Delhi Murder ಶ್ರದ್ಧಾಳನ್ನು ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲಾ ಈ ಒಂದು ಸುಳ್ಳಿನಿಂದ ಸಿಕ್ಕಿಬಿದ್ದ

| Updated By: ರಶ್ಮಿ ಕಲ್ಲಕಟ್ಟ

Updated on: Nov 16, 2022 | 10:33 PM

ಈ ತಿಂಗಳ ಆರಂಭದಲ್ಲಿ ಆತನನ್ನು ಮತ್ತೆ ವಿಚಾರಣೆಗೆ ಕರೆಯಲಾಯಿತು, ಆಕೆಯ ಪಾಸ್‌ವರ್ಡ್‌ಗಳನ್ನು ಹೊಂದಿದ್ದರಿಂದ ಬ್ಯಾಂಕ್ ವರ್ಗಾವಣೆ ಮಾಡಿದ್ದೇನೆ ಎಂದು ಆತ ಪೊಲೀಸರಿಗೆ ತಿಳಿಸಿದ್ದ. ಅಫ್ತಾಬ್ ಅವಳ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುತ್ತಿದ್ದ.

Delhi Murder ಶ್ರದ್ಧಾಳನ್ನು ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲಾ ಈ ಒಂದು ಸುಳ್ಳಿನಿಂದ ಸಿಕ್ಕಿಬಿದ್ದ
ಅಫ್ತಾಬ್ ಪೂನಾವಾಲಾ - ಶ್ರದ್ಧಾ
Follow us on

ದೆಹಲಿ: ಆರು ತಿಂಗಳ ಹಿಂದೆ ತನ್ನ ಲಿವ್‌ ಇನ್‌ ಸಂಗಾತಿ(live-in partner) ಶ್ರದ್ಧಾ ವಾಕರ್‌ ನ್ನು (Shraddha Walkar) ಕೊಂದು 35 ತುಂಡುಗಳಾಗಿ ಕತ್ತರಿಸಿ, ಮೃತದೇಹದ ತುಂಡುಗಳನ್ನು ದೆಹಲಿಯ ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ ಆರೋಪಿ ಅಫ್ತಾಬ್‌ ಪೂನಾವಾಲಾ(Aftab Poonawala) ತನ್ನ ಸುಳ್ಳುಗಳಿಂದಲೇ ಸಿಕ್ಕಿ ಬಿದ್ದಿದ್ದಾನೆ. ಇನ್‌ಸ್ಟಾಗ್ರಾಮ್ ಚಾಟ್‌ ಮತ್ತು ಬ್ಯಾಂಕ್ ಪಾವತಿ ಮಾಡಿ ಶ್ರದ್ಧಾ  ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ತೋರಿಸುವುದಕ್ಕಾಗಿ ಆರೋಪಿ ಶ್ರಮಿಸಿದ್ದ. ಆದರೆ ಈ ನಾಟಕವೇ ಆತನಿಗೆ ಮುಳುವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಶ್ರದ್ಧಾ ವಾಕರ್ ಅವರ ಅಪ್ಪ ಕಳೆದ ತಿಂಗಳು ಮುಂಬೈ ಬಳಿಯ ವಸೈನಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಅಕ್ಟೋಬರ್ 26 ರಂದು ಅಫ್ತಾಬ್ ಪೂನಾವಾಲಾನನ್ನು ವಿಚಾರಣೆಗೆ ಕರೆಯಲಾಯಿತು. ಮೇ 22 ರಂದು ಜಗಳವಾಡಿದ ನಂತರ ದೆಹಲಿಯ ಮೆಹ್ರೌಲಿಯಲ್ಲಿರುವ ತಮ್ಮ ಬಾಡಿಗೆ ಫ್ಲಾಟ್ ಅನ್ನು ಆಕೆ ತೊರೆದಿದ್ದಾಳೆ ಎಂದು ಆಗ ಅಫ್ತಾಬ್ ಪೊಲೀಸರಿಗೆ ಹೇಳಿದ್ದ. ಹೀಗೆ ಹೇಳಿದ್ದ ನಾಲ್ಕು ದಿನಗಳ ಹಿಂದೆಯೇ ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿದ್ದ ಎಂದು ನಂತರ ಪತ್ತೆಯಾಗಿದೆ. ಈ ಜೋಡಿ ದೆಹಲಿಗೆ ತೆರಳಿದ ಕೇವಲ ಎರಡು ವಾರಗಳ ನಂತರ ಕೊಲೆ ನಡೆಸಿದೆ.

ಆಕೆ ಫ್ಲ್ಯಾಟ್ ತೊರೆಯುವಾಗ ಮೊಬೈಲ್ ಫೋನ್ ನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾಳೆ. ಆಕೆಯ ಬಟ್ಟೆ, ಇತರ ವಸ್ತುಗಳನ್ನು ಇಲ್ಲೇ ಬಿಟ್ಟಿದ್ದಾಳೆ ಎಂದು ಅಫ್ತಾಬ್ ಪೊಲೀಸರಿಗೆ ಹೇಳಿದ್ದ. ತನಿಖಾಧಿಕಾರಿಗಳು ಫೋನ್ ಚಟುವಟಿಕೆ, ಕರೆ ವಿವರಗಳು ಮತ್ತು ಸಿಗ್ನಲ್ ಸ್ಥಳವನ್ನು ಟ್ರ್ಯಾಕ್ ಮಾಡಿದರು. ಮೇ 22 ಮತ್ತು 26 ರ ನಡುವೆ ಶ್ರದ್ಧಾ ವಾಕರ್ ಖಾತೆಯಿಂದ  ಫೋನ್‌ನಲ್ಲಿರುವ ಬ್ಯಾಂಕಿಂಗ್ ಅಪ್ಲಿಕೇಶನ್ ಬಳಸಿ ಅಫ್ತಾಬ್ ಪೂನಾವಾಲಾ ₹ 54,000 ಅನ್ನು ವರ್ಗಾಯಿಸಿದ್ದಾನೆ ಎಂದು ಪೊಲೀಸ್ ಪತ್ತೆ ಹಚ್ಚಿದ್ದಾರೆ. ಸ್ಥಳ ಮೆಹ್ರೌಲಿ, ಅವರು ಒಟ್ಟಿಗೆ ಇರುತ್ತಿದ್ದ ಪ್ರದೇಶ. ಆದರೆ ಮೇ 22 ರಂದು ಅವಳು ಹೋದಾಗಿನಿಂದ ತಾನು ಅವಳೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಅಫ್ತಾಬ್ ಪೊಲೀಸರಿಗೆ ಹೇಳಿದ್ದರಿಂದ ಇದು ಅನುಮಾನಗಳನ್ನು ಹೆಚ್ಚಿಸಿತು.

ಈ ತಿಂಗಳ ಆರಂಭದಲ್ಲಿ ಆತನನ್ನು ಮತ್ತೆ ವಿಚಾರಣೆಗೆ ಕರೆಯಲಾಯಿತು, ಆಕೆಯ ಪಾಸ್‌ವರ್ಡ್‌ಗಳನ್ನು ಹೊಂದಿದ್ದರಿಂದ ಬ್ಯಾಂಕ್ ವರ್ಗಾವಣೆ ಮಾಡಿದ್ದೇನೆ ಎಂದು ಆತ ಪೊಲೀಸರಿಗೆ ತಿಳಿಸಿದ್ದ. ಅಫ್ತಾಬ್ ಅವಳ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುತ್ತಿದ್ದ. ಬ್ಯಾಂಕ್ ಅಧಿಕಾರಿಗಳು  ಶ್ರದ್ಧಾಳ ಮುಂಬೈ ವಿಳಾಸಕ್ಕೆ ಹೋಗದಂತೆ ತಡೆಯಲು ಅಫ್ತಾಬ್ ಈ ಪ್ಲಾನ್ ಮಾಡಿದ್ದ.

ಏತನ್ಮಧ್ಯೆ, ಪೊಲೀಸರು ಅಫ್ತಾಬ್, ಶ್ರದ್ಧಾಳ ಸ್ನೇಹಿತರೊಂದಿಗೆ ಚಾಟ್ ಮಾಡಲು ಆಕೆಯ Instagram ಖಾತೆಯನ್ನು ಬಳಸಿದ್ದಾನೆ ಎಂದು ಕಂಡುಕೊಂಡರು. ಮೇ 31 ರಂದು ಮಾಡಿದ ಒಂದು ಚಾಟ್‌ನಲ್ಲಿ ಫೋನ್‌ನ ಸ್ಥಳವನ್ನು ಮತ್ತೆ ಮೆಹ್ರೌಲಿ ಎಂದು ತೋರಿಸಿದೆ ಎಂದು ಮೂಲಗಳು ತಿಳಿಸಿವೆ. ವಸೈನ ಮಾಣಿಕಪುರ ಪೊಲೀಸ್ ಠಾಣೆಯ ಅಧಿಕಾರಿಗಳು ನಂತರ ದೆಹಲಿ ಪೊಲೀಸರನ್ನು ಸಂಪರ್ಕಿಸಿದರು. ಅವರು ಅಫ್ತಾಬ್ ನ್ನು ಬಂಧಿಸಿದರು. ಮೇ 22 ರಂದು ಶ್ರದ್ಧಾ ಆತನನ್ನು ಬಿಟ್ಟು ಹೋಗಿದ್ದರೆ ಅವಳ ಸ್ಥಳ ಇನ್ನೂ ಮೆಹ್ರೌಲಿ ಎಂದು ಯಾಕಿದೆ? ಎಂದು ಪೊಲೀಸರು ಅಫ್ತಾಬ್ ಪೂನಾವಾಲಾನಲ್ಲಿ ಕೇಳಿದಾಗ ಆತ ಈ ಭಯಾನಕ ಕೃತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ಎನ್ ಡಿಟಿವಿಗೆ ತಿಳಿಸಿವೆ.

ಅಫ್ತಾಬ್ 18 ದಿನಗಳ ಕಾಲ ತಮ್ಮ ಬಾಡಿಗೆ ಫ್ಲಾಟ್‌ನ ಸಮೀಪವಿರುವ ಕಾಡಿನಲ್ಲಿ ಎಸೆದ ಆಕೆಯ ದೇಹದ 35 ತುಂಡುಗಳಲ್ಲಿ ಕನಿಷ್ಠ 10 ತುಂಡುಗಳನ್ನು ಪೊಲೀಸರಿಗೆ ಸಿಕ್ಕಿದೆ.

ಶ್ರದ್ಧಾ ವಾಕರ್ ಅವರ ಪೋಷಕರು ಕಳೆದ ವರ್ಷದಿಂದ ಅವಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿರಲಿಲ್ಲ, ಏಕೆಂದರೆ ಅವರು ಅಫ್ತಾಬ್ ಪೂನಾವಾಲಾ  ಜತೆಗಿನ ಅಂತರ್ ಧರ್ಮೀಯ (ಹಿಂದೂ-ಮುಸ್ಲಿಂ) ಸಂಬಂಧದ ಬಗ್ಗೆ ಕೋಪಗೊಂಡಿದ್ದರು ಎಂದು ತಿಳಿದುಬಂದಿದೆ. ಕಳೆದ ತಿಂಗಳು ಆಕೆಯ ಕೆಲವು ಸ್ನೇಹಿತರು ಆಕೆಯೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳಿದಾಗ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ವಸೈ ಮೂಲದ ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಅವರು 2019 ರಲ್ಲಿ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾಗಿದ್ದರು. ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ಮುಂಬೈನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸುದೀರ್ಘ ರಜೆಗಾಗಿ ತೆರಳಿದ್ದರು. ಆಕೆಯನ್ನು ಕೊಲೆ ಮಾಡುವ ಕೇವಲ 10 ದಿನಗಳ ಮೊದಲು, ಮೇ ತಿಂಗಳಲ್ಲಿ ಅವರಿಬ್ಬರೂ ದೆಹಲಿಗೆ ಬಂದು ನೆಲೆಸಿದ್ದರು. ಅಫ್ತಾಬ್ ವಿಶ್ವಾಸದ್ರೋಹಿ ಎಂದು ಶಂಕಿಸಿದ್ದರಿಂದ ಜಗಳದ ಸಮಯದಲ್ಲಿ ಆತ ತುಂಬಾನೇ ಕೋಪಗೊಳ್ಳುತ್ತಿದ್ದ ಎಂದು ಶ್ರದ್ಧಾ ಹೇಳಿದ್ದಳು ಎಂದು ಆಕೆ ಸ್ನೇಹಿತರು ಹೇಳಿದ್ದಾರೆ.

Published On - 10:16 pm, Wed, 16 November 22