AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi: ಕರ್ಕಶ ಸಂಗೀತ ನಿಲ್ಲಿಸಲು ಕೇಳಿದ್ದಕ್ಕೆ ಗರ್ಭಿಣಿಯ ಮೇಲೆ ನಡೆಯಿತು ಗುಂಡಿನ ದಾಳಿ, ಸ್ಥಳದಲ್ಲೇ ಗರ್ಭಪಾತ

ಕರ್ಕಶ ಸಂಗೀತವನ್ನು ನಿಲ್ಲಿಸಲು ಕೇಳಿದ್ದಕ್ಕೆ ಗರ್ಭಿಣಿಯೊಬ್ಬಳ ಮೇಲೆ ಗುಂಡು ಹಾರಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ, ಜೋರಾಗಿ ಮ್ಯೂಸಿಕ್ ಹಾಕಿಕೊಳ್ಳಬೇಡಿ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳಿ ತಡೆದಿದ್ದಕ್ಕೆ ಆಕೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ, ಆ ಸಮಯದಲ್ಲಿ ಮಹಿಳೆ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಗರ್ಭಪಾತವಾಗಿದೆ

Delhi: ಕರ್ಕಶ ಸಂಗೀತ ನಿಲ್ಲಿಸಲು ಕೇಳಿದ್ದಕ್ಕೆ ಗರ್ಭಿಣಿಯ ಮೇಲೆ ನಡೆಯಿತು ಗುಂಡಿನ ದಾಳಿ, ಸ್ಥಳದಲ್ಲೇ ಗರ್ಭಪಾತ
ಗರ್ಭಿಣಿ
ನಯನಾ ರಾಜೀವ್
|

Updated on:Apr 04, 2023 | 11:25 AM

Share

ಕರ್ಕಶ ಸಂಗೀತವನ್ನು ನಿಲ್ಲಿಸಲು ಕೇಳಿದ್ದಕ್ಕೆ ಗರ್ಭಿಣಿಯೊಬ್ಬಳ ಮೇಲೆ ಗುಂಡು ಹಾರಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ, ಜೋರಾಗಿ ಮ್ಯೂಸಿಕ್ ಹಾಕಿಕೊಳ್ಳಬೇಡಿ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳಿ ತಡೆದಿದ್ದಕ್ಕೆ ಆಕೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ, ಆ ಸಮಯದಲ್ಲಿ ಮಹಿಳೆ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಗರ್ಭಪಾತವಾಗಿದೆ.

ಮಹಿಳೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯು ದೆಹಲಿಯ ಸಿರಸ್ಪುರ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಉಪ ಪೊಲೀಸ್ ಕಮಿಷನರ್ ರವಿಕುಮಾರ್ ಸಿಂಗ್ ಈ ಕುರಿತು ಮಾತನಾಡಿ, ಮಧ್ಯರಾತ್ರಿ ಸುಮಾರು 12.15ರ ಸುಮಾರಿಗೆ ಪಿಸಿಆರ್​ಗೆ ಕರೆ ಬಂದಿದ್ದು, ಸಿರಾಸ್​ಪುರದಲ್ಲಿ ಗುಂಡಿನ ದಾಳಿ ಆಗಿದೆ ಎಂದು ಮಾಹಿತಿ ನೀಡಲಾಗಿತ್ತು.

ಮತ್ತಷ್ಟು ಓದಿ: Umesh Pal Murder Case: ಉಮೇಶ್ ಪಾಲ್​ ಮೇಲೆ ಗುಂಡು ಹಾರಿಸಿದ್ದ ಆರೋಪಿ ಪೊಲೀಸ್ ಎನ್​ಕೌಂಟರ್​ನಲ್ಲಿ ಸಾವು

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮಹಿಳೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ, ಮಹಿಳೆಯ ಗಂಟಲಿಗೆ ಗುಂಡು ತಗುಲಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆ ರಂಜು ಮನೆ ಪಕ್ಕದಲ್ಲಿ ಸಮಾರಂಭವೊಂದು ನಡೆಯುತ್ತಿದ್ದು, ರಂಜು ಗರ್ಭಿಣಿಯಾಗಿದ್ದ ಕಾರಣ ಆ ಕರ್ಕಶ ಶಬ್ಧವನ್ನು ತಡೆದುಕೊಳ್ಳಲು ಕಷ್ಟವಾಗುತ್ತಿತ್ತು, ಹೀಗಾಗಿ ಸೌಂಡ್ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಸಿಟ್ಟಿಗೆದ್ದ ಹರೀಶ್ ಎಂಬುವವರು ಪಿಸ್ತೂಲ್​ನಿಂದ ಮಹಿಳೆ ಮೇಲೆ ಗುಂಡು ಹಾರಿಸಿದ್ದಾರೆ.

ಗುಂಡು ಗಂಟಲಿಗೆ ತಗುಲಿದ್ದು ನೆಲಕ್ಕೆ ಕುಸಿದುಬಿದ್ದಿದ್ದಾರೆ, ಪರಿಣಾಮ ಗರ್ಭಪಾತವಾಗಿದೆ. ಇಬ್ಬರ ವಿರುದ್ಧವೂ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹರೀಶ್ ಡೆಲಿವರಿ ಬಾಯ್ ಆಗಿದ್ದು, ಮತ್ತೊಬ್ಬ ಅಮಿತ್ ಮೊಬೈಲ್ ರಿಪೇರಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:20 am, Tue, 4 April 23