ದೆಹಲಿ: ಚಾಕುವಿನಿಂದ ಇರಿದು ಅಪ್ರಾಪ್ತರಿಂದ ಯುವಕನ ಬರ್ಬರ ಹತ್ಯೆ, ಜೀವ ಹೋಗುವವರೆಗೂ ದೇಹವನ್ನು ಮೃಗಗಳಂತೆ ಎಳೆದಾಡಿದ್ರು

|

Updated on: Jan 10, 2024 | 3:26 PM

ಮೂವರು ಅಪ್ರಾಪ್ತ ಬಾಲಕರು ಸೇರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಬಾದರ್‌ಪುರ ಪ್ರದೇಶದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಐವರು ಬಾಲಕರು ವ್ಯಕ್ತಿಯೊಬ್ಬನನ್ನು ಹತ್ಯೆಗೈದಿದ್ದಾರೆ. ಚಾಕುವಿನಿಂದ 25 ಸಲ ಇರಿದ ಬಳಿಕವೂ ಉಸಿರು ನಿಲ್ಲುವವರೆಗೂ ಯುವಕನಿಗೆ ಥಳಿಸಿ ರಸ್ತೆಯ ತುಂಬ ಎಳೆದಾಡಿದ್ದಾರೆ.

ದೆಹಲಿ: ಚಾಕುವಿನಿಂದ ಇರಿದು ಅಪ್ರಾಪ್ತರಿಂದ ಯುವಕನ ಬರ್ಬರ ಹತ್ಯೆ, ಜೀವ ಹೋಗುವವರೆಗೂ ದೇಹವನ್ನು ಮೃಗಗಳಂತೆ ಎಳೆದಾಡಿದ್ರು
ಸಾಂದರ್ಭಿಕ ಚಿತ್ರ
Image Credit source: The Statesman
Follow us on

ಮೂವರು ಅಪ್ರಾಪ್ತ ಬಾಲಕರು ಸೇರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಬಾದರ್‌ಪುರ ಪ್ರದೇಶದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಐವರು ಬಾಲಕರು ವ್ಯಕ್ತಿಯೊಬ್ಬನನ್ನು ಹತ್ಯೆಗೈದಿದ್ದಾರೆ.
ಚಾಕುವಿನಿಂದ 25 ಸಲ ಇರಿದ ಬಳಿಕವೂ ಉಸಿರು ನಿಲ್ಲುವವರೆಗೂ ಯುವಕನಿಗೆ ಥಳಿಸಿ ರಸ್ತೆಯ ತುಂಬ ಎಳೆದಾಡಿದ್ದಾರೆ.

ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ, ಅವರನ್ನು ಕಂಡ ಆರೋಪಿಗಳು ತಕ್ಷಣ ಅಲ್ಲಿಂದ ಓಡಿಹೋಗಿದ್ದಾರೆ. ಪೊಲೀಸರು ಐವರನ್ನೂ ಬೆನ್ನಟ್ಟಿ ಕಸ್ಟಡಿಗೆ ಪಡೆದಿದ್ದಾರೆ. ಮೃತರನ್ನು ಗೌರವ್(22) ಎಂದು ಗುರುತಿಸಲಾಗಿದೆ.

ಅರ್ಮಾನ್ ಅಲಿಯಾಸ್ ಕುರು ತನ್ನ ಮೂವರು ಅಪ್ರಾಪ್ತ ಸ್ನೇಹಿತರೊಂದಿಗೆ ಗೌರವ್‌ನನ್ನು 25 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಲ್ಲಿಗೆ ನಿಲ್ಲಲಿಲ್ಲ, ಇದಾದ ನಂತರ ಪೊಲೀಸರು ಬರುವವರೆಗೂ ಆರೋಪಿಗಳು ಗೌರವ್ ಶವವನ್ನು ಸುಮಾರು 60-70 ಮೀಟರ್ ವರೆಗೆ ಎಳೆದೊಯ್ದಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಓಡಲು ಆರಂಭಿಸಿದ ಆತ ಸಿಕ್ಕಿಬಿದ್ದಿದ್ದಾನೆ.

ಮತ್ತಷ್ಟು ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಹಣ ಬೇಕೆಂದು ಕಿಡ್ನಾಪ್ ಮಾಡಿ ಕೊಲೆ; ಗೋವಾಗೆ ಹೋಗಿ ಮೋಜು-ಮಸ್ತಿ ಮಾಡಿದ್ದ ಆರೋಪಿಗಳು ಅರೆಸ್ಟ್

ಪೊಲೀಸರ ಪ್ರಕಾರ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ ಮೃತ ಗೌರವ್ ಮತ್ತು ಮೂವರು ಆರೋಪಿಗಳು ಪರಸ್ಪರ ಪರಿಚಯವಿದ್ದರು. ರಾತ್ರಿ ಈ ಮೂವರು ಆರೋಪಿಗಳು ಗೌರವ್ ಅವರೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ಅರ್ಮಾನ್ ಮತ್ತು ಇತರ ಇಬ್ಬರು ಅಪ್ರಾಪ್ತ ಸಹಚರರು ಗೌರವ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಅಪರಾಧ ಎಸಗಿದ ಬಳಿಕ ಮೂವರು ಆರೋಪಿಗಳು ಗೌರವ್‌ನ ಮೃತದೇಹವನ್ನು ಎಳೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಗಸ್ತು ತಿರುಗುತ್ತಿದ್ದ ಕಾನ್ಸ್‌ಟೇಬಲ್ ನಟವರ್ ಸಿಂಗ್ ಅದನ್ನು ನೋಡಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್ ನಟವರ್ ಸಿಂಗ್‌ಗೆ ಹೊಡೆದು ಗಾಯಗೊಳಿಸಿದ್ದಾರೆ.

ಇದಾದ ನಂತರ ಬಾದರ್‌ಪುರ ಠಾಣೆ ಪ್ರಭಾರಿ ಈಶ್ವರ್ ಸಿಂಗ್, ಹವಾಲ್ದಾರ್ ರಾಜಾರಾಮ್, ಲಕ್ಷ್ಮೀ ನಾರಾಯಣ್, ಕಾನ್‌ಸ್ಟೆಬಲ್ ಪವನ್ ಮತ್ತು ರಾಜೀವ್ ಈ ಮೂವರನ್ನು ಬಹಳ ದೂರ ಹಿಂಬಾಲಿಸಿ ಎಲ್ಲರನ್ನೂ ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ