ದೆಹಲಿಯ ಉಮ್ರಾವ್ ಜ್ಯುವೆಲ್ಲರಿಯಲ್ಲಿ 20-25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

|

Updated on: Sep 26, 2023 | 1:35 PM

ದೆಹಲಿಯ ಭೋಗಲ್ ಪ್ರದೇಶದಲ್ಲಿರುವ ಉಮ್ರಾವ್ ಜ್ಯುವೆಲರ್‌ನಲ್ಲಿ ತಡರಾತ್ರಿ 25 ಕೋಟಿ ರೂ. ಮೌಲ್ಯದ ಆಭರಣಗಳು ಕಳವಾಗಿವೆ. ಕಳ್ಳರು ಗೋಡೆಗೆ ರಂಧ್ರ ಮಾಡಿ ಶೋರೂಂನ ಸ್ಟ್ರಾಂಗ್ ರೂಂ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಭಾನುವಾರ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ನಿಜಾಮುದ್ದೀನ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಶೋರೂಂನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ದೆಹಲಿಯ ಉಮ್ರಾವ್ ಜ್ಯುವೆಲ್ಲರಿಯಲ್ಲಿ 20-25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು
ಚಿನ್ನ
Follow us on

ದೆಹಲಿಯ ಭೋಗಲ್ ಪ್ರದೇಶದಲ್ಲಿರುವ ಉಮ್ರಾವ್ ಜ್ಯುವೆಲರ್‌ನಲ್ಲಿ ತಡರಾತ್ರಿ 25 ಕೋಟಿ ರೂ. ಮೌಲ್ಯದ ಆಭರಣಗಳು ಕಳವಾಗಿವೆ.
ಕಳ್ಳರು ಗೋಡೆಗೆ ರಂಧ್ರ ಮಾಡಿ ಶೋರೂಂನ ಸ್ಟ್ರಾಂಗ್ ರೂಂ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಭಾನುವಾರ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ನಿಜಾಮುದ್ದೀನ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಶೋರೂಂನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಶೋರೂಂ ಮಾಲೀಕರ ಪ್ರಕಾರ ಸುಮಾರು 20 ರಿಂದ 25 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳ್ಳತನವಾಗಿದೆ. ಭಾನುವಾರ ಅಂಗಡಿ ಮುಚ್ಚುವವರೆಗೂ ಅನುಮಾನಾಸ್ಪದ ಘಟನೆಗಳೇನೂ ನಡೆದಿಲ್ಲ, ಸೋಮವಾರವೂ ಕೂಡ ಅಂಗಡಿ ಬಂದ್ ಇತ್ತು.

ಮಂಗಳವಾರ ಬೆಳಗ್ಗೆ ಅಂಗಡಿ ತೆರೆದಾಗ ಸ್ಟ್ರಾಂಗ್ ರೂಂ ಬಳಿ ಶೋರೂಂ ಗೋಡೆಯಲ್ಲಿ ದೊಡ್ಡ ರಂಧ್ರ ಕಾಣಿಸಿದೆ. ಛಾವಣಿ ಮತ್ತು ಗೋಡೆಗೆ ರಂಧ್ರಗಳನ್ನು ಮಾಡಿ ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಯಾರಿಗೂ ತಿಳಿಯದಂತೆ ಕಳ್ಳತನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಟೊಮೆಟೊ ತುಂಬಿದ್ದ ವಾಹನ ಕಳ್ಳತನ ಪ್ರಕರಣ; ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಬಂಧನ

ಏಕೆಂದರೆ ಬೆಲೆಬಾಳುವ ಚಿನ್ನ, ಬೆಳ್ಳಿಯ ವಸ್ತುಗಳನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಆದರೆ ಕಳ್ಳರು 20 ರಿಂದ 25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಶೋರೂಂ ಮಾಲೀಕರು ಹೇಳಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:34 pm, Tue, 26 September 23