AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಬೋನಸ್​ ಕೊಡೋದಿಲ್ಲ ಎಂದಿದ್ದಕ್ಕೆ ಢಾಬಾ ಮಾಲೀಕನ ಕೊಂದು ಕಾರಿನೊಂದಿಗೆ ಪರಾರಿಯಾದ ನೌಕರರು

ದೀಪಾವಳಿ ಬೋನಸ್​ ಕೊಡುವುದಿಲ್ಲ ಎಂದಿದ್ದಕ್ಕೆ ಢಾಬಾ ಮಾಲೀಕನನ್ನು ಇಬ್ಬರು ಕೆಲಸಗಾರರು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹತ್ಯೆ ಮಾಡಿ ಬಳಿಕ ಮಾಲೀಕರ ಕಾರು ಕದ್ದು ಪರಾರಿಯಾಗಿದ್ದಾರೆ. ನಾಗಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ಕುಹಿ ಫಾಟಾ ಬಳಿಯ ಢಾಬಾದಲ್ಲಿ ದೀಪಾವಳಿ ಬೋನಸ್‌ಗಾಗಿ ಕಾರ್ಮಿಕರು ಬೇಡಿಕೆ ಇಟ್ಟಿದ್ದರು, ಆದರೆ ಮಾಲೀಕ ಅದನ್ನು ನಿರಾಕರಿಸಿದ್ದರು, ಕೋಪಗೊಂಡ ಇಬ್ಬರು ಕೆಲಸಗಾರರು ಮಾಲೀಕನನ್ನು ಕತ್ತುಹಿಸುಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ದೀಪಾವಳಿ ಬೋನಸ್​ ಕೊಡೋದಿಲ್ಲ ಎಂದಿದ್ದಕ್ಕೆ ಢಾಬಾ ಮಾಲೀಕನ ಕೊಂದು ಕಾರಿನೊಂದಿಗೆ ಪರಾರಿಯಾದ ನೌಕರರು
ಅಪರಾಧImage Credit source: Namaste Talangana
ನಯನಾ ರಾಜೀವ್
|

Updated on: Nov 12, 2023 | 3:05 PM

Share

ದೀಪಾವಳಿ ಬೋನಸ್​ ಕೊಡುವುದಿಲ್ಲ ಎಂದಿದ್ದಕ್ಕೆ ಢಾಬಾ ಮಾಲೀಕನನ್ನು ಇಬ್ಬರು ಕೆಲಸಗಾರರು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹತ್ಯೆ ಮಾಡಿ ಬಳಿಕ ಮಾಲೀಕರ ಕಾರು ಕದ್ದು ಪರಾರಿಯಾಗಿದ್ದಾರೆ. ನಾಗಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ಕುಹಿ ಫಾಟಾ ಬಳಿಯ ಢಾಬಾದಲ್ಲಿ ದೀಪಾವಳಿ ಬೋನಸ್‌ಗಾಗಿ ಕಾರ್ಮಿಕರು ಬೇಡಿಕೆ ಇಟ್ಟಿದ್ದರು, ಆದರೆ ಮಾಲೀಕ ಅದನ್ನು ನಿರಾಕರಿಸಿದ್ದರು, ಕೋಪಗೊಂಡ ಇಬ್ಬರು ಕೆಲಸಗಾರರು ಮಾಲೀಕನನ್ನು ಕತ್ತುಹಿಸುಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಮಧ್ಯಪ್ರದೇಶದ ಮಾಂಡ್ಲಾ ಮೂಲದ ಛೋಟು ಮತ್ತು ಆದಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಮಧ್ಯಪ್ರದೇಶ ರಾಜ್ಯ ಬಸ್ ನಿಲ್ದಾಣದ ಬಳಿ ಕಾರ್ಮಿಕ ಗುತ್ತಿಗೆದಾರರ ಮೂಲಕ ಈ ಇಬ್ಬರು ಆರೋಪಿಗಳನ್ನು ಧೆಂಗ್ರೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ದೀಪಾವಳಿಗಾಗಿ ಬೋನಸ್​ ನೀಡುವಂತೆ ಕೇಳಿಕೊಂಡಿದ್ದರು, ಧೆಂಗ್ರೆ ಮತ್ತು ಛೋಟು ಒಟ್ಟಿಗೆ ಊಟ ಮಾಡುವಾಗ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ ಧೆಂಗ್ರೆ ಅವರು ಮುಂದಿನ ದಿನಗಳಲ್ಲಿ ಪಾವತಿಸುವವರಿದ್ದರು.

ಊಟದ ನಂತರ ಧೆಂಗ್ರೆ ಮಂಚದ ಮೇಲೆ ಮಲಗಿದ್ದಾಗ ಆದಿ ಮತ್ತು ಛೋಟು ಹರಿತವಾದ ಆಯುಧದಿಂದ ತಿವಿದು, ಉಸಿರುಗಟ್ಟಿಸಿ ಧೆಂಗ್ರೆಯನ್ನು ಹತ್ಯೆ ಮಾಡಿದ್ದಾರೆ. ಧೆಂಗ್ರೆ, ಕುಹಿ ತಾಲೂಕಿನ ಸುರ್ಗಾಂವ್ ಗ್ರಾಮದ ಮಾಜಿ ಸರ್ಪಂಚ್ (ಗ್ರಾಮ ಮುಖ್ಯಸ್ಥ) ಮತ್ತು ಇತ್ತೀಚಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದರು.

ಮತ್ತಷ್ಟು ಓದಿ: ಹೊಲಕ್ಕೆ ಹೋಗಿದ್ದ ವೃದ್ದೆಯ ಕೊಲೆ; ಆರೋಪಿ ಬಂಧನ, ಹತ್ಯೆಗೆ ಕಾರಣವೇನು ಗೊತ್ತಾ?

ಪ್ರಾಥಮಿಕವಾಗಿ ಕೊಲೆಯ ಹಿಂದಿನ ಕಾರಣ ಹಣದ ಸಮಸ್ಯೆ ಎಂದು ತೋರುತ್ತದೆ ಆದರೆ ರಾಜಕೀಯ ಪೈಪೋಟಿಯ ಕೋನವನ್ನು ಸಹ ಪರಿಶೋಧಿಸಲಾಗುತ್ತಿದೆ ಎಂದು ಎಸ್ಪಿ ಹರ್ಷ್ ಎ ಪೊದ್ದಾರ್ ಹೇಳಿದ್ದಾರೆ.

ಪ್ರಕರಣವನ್ನು ವಿವಿಧ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಧೆಂಗ್ರೆ ಉತ್ತಮ ರಾಜಕೀಯ ಸಂಪರ್ಕಗಳೊಂದಿಗೆ ಉತ್ತಮ ಖ್ಯಾತಿಯನ್ನು ಹೊಂದಿದ್ದರು ಮತ್ತು ಬಿಜೆಪಿಯಿಂದ ಬೆಂಬಲಿತರಾಗಿದ್ದರು.

ಆರೋಪಿಗಳಾದ ಛೋಟು ಮತ್ತು ಆದಿ ಅವರು ತಮ್ಮ ಕಾರಿನೊಂದಿಗೆ ಪರಾರಿಯಾಗುವ ಮೊದಲು ಧೆಂಗ್ರೆ ಅವರ ದೇಹವನ್ನು ಗಾದಿಯಿಂದ ಮುಚ್ಚಿದರು ಆದರೆ ವಿಹಿರ್‌ಗಾಂವ್ ಬಳಿಯ ನಾಗ್ಪುರ-ಉಮ್ರೆಡ್ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದರು.

ಪಂಚಗಾಂವ್‌ನಿಂದ ನಾಗ್ಪುರಕ್ಕೆ ತೆರಳುತ್ತಿದ್ದ ಕಾರಿನಿಂದ ಇಬ್ಬರು ದುಷ್ಕರ್ಮಿಗಳು ಹೊರಬಂದು ದಿಘೋರಿ ನಾಕಾ ಕಡೆಗೆ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.ದಿಘೋರಿಯಿಂದ ಇ-ರಿಕ್ಷಾವನ್ನು ಹತ್ತಿದ್ದರು ಆದರೆ ನಂತರ ಎಲ್ಲಿ ಹೋದರು ಎಂಬುದು ಯಾರಿಗೂ ಗೊತ್ತಾಗಿಲ್ಲ.

ಮತ್ತೊಂದೆಡೆ, ಧೆಂಗ್ರೆ ಅವರ ಮಗಳು ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪದೇ ಪದೇ ವಿಫಲವಾದ ನಂತರ, ಅವರು ಢಾಬಾದ ಸುತ್ತಮುತ್ತಲಿನ ಪ್ಯಾನ್ ಕಿಯೋಸ್ಕ್ ಮಾಲೀಕರಿಗೆ ಡಯಲ್ ಮಾಡಿದ್ದರು, ಬಳಿಕ ಢಾಬಾಗೆ ಹೋಗಿ ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?