ದೆಹಲಿ: ಸಣ್ಣ ವಾದ, ಕೋಪದಲ್ಲಿ ಹೋಂಗಾರ್ಡ್​ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪಕ್ಕದ ಮನೆಯವರು

|

Updated on: Aug 21, 2023 | 11:45 AM

ಯಾವುದೋ ಸಣ್ಣ ವಿಚಾರಕ್ಕೆ ಹೋಂಗಾರ್ಡ್ ಪಕ್ಕದ ಮನೆಯವರ ನಡುವೆ ವಾಗ್ವಾದ ನಡೆದಿದ್ದು, ಕೋಪದಲ್ಲಿ ಹೋಂಗಾರ್ಡ್​ನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.​ 50 ವರ್ಷದ ಧರಂಪಾಲ್ ಕಶ್ಯಪ್ ಅವರು ತಮ್ಮ ಶೌಚಾಲಯದ ನವೀಕರಣ ಕಾಮಗಾರಿ ಮಾಡುತ್ತಿದ್ದಾರೆ, ನಿರ್ಮಾಣ ಸಾಮಗ್ರಿಯನ್ನು ಫರಿದಾಬಾದ್‌ನ ಗರ್ಖೇಡಾದಲ್ಲಿರುವ ಅವರ ಮನೆಯ ಹೊರಗೆ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ: ಸಣ್ಣ ವಾದ, ಕೋಪದಲ್ಲಿ ಹೋಂಗಾರ್ಡ್​ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪಕ್ಕದ ಮನೆಯವರು
ದೆಹಲಿ ಪೊಲೀಸ್ ಹೋಂಗಾರ್ಡ್ಸ್​
Follow us on

ಯಾವುದೋ ಸಣ್ಣ ವಿಚಾರಕ್ಕೆ ಹೋಂಗಾರ್ಡ್ ಪಕ್ಕದ ಮನೆಯವರ ನಡುವೆ ವಾಗ್ವಾದ ನಡೆದಿದ್ದು, ಕೋಪದಲ್ಲಿ ಹೋಂಗಾರ್ಡ್​ನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.​ 50 ವರ್ಷದ ಧರಂಪಾಲ್ ಕಶ್ಯಪ್ ಅವರು ತಮ್ಮ ಶೌಚಾಲಯದ ನವೀಕರಣ ಕಾಮಗಾರಿ ಮಾಡುತ್ತಿದ್ದಾರೆ, ನಿರ್ಮಾಣ ಸಾಮಗ್ರಿಯನ್ನು ಫರಿದಾಬಾದ್‌ನ ಗರ್ಖೇಡಾದಲ್ಲಿರುವ ಅವರ ಮನೆಯ ಹೊರಗೆ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಸ್ತುವು ಅವರ ಮನೆಯ ಉದ್ದಕ್ಕೂ ಹರಡಿಕೊಂಡಿದ್ದರಿಂದ ಪಕ್ಕದ ಮನೆಯ ಸುನೀಲ್ ಮತ್ತು ಅವರ ಮಗ ಅಜಯ್ ಕೋಪಗೊಂಡಿದ್ದರು. ಸುನೀಲ್ ನಿನ್ನೆ ಸಂಜೆ ಹೋಮ್‌ಗಾರ್ಡ್‌ಗೆ ವಸ್ತುಗಳನ್ನು ರಸ್ತೆಯಿಂದ ತೆಗೆಯುವಂತೆ ಕೇಳಿದ್ದಾರೆ ಆದರೆ ಧರಂಪಾಲ್​ ಅವರ ಮಾತು ಕೇಳಲಿಲ್ಲ.

ವಾದ ಹೆಚ್ಚಾಗಿ ಹಲ್ಲೆ ನಡೆಸಿದ್ದಾರೆ, ಸುನೀಲ್ ಮತ್ತು ಅವರ ಮಗ ಅಜಯ್ ಚಾಕುವಿನಿಂದ ಧರಂಪಾಲ್ ಅವರ ಎದೆಗೆ ಚಾಕು ಹಾಕಿದ್ದಾರೆ. ಧರಂಪಾಲ್ ನೆಲಕ್ಕೆ ಬೀಳುತ್ತಿದ್ದಂತೆ ಸುನೀಲ್ ಮತ್ತು ಅಜಯ್ ಸ್ಥಳದಿಂದ ಪರಾರಿಯಾಗಿದ್ದಾರೆ.

ಮತ್ತಷ್ಟು ಓದಿ: ಮಥುರಾದಲ್ಲಿ 5 ವರ್ಷದ ಬಾಲಕನನ್ನು ನೆಲಕ್ಕೆ ಎಸೆದು ಕೊಂದ ವೃದ್ಧ; ವಿಡಿಯೊ ವೈರಲ್

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಬರುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತಂದೆ-ಮಗನನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ