ಗರ್ಭಿಣಿ ಸೊಸೆ ತಡವಾಗಿ ಏಳುತ್ತಾಳೆಂದು ಡಬಲ್ ಮರ್ಡರ್ ಮಾಡಿದ ಮಾವ!

ಅಮೃತಸರದಲ್ಲಿ ಗರ್ಭಿಣಿಯೊಬ್ಬರು ಬೆಳಗ್ಗೆ ತಡವಾಗಿ ಎದ್ದಿದ್ದಕ್ಕೆ ಶುರುವಾದ ಗಲಾಟೆಯಿಂದ 2 ಕೊಲೆಯಾಗಿದೆ. ಆ ಮಹಿಳೆಯ ಮಾವ ಆಕೆಯ ಅಪ್ಪ ಮತ್ತು ತಮ್ಮನನ್ನು ಗುಂಡಿಕ್ಕಿ ಕೊಂದಿದ್ದಾರೆ. ಅಷ್ಟಕ್ಕೂ ಏನಿದು ವಿಚಿತ್ರ ಪ್ರಕರಣ? ಬೀಗರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದೇಕೆ?

ಗರ್ಭಿಣಿ ಸೊಸೆ ತಡವಾಗಿ ಏಳುತ್ತಾಳೆಂದು ಡಬಲ್ ಮರ್ಡರ್ ಮಾಡಿದ ಮಾವ!
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 26, 2023 | 4:32 PM

ಗರ್ಭಿಣಿ ಸೊಸೆ ದಿನವೂ ತಡವಾಗಿ ಏಳುತ್ತಾಳೆಂದು ಆಕೆಯ ತಂದೆ ಮತ್ತು ತಮ್ಮನ ಜೊತೆ ಜಗಳವಾಡತೊಡಗಿದ ಮಾವ ಕೊನೆಗೆ ಅವರಿಬ್ಬರನ್ನೂ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಘಟನೆ ಅಮೃತಸರದಲ್ಲಿ ನಡೆದಿದೆ. ಮಗಳಿಗೆ ಸಂಸ್ಕಾರ ಕಲಿಸಿಲ್ಲವೆಂದು ಗಲಾಟೆ ಆರಂಭವಾಗಿ, ಕೊನೆಗೆ ಬೀಗರಿಬ್ಬರೂ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಆಗ ಕೋಪದಿಂದ ಮಹಿಳೆಯ ಮಾವ ತನ್ನ ಬೀಗರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಅಮೃತಸರದ ಬಿ ಡಿವಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ತೇಜ್ ನಗರದಲ್ಲಿ ಗರ್ಭಿಣಿ ಮಹಿಳೆಯರೊಬ್ಬರು ಬೆಳಗ್ಗೆ ತಡವಾಗಿ ಎದ್ದಿದ್ದಕ್ಕೆ ಶುರುವಾದ ಗಲಾಟೆಯಿಂದ 2 ಕೊಲೆಯಾಗಿದೆ. ಆ ಮಹಿಳೆಯ ಮಾವ ಆಕೆಯ ಅಪ್ಪ ಮತ್ತು ತಮ್ಮನನ್ನು ಗುಂಡಿಕ್ಕಿ ಕೊಂದಿದ್ದಾರೆ. ಭಾನುವಾರ ರಾತ್ರಿ ನಡೆದ ಈ ಜೋಡಿ ಕೊಲೆಯ ಆರೋಪದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಹತ್ಯೆ ಮಾಡಿ ಬಾವಿಗೆ ಎಸೆದಿದ್ದ ಆರೋಪಿಗಳ ಬಂಧನ

ಗುಂಡು ಹಾರಿಸಿದ ತಕ್ಷಣ ಅಪ್ಪ-ಮಗ ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದರು. ಮೃತ ವ್ಯಕ್ತಿಯ ಮಗಳ ಮಾವ ತೇಜ್ ನಗರದ ನಿವಾಸಿ ಹರ್ಜಿತ್ ಸಿಂಗ್ ಎಂಬುವವರನ್ನು ಬಂಧಿಸಿರುವ ಪೊಲೀಸರು ಪಿಸ್ತೂಲ್ ವಶಪಡಿಸಿಕೊಂಡಿದ್ದು, ಅವರ ವಿರುದ್ಧ ಡಬಲ್ ಮರ್ಡರ್ ಪ್ರಕರಣ ದಾಖಲಿಸಿದ್ದಾರೆ. ಮೃತರಿಬ್ಬರನ್ನು ತೇಜ್ ನಗರ ಚೌಕ್ ನಿವಾಸಿಗಳಾದ ದಲ್ಜಿತ್ ಸಿಂಗ್ (55) ಮತ್ತು ಗುರುಪ್ರೀತ್ ಸಿಂಗ್ (17) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಆಸ್ತಿಗಾಗಿ ತಮ್ಮನನ್ನೇ ಕೊಂದ ಅಣ್ಣ: ಮುಚ್ಚಿ ಹೋಗಿದ್ದ ಕೊಲೆ ಪ್ರಕರಣ ಬೇಧಿಸಿದ ಸವದತ್ತಿ ಪೊಲೀಸ್​​

ಮೃತ ದಲ್ಜಿತ್ ಸಿಂಗ್ ಅವರ ಮಗಳನ್ನು ಸಂಧು ಬಿಲ್ಡಿಂಗ್ ಮೆಟೀರಿಯಲ್ಸ್ ಮಾಲೀಕ ಹರ್ಜಿತ್ ಸಿಂಗ್ ಸಂಧು ಅವರ ಪುತ್ರ ನವಜೋತ್ ಸಿಂಗ್ ಅವರೊಂದಿಗೆ 6 ತಿಂಗಳ ಹಿಂದೆ ಮದುವೆ ಮಾಡಲಾಗಿತ್ತು. ಆ ಮಹಿಳೆ ಈಗ ಗರ್ಭಿಣಿಯಾಗಿದ್ದಳು. ಆಕೆಗೆ ಬೆಳಗ್ಗೆ 6 ಗಂಟೆಗೆ ಏಳಬೇಕೆಂದು ಹೇಳಿದ್ದರೂ ದಿನವೂ 8 ಗಂಟೆವರೆಗೂ ನಿದ್ರೆ ಮಾಡುತ್ತಾಳೆ ಎಂದು ಆಕೆಯ ಗಂಡನ ತಂದೆ ಹರ್ಜಿತ್ ಸಿಂಗ್ ಗಲಾಟೆ ಮಾಡಿದ್ದರು. ಇದೇ ವಿಷಯಕ್ಕೆ ಬೀಗರಿಬ್ಬರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಇದೇ ವೇಳೆ ಹರ್ಜಿತ್ ಸಿಂಗ್ ತನ್ನ ಸೊಸೆಯ ತಂದೆ ಮತ್ತು ತಮ್ಮನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ