ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್‌ ಸವಾರರಿಬ್ಬರು ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಿಸಲಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮತ್ತೊಂದು ಪ್ರಕರಣದಲ್ಲಿ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ಪತ್ನಿಯನ್ನ ನಡು ಬೀದಿಯಲ್ಲಿ ಕೊಚ್ಚಿ ಪತಿ ಕೊಲೆಗೈದಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲಕಾಪುರ ಕ್ರಾಸ್​​ನಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್‌ ಸವಾರರಿಬ್ಬರು ಸಾವು
ಅಪಘಾತಕ್ಕಿಡಾದ ಬಸ್​​, ಬೈಕ್​​
Follow us
| Edited By: ಗಂಗಾಧರ​ ಬ. ಸಾಬೋಜಿ

Updated on: Sep 17, 2023 | 7:17 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 17: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ (collides) ಬೈಕ್‌ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಿಸಲಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ಕೀರ್ತಿ(25), ಆತನ ಸ್ನೇಹಿತ ಮೃತರು. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ‌ಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ಪತ್ನಿಯನ್ನ ನಡು ಬೀದಿಯಲ್ಲಿ ಕೊಚ್ಚಿ ಪತಿ ಕೊಲೆಗೈದಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲಕಾಪುರ ಕ್ರಾಸ್​​ನಲ್ಲಿ ನಡೆದಿದೆ.

ಹಿಂದೂಪುರ ಮೂಲದ ಶಾನಜ್ (28)ಕೊಲೆಯಾದ ಮಹಿಳೆ. ಅಲಕಾಪುರ ಗ್ರಾಮದ ಅಂಜುಮನ್ ಖಾನ್ (30) ಕೊಲೆ ಮಾಡಿದ ಪತಿ. ಹತ್ಯೆ ಮಾಡಿ ಬಳಿಕ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪತ್ನಿ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಸ್ಥಳಕ್ಕೆ ಮಂಚೇನಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಗಾಂಜಾ ಪೆಡ್ಲರ್ ಬಂಧನ: 12 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ಜಪ್ತಿ

ಬೆಂಗಳೂರು: ಡ್ರಗ್ ​ಪೆಡ್ಲರ್​ ಪ್ರವೀಣ್​ನನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ವ್ಯಕ್ತಿಯಿಂದ ಗಾಂಜಾ ತರಿಸಿಕೊಂಡು ಪ್ಯಾಸೆಂಜರ್ ಆಟೋದಲ್ಲಿ ಸಾಗಿಸಿ ಮಾರಾಟ ಮಾಡಲು ಯತ್ನಿಸಿದ್ದು, ಖಚಿತ ಮಾಹಿತಿ ಆಧರಿಸಿ ವಿವೇಕನಗರ ಠಾಣೆ ಪೊಲೀಸರಿಂದ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಪ್ರೀತಿಸಿ ಮದುವೆಯಾದ ನಂತರ ವಂಚಿಸಿ ಪರಾರಿಯಾದ ಮಹಿಳೆ, ಠಾಣೆ ಮೆಟ್ಟಿಲೇರಿದ ಪತಿ

ಬಂಧಿತರಿಂದ 12 ಲಕ್ಷ ಮೌಲ್ಯದ 20 ಕೆ.ಜಿ 280 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಎನ್​ಡಿಪಿಎಸ್ ಆ್ಯಕ್ಟ್​​​ ಅಡಿ FIR ದಾಖಲು ಮಾಡಲಾಗಿದೆ. ಬೆಂಗಳೂರಿನ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹಾಸನ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ: ಅಪ್ರಾಪ್ತ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ

ಹಾಸನ: ಸಕಲೇಶಪುರ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೊಳಗಾಗಿದ್ದು, 2 ತಿಂಗಳ ಗರ್ಭಿಣಿಯಾಗಿದ್ದಾಳೆ. ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡಿದ್ದ ವೃದ್ಧನಿಂದ ಹೇಯ ಕೃತ್ಯವೆಸಗಲಾಗಿದೆ. ಮೀಸೆ ಮಂಜಯ್ಯ (73) ಅತ್ಯಾಚಾರ ಮಾಡಿದ ವೃದ್ಧ. ಸದ್ಯ ಆರೋಪಿ ವೃದ್ಧನನ್ನು  ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಕೆಲಸ ಅರಸಿ ಬಂದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವು

ಇತ್ತ ಮಗಳಿಗಾದ ಅನ್ಯಾಯದಿಂದ ಮನನೊಂದು ತಾಯಿ ವಿಷ ಸೇವಿಸಿದ್ದಾರೆ. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ‌‌ ಸಂತ್ರಸ್ತೆಯ ತಾಯಿಗೆ ಚಿಕಿತ್ಸೆ ನೀಡಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!