ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎಂದು ವಂಚನೆ ಮಾಡ್ತಿದ್ದವನ ಬಂಧನ

ನಾನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆಪ್ತ ಸಹಾಯಕನಾಗಿ ಕೆಲಸ‌ಮಾಡ್ತಿದ್ದೇನೆ ನಂತರ ನಿಮ್ಮ ಎಲ್ಲ ಕೆಲಸ ಮಾಡಿಸಿಕೊಡುತ್ತೇನೆ ಅಂತ ಹೇಳಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆಪ್ತ ಕಾರ್ಯದರ್ಶಿ ಅಂತ ನಕಲಿ ಕಾರ್ಡ್​ ತಯಾರಿಸಿಕೊಂಡಿದ್ದನು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎಂದು ವಂಚನೆ ಮಾಡ್ತಿದ್ದವನ ಬಂಧನ
ಶ್ರೀಶೈಲ ಜಕ್ಕಣ್ಣನವರ್
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on: Aug 09, 2024 | 1:40 PM

ಬೆಂಗಳೂರು, ಆಗಸ್ಟ್​ 09: ಮುಖ್ಯಮಂತ್ರಿಗಳ (CM) ಆಪ್ತ ಕಾರ್ಯದರ್ಶಿ ಅಂತ ಹೇಳಿ ವಂಚನೆ ಮಾಡುತ್ತಿದ್ದವನನ್ನು ವಿಧಾನಸೌಧ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಜಯನಗರ ನಿವಾಸಿ ಶ್ರೀಶೈಲ ಜಕ್ಕಣ್ಣನವರ್ ಬಂಧಿತ ಆರೋಪಿ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆಪ್ತ ಸಹಾಯಕನಾಗಿ ಕೆಲಸ‌ಮಾಡ್ತಿದ್ದೇನೆ ಎಂದು ನಕಲಿ ಐಡಿ ಕಾರ್ಡ್ ತೋರಿಸಿದ್ದನು. ನಂತರ ನಿಮ್ಮ ಎಲ್ಲ ಕೆಲಸ ಮಾಡಿಸಿಕೊಡುತ್ತೇನೆ ಅಂತ ನಂಬಿಸುತ್ತಿದ್ದನು.

ಹೀಗೆ ಹಲವರನ್ನು ವಂಚಿಸಿದ್ದ ಆರೋಪಿ ವಿರುದ್ಧ ಮುಖ್ಯಮಂತ್ರಿ ಕಚೇರಿ ಅಧಿಕಾರಿ ಅರುಣ್ ಪುರಟಾಡು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿ ಶ್ರೀಶೈಲ್​ನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

ಹಗಲು ಡೆಲಿವರಿ ಬಾಯ್, ರಾತ್ರಿಯಾದರೆ ಕಳ್ಳ

ಡೆಲಿವರಿ ಕೆಲಸ ಮಾಡುತ್ತಾ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ಅಭಿಜಿತ್ ದಾಸ್ (23) ಬಂಧಿತ ಅರೋಪಿ. ಅಭಿಜಿತ್ ದಾಸ್ ಅಪಾರ್ಟ್ಮೆಂಟ್​ಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ‌ ಕಳ್ಳತನ ಮಾಡುತ್ತಿದ್ದನು.

ಆರೋಪಿ ನಲ್ಲೂರು ಹಳ್ಳಿ ಭಾಗದ ಅಪಾರ್ಟ್ಮೆಂಟ್​ಗೆ ಖನ್ನ ಹಾಕಿದ್ದನು. ಅಪಾರ್ಟ್ಮೆಂಟ್ ಹಿಂಭಾಗದಿಂದ ಹತ್ತಿ, ಸ್ಲೈಡ್ ಡೋರ್ ಸರಿಸಿ ಮನೆಯೊಳಗೆ ನುಗ್ಗಿ ಕಳುವು ಮಾಡಿ ಪರಾರಿಯಾಗುತ್ತಿದ್ದನು. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿ ಬಂಧಿಸಿದ್ದಾರೆ. ಆರೋಪಿಯಿಂದ 50 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಇಡಿ, ಆರ್​​ಬಿಐ ಹೆಸರು ಬಳಸಿಕೊಂಡು ಕೋಟ್ಯಾಂತರ ಹಣ ವಂಚನೆ!

ಪಾರ್ಟ್ ಟೈಂ ಕ್ಯಾಬ್ ಡ್ರೈವರ್, ಫುಲ್ ಟೈಂ‌‌‌ ಕಳ್ಳ

ಮನೆಗಳ್ಳತನ ಮಾಡುತ್ತಿದ್ದ ಕ್ಯಾಬ್​ ಚಾಲಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನೈ ಮೂಲದ ಸತೀಶ್ ಬಂಧಿತ ಆರೋಪಿ. ಚೆನೈ ಮೂಲದ ಸತೀಶ್ ಬೆಂಗಳೂರಿನ‌ ಕಾವಲ್ ಬೈರಸಂದ್ರದಲ್ಲಿ ನೆಲಸಿದ್ದನು. ಈತ ಕ್ಯಾಬ್​ ಚಾಲಕನಾಗಿದ್ದಾನೆ. ಕ್ಯಾಬ್​ ಓಡಿಸುತ್ತ ಅಕ್ಕಪಕ್ಕದ ಮನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು. ಮನೆಯಲ್ಲಿ ಯಾರು ಇಲ್ಲ ಅಂತ ಖಚೀತಪಡಿಸಿಕೊಂಡು ಕಳ್ಳತನ ಮಾಡುತ್ತಿದ್ದನು.

ಸತೀಶ್ ಇದೇ ವರ್ಷ​ ಏಪ್ರಿಲ್​ 4 ರಂದು ಕಲ್ಯಾಣ ನಗರದ ಹೆಚ್.ಆರ್.ಬಿ.ಆರ್ ಲೇಔಟ್​ಗೆ ಪಿಕಪ್​​ಗೆ ಹೋಗಿದ್ದನು. ಪಿಕಪ್​ ಮಾಡಿಕೊಂಡು ಹೊರಡುವಾಗ ಹೆಚ್​ಆರ್​ಬಿಆರ್​ ಲೇಔಟ್​ನ ಪ್ರಮೋದ್ ಭಟ್ ಎಂಬುವರ ಮನೆಯನ್ನು ಟಾರ್ಗೆಟ್​ ಮಾಡಿದ್ದಾನೆ. ಬಳಿಕ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹೋಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಕಳ್ಳತನಕ್ಕೆ ಬಳಸಿದ್ದ ಬೈಕ್​ ಅನ್ನು ಸೆಕೆಂಡ್ ಹ್ಯಾಂಡ್ ಶೂರೂಂನಲ್ಲಿ ಮಾರಿದ್ದನು.

ಮನೆ ಮಾಲೀಕ ಪ್ರಮೋದ್ ಭಟ್ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಸತೀಶ್​ ಬ್ಲ್ಯಾಕ್​​ ಕಲರ್ ಪಲ್ಸರ್​ನಲ್ಲಿ ಬಂದು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ನಂತರ ಪೊಲೀಸರು, ಆರ್​ಟಿಒ ಸಹಾಯದೊಂದಿಗೆ ಬೈಕ್​ ಪತ್ತೆ ಹಚ್ಚಿದ್ದಾರೆ. ಆದರೆ, ಅಷ್ಟೊತ್ತಿಗಾಗಲೆ ಬೈಕ್​​ ಅನ್ನು ಬೇರೊಬ್ಬರು ಖರೀದಿಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಕೊನೆಗೆ ಪೊಲೀಸರು ಸತೀಶ್ ವಿವರ ಶೂರೂಮ್‌ನಲ್ಲಿ ಪಡೆದರು. ಆಗ ಸತೀಶ್​ ತಮಿಳುನಾಡನಲ್ಲಿರುವುದು ಪತ್ತೆಯಾಗಿದೆ. ತಮಿಳುನಾಡಿಗೆ ಹೋಗಿ ಆರೋಪಿ ಸತೀಶ್​ನನ್ನು ಬಂಧಿಸಿ‌ ಪೊಲೀಸರು‌ ಕರೆ ತಂದಿದ್ದಾರೆ. ಆರೋಪಿಯಿಂದ 90 ಗ್ರಾಂ ಚಿನ್ನ ಹಾಗೂ ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು