ದೇವಸ್ಥಾನದಲ್ಲಿದ್ದ ಬಾಲಕನಿಂದ ಗುಪ್ತಾಂಗ ಮುಟ್ಟಿಸಿಕೊಂಡು ಲೈಂಗಿಕವಾಗಿ ಬಳಸಿಕೊಂಡ ಅರ್ಚಕ

|

Updated on: Aug 09, 2024 | 8:57 PM

ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಅರ್ಚಕರೊಬ್ಬರು ಆ ದೇವಸ್ಥಾನದಲ್ಲಿ ಕೆಲಸಕ್ಕೆ ಬರುತ್ತಿದ್ದ ಬಾಲಕನ ಬಳಿ ತನ್ನ ಖಾಸಗಿ ಅಂಗಗಳನ್ನು ಮುಟ್ಟುವಂತೆ ಒತ್ತಾಯಿಸಿ, ಲೈಂಗಿಕವಾಗಿ ಬಳಸಿಕೊಂಡ ಘಟನೆ ನಡೆದಿದೆ. ಆ ಅರ್ಚಕನಿಗೆ 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ದೇವಸ್ಥಾನದಲ್ಲಿದ್ದ ಬಾಲಕನಿಂದ ಗುಪ್ತಾಂಗ ಮುಟ್ಟಿಸಿಕೊಂಡು ಲೈಂಗಿಕವಾಗಿ ಬಳಸಿಕೊಂಡ ಅರ್ಚಕ
ಕಿರುಕುಳ
Follow us on

ನವದೆಹಲಿ: ದೆಹಲಿಯಲ್ಲಿ ಬಾಲಕನೊಬ್ಬ ಸ್ವಯಂಪ್ರೇರಣೆಯಿಂದ ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿದ್ದ. ಆ ದೇವಾಲಯದ ಅರ್ಚಕ ಆತನ ಬಳಿ ತನ್ನ ಖಾಸಗಿ ಅಂಗಗಳನ್ನು ಮುಟ್ಟುವಂತೆ ಬಲವಂತಪಡಿಸಿದ್ದಾನೆ. ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ನ್ಯಾಯಾಲಯ ಆ ಆರೋಪಿಗೆ 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ 2016ರಲ್ಲಿ ಈ ಘಟನೆ ನಡೆದಿದೆ. ಬಾಲಕನೊಬ್ಬನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಕ್ಕೆ ಅವರಿಗೆ 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ದೇವಸ್ಥಾನದಲ್ಲಿ ಸಾಮಾನ್ಯ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ 15 ವರ್ಷದ ಯುವಕನನ್ನು ಅರ್ಚಕ ಲೈಂಗಿಕವಾಗಿ ಶೋಷಿಸಿದ ಕಾರಣ ಅಪರಾಧದ ಗಂಭೀರತೆ ಉಲ್ಬಣಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Crime News: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ಶವ ತುಂಬಿ ರೈಲಿನಲ್ಲಿ ಸಾಗಿಸಿದ ಹಂತಕರು

ಸುಮಾರು ಎರಡು ತಿಂಗಳ ಕಾಲ ಅರ್ಚಕನಿಂದ ಆ ಬಾಲಕನಿಗೆ ದೈಹಿಕ ಕಿರುಕುಳ ಮುಂದುವರೆದಿತ್ತು. ನಂತರ ಆ ಬಾಲಕ ಪೊಲೀಸರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದ್ದಾನೆ. ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಅಪರಾಧಿಗೆ 43 ವರ್ಷ ವಯಸ್ಸಾಗಿತ್ತು. ಆ ಬಾಲಕನಿಗೆ 15 ವರ್ಷ ವಯಸ್ಸಾಗಿತ್ತು. ಇದಲ್ಲದೆ, ಅಪರಾಧಿ ದೇವಾಲಯದ ಅರ್ಚಕನಾಗಿದ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ದೇವಾಲಯದಲ್ಲಿ ಸಾಮಾನ್ಯ ಸ್ವಯಂಸೇವಕನಾಗಿದ್ದ ಅಪ್ರಾಪ್ತ ಬಾಲಕನನ್ನು ಶೋಷಣೆ ಮಾಡುವುದು ಅಪರಾಧದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ