ಆಸ್ತಿಗಾಗಿ ತಮ್ಮನನ್ನೇ ಕೊಂದ ಅಣ್ಣ: ಮುಚ್ಚಿ ಹೋಗಿದ್ದ ಕೊಲೆ ಪ್ರಕರಣ ಬೇಧಿಸಿದ ಸವದತ್ತಿ ಪೊಲೀಸ್
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಆಸ್ತಿಗಾಗಿ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವಂತಹ ಘಟನೆ ನಡೆದಿತ್ತು. ಸದ್ಯ ಮುಚ್ಚಿ ಹೋಗಿದ್ದ ಕೊಲೆ ಪ್ರಕರಣವನ್ನು ಸವದತ್ತಿ ಪೊಲೀಸರು ಬೇಧಿಸಿದ್ದು, ಅಣ್ಣ ಮತ್ತು ಕೊಲೆಗೆ ಸಹಾಯ ಮಾಡಿದವನನ್ನು ಬಂಧಿಸಿದ್ದಾರೆ.
ಬೆಳಗಾವಿ, ಸೆಪ್ಟೆಂಬರ್ 24: ಆಸ್ತಿಗಾಗಿ (property) ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ನಡೆದಿತ್ತು. ಮುಚ್ಚಿ ಹೋಗಿದ್ದ ಕೊಲೆ ಪ್ರಕರಣವನ್ನು ಸದ್ಯ ಸವದತ್ತಿ ಪೊಲೀಸರು ಬೇಧಿಸಿದ್ದಾರೆ. ಅಣ್ಣ ಸಿದ್ದಪ್ಪ ಅಳಗೋಡಿಯಿಂದ ತಮ್ಮ ಮಹಾಂತೇಶ್ ಅಳಗೋಡಿ ಕೊಲೆ(42) ಮಾಡಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಬು ಲಮಾಣಿ ಜತೆಗೆ ಸೇರಿ ಹತ್ಯೆ ಮಾಡಲಾಗಿದೆ.
ಬಾಬು ಕಡೆಯಿಂದ ತಮ್ಮ ಮಹಾಂತೇಶ್ನನ್ನು ಅಣ್ಣ ಕರೆಯಿಸಿಕೊಂಡಿದ್ದು, ಕುಡಿಸಿ ನಂತರ ಕತ್ತಿಗೆ ಟವೆಲ್ ನಿಂದ ಬಿಗಿದು ಕೊಲೆ ಮಾಡಲಾಗಿದೆ. ಬಳಿಕ ಕಾಲುವೆ ಬಳಿ ಶವ ಎಸೆದು, ಬೈಕ್ ಬೀಳಿಸಿ ಅಪಘಾತ ಸಂಭವಿಸಿದೆ ಎನ್ನುವ ರೀತಿ ಮಾಡಿದ್ದಾರೆ.
ಇದನ್ನೂ ಓದಿ: ಆನೇಕಲ್: ಗಣೇಶ ಮೂರ್ತಿ ವಿಸರ್ಜನೆ ಮಾಡಿ ಬರುವಾಗ ಗಲಾಟೆ; ಚಿನ್ನಯ್ಯನಪಾಳ್ಯ, ಸಿದ್ದನಪಾಳ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ
ಮೊದಲು ಅಪಘಾತ ಅಂತಾ ದೂರು ದಾಖಲಿಸಿಕೊಂಡಿದ್ದ ಸವದತ್ತಿ ಪೊಲೀಸರು, ಕತ್ತಲ್ಲಿ ಕಪ್ಪಾದ ಗುರುತು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಅಂತಾ ಸಾಬೀತಾಗಿದೆ. ಮನೆ ಕೆಲಸದವನನ್ನ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಹಿರಂಗವಾಗಿದೆ.
ಅಣ್ಣ ಸಿದ್ದಪ್ಪನ ಜತೆಗೆ ಸೇರಿಕೊಂಡು ಕೊಲೆ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾರೆ. ಸಿದ್ದಪ್ಪನ ಬಂಧಿಸಿ ವಿಚಾರಣೆ ನಡೆಸಿದಾಗ ಆಸ್ತಿಗಾಗಿ ಕೊಲೆ ಮಾಡಲಾಗಿದೆ. ಸದ್ಯ ಸಿದ್ದಪ್ಪ ಮತ್ತು ಬಾಬು ಲಮಾಣಿ ಬಂಧಿಸಿ ಸವದತ್ತಿ ಪೊಲೀಸರು ಜೈಲಿಗಟ್ಟಿದ್ದಾರೆ.
ಎರಡು ಬೈಕ್ಗಳ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಚಿಕ್ಕಬಳ್ಳಾಪುರ: ಎರಡು ಬೈಕ್ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಚಿಂತಾಮಣಿ ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮದ ಬಳಿ ನಡೆದಿದೆ. ಹುಲುಗುಮ್ಮನಹಳ್ಳಿಯ ವೆಂಕಟೇಶ್ (31) ಹಾಗೂ ಚಿಲಕಲನೇರ್ಪು ಗ್ರಾಮದ ಶ್ರೀನಿವಾಸ್ (36) ಮೃತ ದುರ್ದೈವಿಗಳು. ಬೆಂಗಳೂರು ಚಿಂತಾಮಣಿ ಮಾರ್ಗ ಮಧ್ಯೆ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ರಾಯಚೂರು: ಮಲಗಿದ್ದ ಪತ್ನಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪತಿ
ಮೃತರನ್ನ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ವಿದ್ಯುತ್ ತಂತಿ ತಗಲಿ ರೈತ ಸಾವು
ತುಮಕೂರು: ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ರೈತ ಶ್ರೀರಾಮಪ್ಪ(65) ಮೃತಪಟ್ಟಿದ್ದಾರೆ. ರೈತರ ಜಮೀನಿನಲ್ಲಿ ಕಾಡು ಹಂದಿಗಳ ಹಾವಳಿ ತಡೆಯಲು ಅಳವಡಿಸಿದ್ದ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿದ್ದಾರೆ. ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.