ತನ್ನ ಕಾಲೇಜಿನ ರಹಸ್ಯ ಗೊತ್ತಾಗೋಯ್ತು ಎಂದು ತಾಯಿಯನ್ನು 30 ಬಾರಿ ಇರಿದು ಕೊಂದ ಮಗಳು
ತನ್ನ ಕಾಲೇಜಿನ ರಹಸ್ಯ ತಾಯಿಗೆ ಗೊತ್ತಾಗಿಹೋಯಿತು ಎಂದು ಹೆತ್ತ ತಾಯಿಯನ್ನೇ ಮಗಳು 30 ಬಾರಿ ಇರಿದು ಕೊಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಆಕೆಯನ್ನು ಕಾಲೇಜಿನಿಂದ ಹೊರಹಾಕಿದ್ದರು, ಆ ವಿಚಾರ ಹೇಗೋ ತಾಯಿಗೆ ತಿಳಿದುಬಿಟ್ಟಿತ್ತು, ಈ ಕುರಿತು ತಾಯಿ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಗಳು ತಾಯಿಯನ್ನು ಹತ್ಯೆ ಮಾಡಿದ್ದಾಳೆ.

2020ರಲ್ಲಿ ಈ ಘಟನೆ ನಡೆದಿತ್ತು, ಇದೀಗ ಸೆಪ್ಟೆಂಬರ್ 28ರಂದು ಸಿಡ್ನಿ ಪೊವೆಲ್ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಲಿದೆ. ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿ ಪೊವೆಲ್ ಅನ್ನು ತಪ್ಪಿತಸ್ಥೆ ಎಂದು ಕೋರ್ಟ್ ಘೋಷಿಸಿದೆ.
2020ರ ಮಾರ್ಚ್ 3 ರಂದು ರಕ್ತಸಿಕ್ತ ಸ್ಥಿತಿಯಲ್ಲಿ ಬ್ರೆಂಡಾ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಪೊವೆಲ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು, ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದಾಗ, ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ.
ಮತ್ತಷ್ಟು ಓದಿ:ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಹತ್ಯೆ ಮಾಡಿ ಬಾವಿಗೆ ಎಸೆದಿದ್ದ ಆರೋಪಿಗಳ ಬಂಧನ
ಒಂದು ಬಾರಿಯಲ್ಲ 30 ಬಾರಿ ತಾಯಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ, ಆಕೆಯ ಉದ್ದೇಶ ಸ್ಪಷ್ಟವಾಗಿತ್ತು ಎಂದು ನ್ಯಾಯಾಲಯ ಹೇಳಿದೆ, ಪೊವೆಲ್ ಶಿಕ್ಷೆಯನ್ನು ಸೆಪ್ಟೆಂಬರ್ 28ರಂದು ನಿಗದಿಪಡಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ