ರಾಯಚೂರು: ಮಲಗಿದ್ದ ಪತ್ನಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪತಿ
ಮಲಗಿದ್ದ ಪತ್ನಿಯನ್ನು ಕೊಂದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ನಡೆದ ಘಟನೆ ಇದಾಗಿದೆ. ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿ ಕೊಲೆ ಮಾಡಿದ್ದಾಗಿ ಮೃತಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ರಾಯಚೂರು, ಸೆ.23: ಮಲಗಿದ್ದ ಪತ್ನಿಯನ್ನು ಕೊಲೆ (Murder) ಮಾಡಿದ ಬಳಿಕ ಪತಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ರಾಯಚೂರು (Raichur) ತಾಲೂಕಿನ ರೊಜೋಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ನಡೆದ ಘಟನೆ ಇದಾಗಿದೆ. ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿ ಕೊಲೆ ಮಾಡಿದ್ದಾಗಿ ಮೃತಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಇದು ಆಂಧ್ರಪ್ರದೇಶ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಗ್ರಾಮವೂ ಹೌದು. ರಾಜೋಳ್ಳಿ ಗ್ರಾಮದ ಅಂಬಮ್ಮ ಅನ್ನೋ ಗೃಹಿಣಿ ಹೆಣವಾಗಿ ಹೋಗಿದ್ದಾಳೆ. ನಿನ್ನೆ ತಡ ರಾತ್ರಿ ಅಂಬಮ್ಮ, ಅತ್ತೆ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿದ್ದರು. ಆದರೆ ತಡ ರಾತ್ರಿ ಒಳಗಡೆ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅಂಬಮ್ಮಳ ಮೈದುನ ಹನುಮೇಶ್ ಎದ್ದಿದ್ದ. ಆಗ ಅದೆನು ತಿಳಿತೋ ಏನೋ ಅತ್ತಿಗೆಯನ್ನ ಎಬ್ಬಿಸಲು ಹೋಗಿದ್ದ. ಆದರೆ ಆಕೆ ಮುಖದ ಮೇಲೆ ಹಾಸಿಗೆ ಹೊದಿಸಿದ ಸ್ಥಿತಿಯಲ್ಲಿದ್ದರು.
ಆಗ ಆಕೆ ಅಲ್ಲಾಡಲಿಲ್ಲ. ಕೂಡಲೇ ಗಾಬರಿಗೊಂಡ ಹನುಮೇಶ್ ಪಕ್ಕದಲ್ಲೇ ಇರುವ ತನ್ನ ಸಂಬಂಧಿರನ್ನ ಎಬ್ಬಸಿ ಕರೆಸಿ ನೋಡಿದಾಗ ಅಂಬಮ್ಮ ರಕ್ತದ ಮೊಡವಿನಲ್ಲಿ ಹೆಣವಾಗಿ ಹೋಗಿದ್ದಳು. ಹೀಗೆ ಹೆಣವಾಗಿದ್ದ ಅಂಬಮ್ಮಳನ್ನ ಕೊಂದಿದ್ಯಾರು ಅನ್ನೋದೇ ಪ್ರಶ್ನೆಯಾಗಿತ್ತು.
ಇದನ್ನೂ ಓದಿ: ಕೋಲಾರ: ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದನಾ ಪ್ರೇಮಿ?
ಆದರೆ ಘಟನಾ ದಿನ ರಾತ್ರಿ ಮೂರು ಗಂಟೆವರೆಗೂ ಪತ್ನಿ ಅಂಬಮ್ಮಳ ಜೊತೆ ಪತಿ ಕಾಶೀಮಪ್ಪ ಗಲಾಟೆ ಮಾಡಿದ್ದ. ಎಂದಿನಂತೆ ನಿತ್ಯ ಗಲಾಟೆ ಮಾಡುವ ರೀತಿಯೇ ಕಂಠ ಪೂರ್ತಿ ಕುಡಿದು ಬಂದು ಕಿರಿಕ್ ಮಾಡಿದ್ದ. ಆದರೆ ಆವತ್ತು ಆ ಗಲಾಟೆ ಅತೀರೇಕಕ್ಕೆ ಹೋಗಿತ್ತು. ಹೀಗಾಗಿ ಆಗನ ಮೇಲೆಯೇ ಎಲ್ಲರ ಸಂಶಯವಿತ್ತು. ಕೊನೆಗೆ ಅದು ನಿಜವಾಗಿತ್ತು.
ಪತ್ನಿ ಮಲಗಿದ್ದಾಗ ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದದ್ದು ನಾನೇ ಅಂತ ಪತಿ ಕಾಸೀಮಪ್ಪ ಒಪ್ಪಿಕೊಂಡಿದ್ದಾನೆ. ಇತ್ತ ಮಗಳು ಕೊಲೆಯಾಗಿದ್ದಾಳೆ ಅಂತ ಗೊತ್ತಾಗುತ್ತಿದ್ದಂತೆಯೇ ಮೃತಳ ಕುಟುಂಬಸ್ಥರು ದೌಡಾಯಿಸಿದ್ದಾರೆ. ಆಗ ಮಗಳಿಗೆ ನರಕ ತೋರಿಸಿದ ಅಳಿಯ ಕಾಸೀಮಪ್ಪಗೆ ಶಿಕ್ಷೆ ಆಗಲೇ ಬೇಕು ಅಂತ ಸೀದಾ ಮಾನ್ವಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ತನ್ನ ವಿರುದ್ಧ ದೂರು ನೀಡಿದ ವಿಚಾರ ತಿಳಿದ ಕಾಸೀಮಪ್ಪ ಪಕ್ಕದೂರು ಅಡವಿ ಖಾನಾಪುರ ಅನ್ನೋ ಗ್ರಾಮದ ವ್ಯಾಪ್ತಿಯ ಜಮೀನಿಗೆ ಹೋಗಿ ತನ್ನ ಪಂಚೆಯಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂಬಮ್ಮಳ ಮೇಲೆ ಪತಿ ಕಾಸೀಮಪ್ಪ ಅನುಮಾನ ಪಡುತ್ತಿದ್ದನಂತೆ. ಹೀಗಾಗಿ ಆಕೆಯನ್ನ ಕೊಂದಿದ್ದಾನೆ ಅಂತ ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಇತ್ತ ತಾಯಿ ಸಾವನ್ನ ಕಣ್ಣಾರೇ ಕಂಡಿದ್ದ ಇಬ್ಬರು ಮಕ್ಕಳಿಗೆ ಈಗ ಆರೋಪಿ ತಂದೆಯೂ ಇಲ್ಲದಂತಾಗಿದೆ. ಹೆತ್ತವರಿಲ್ಲದೇ ಮಕ್ಕಳೀಗ ಅಜ್ಜಿ ಮನೆ ಸೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Sat, 23 September 23