AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮತ್ತು ಅತ್ತೆಯನ್ನು ಕೊಲೆಗೈದ ಪತಿ

Vijayapura News: ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬ ಕಾರಣಕ್ಕೆ ಕಟ್ಟಿಗೆಯಿಂದ ಹೊಡೆದು ಅತ್ತೆ ಮತ್ತು ಪತ್ನಿಯನ್ನು ಪತಿ ಹತ್ಯೆ ಮಾಡಿರುವಂತಹ ಘಟನೆ ವಿಜಯಪುರ ನಗರದ ನವಭಾಗ್ ಪ್ರದೇಶದಲ್ಲಿ ನಡೆದಿದೆ. ಕೊಲೆ ಮಾಡಿದ ಪತಿ ಮಲ್ಲಿಕಾರ್ಜುನ ಗಾಂಧಿಚೌಕ್​ ಠಾಣೆಗೆ ಬಂದು ಶರಣಾಗಿದ್ದಾರೆ.

ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮತ್ತು ಅತ್ತೆಯನ್ನು ಕೊಲೆಗೈದ ಪತಿ
ಸ್ಥಳಕ್ಕೆ ಪೊಲೀಸ್​ ಭೇಟಿ
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 18, 2023 | 8:00 AM

Share

ವಿಜಯಪುರ, ಸೆಪ್ಟೆಂಬರ್​ 18: ಕೌಟುಂಬಿಕ ಕಲಹ ಹಿನ್ನೆಲೆ ಕಟ್ಟಿಗೆಯಿಂದ ಹೊಡೆದು ಅತ್ತೆ ಮತ್ತು ಪತ್ನಿಯನ್ನು ಪತಿ ಹತ್ಯೆ (Death) ಮಾಡಿರುವಂತಹ ಘಟನೆ ನಗರದ ನವಭಾಗ್ ಪ್ರದೇಶದಲ್ಲಿ ನಡೆದಿದೆ. ಪತ್ನಿ ರೂಪಾ(32), ಅತ್ತೆ ಕಲ್ಲವ್ವ(55) ಮೃತರು. ಮಲ್ಲಿಕಾರ್ಜುನ ಹತ್ಯೆಗೈದ ವ್ಯಕ್ತಿ.ನವಭಾಗ್​ನಲ್ಲಿ ಬಾಡಿಗೆ ಮನೆಯಲ್ಲಿ ಅತ್ತೆ, ಮೂವರು ಮಕ್ಕಳು, ಪತ್ನಿ ಜೊತೆ ಮಲ್ಲಿಕಾರ್ಜುನ ಮೇತ್ರಿ ವಾಸವಿದ್ದ. ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಹತ್ಯೆ ಮಾಡಲಾಗಿದೆ. ಕೊಲೆ ಮಾಡಿ ಗಾಂಧಿಚೌಕ್​ ಠಾಣೆಗೆ ಬಂದು ಮಲ್ಲಿಕಾರ್ಜುನ ಶರಣಾಗಿದ್ದಾನೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿರುವ ಪ್ರಕರಣ ದಾಖಲಾಗಿದೆ.

ರೂಪಾ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವಂತೆ, ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲವಂತೆ. ಮಹಿಳಾ ಹಾಗೂ ವಿವಿಧ ಸಂಘಟನೆ‌ಗಳ ಕೆಲಸದ ಕಾರಣ ರೂಪಾ ಸದಾ ಮನೆಯಿಂದ ಆಚೆ ಇರುತ್ತಿದ್ದು, ಇದರಿಂದ ರೋಸಿ ಹೋಗಿದ್ದ ಮಲ್ಲಿಕಾರ್ಜುನ, ಇಂದು‌ ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿದ್ದಾನೆ.

ಹೋಟೆಲ್​ ಮಾಲೀಕನ ಮೇಲೆ ಮೂವರಿಂದ ಚಾಕುವಿನಿಂದ ಹಲ್ಲೆ: ದರೋಡೆ

ಕೋಲಾರ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹೋಟೆಲ್​ ಮಾಲೀಕನ ಮೇಲೆ ಮೂವರಿಂದ ಚಾಕುವಿನಿಂದ ಹಲ್ಲೆ ಮಾಡಿ ದರೋಡೆ ಮಾಡಿರುವಂತಹ ಘಟನೆ ಕೋಲಾರದ ಭೈರೇಗೌಡ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸಹನ ದರ್ಶಿನಿ ಹೋಟೆಲ್ ಮಾಲೀಕ ನವೀನ್ ಶೆಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್‌ ಸವಾರರಿಬ್ಬರು ಸಾವು

ಓರ್ವನನ್ನು ಹಿಡಿದು ಥಳಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ನವೀನ್ ಶೆಟ್ಟಿಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ‌ ಕೋಲಾರ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಗಾಂಜಾ ಪೆಡ್ಲರ್ ಬಂಧನ: 12 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ಜಪ್ತಿ

ಬೆಂಗಳೂರು: ಡ್ರಗ್ ​ಪೆಡ್ಲರ್​ ಪ್ರವೀಣ್​ನನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ವ್ಯಕ್ತಿಯಿಂದ ಗಾಂಜಾ ತರಿಸಿಕೊಂಡು ಪ್ಯಾಸೆಂಜರ್ ಆಟೋದಲ್ಲಿ ಸಾಗಿಸಿ ಮಾರಾಟ ಮಾಡಲು ಯತ್ನಿಸಿದ್ದು, ಖಚಿತ ಮಾಹಿತಿ ಆಧರಿಸಿ ವಿವೇಕನಗರ ಠಾಣೆ ಪೊಲೀಸರಿಂದ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ಸರಳುಗಳ ಮೇಲೆ ಬಿದ್ದು ಯುವಕ ಗಂಭೀರ ಗಾಯ

ಬಂಧಿತರಿಂದ 12 ಲಕ್ಷ ಮೌಲ್ಯದ 20 ಕೆ.ಜಿ 280 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಎನ್​ಡಿಪಿಎಸ್ ಆ್ಯಕ್ಟ್​​​ ಅಡಿ FIR ದಾಖಲು ಮಾಡಲಾಗಿದೆ. ಬೆಂಗಳೂರಿನ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.