದ್ಯ ಸೇವಿಸಿದ್ದರು. ದೆಹಲಿಗೆ ವಾಪಸಾಗುತ್ತಿದ್ದಾಗ ಅರುಣ್ ಮತ್ತು ಸಚಿನ್ ನಿತಿನ್ ನನ್ನು ಚಾಕುವಿನಿಂದ ಇರಿದು ಕೊಂದು ಶವವನ್ನು ಪೊದೆಯಲ್ಲಿ ಎಸೆದಿದ್ದರು.

ಮತ್ತಷ್ಟು ಓದಿ: ತನ್ನ ಕಾಲೇಜಿನ ರಹಸ್ಯ ಗೊತ್ತಾಗೋಯ್ತು ಎಂದು ತಾಯಿಯನ್ನು 30 ಬಾರಿ ಇರಿದು ಕೊಂದ ಮಗಳು

ಮರುದಿನ ನಿತಿನ್ ಸಹೋದರಿಗೆ ಕರೆ ಮಾಡಿ 2 ಲಕ್ಷ ರೂ. ಕೊಡುವಂತೆ ಹೇಳಿ ಅಣ್ಣನನ್ನು ಅಪಹರಿಸಿದ್ದಾರೆ ಎಂದು ಸಚಿನ್ ಮಾಹಿತಿ ನೀಡಿದ್ದ.
ನಿತಿನ್ ಕುಟುಂಬವು ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿತ್ತು, ಈ ವಿಷಯ ತಿಳಿದು ಸಚಿನ್ ಊರು ಬಿಡಲು ನಿರ್ಧರಿಸಿದ್ದ.

ರಾಜಸ್ಥಾನದ ಗಂಗಾ ನಗರದಿಂದ ಸಚಿನ್‌ನನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶದ ಅರುಣ್‌ನನ್ನು ಹಿಡಿಯಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ನಿತಿನ್ ಅವರ ದೇಹ ಗಾಜಿಯಾಬಾದ್​ನ ಪೊದೆಯಲ್ಲಿ ಪತ್ತೆಯಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ