AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಲಕ್ಕೆ ಹೋಗಿದ್ದ ವೃದ್ದೆಯ ಕೊಲೆ; ಆರೋಪಿ ಬಂಧನ, ಹತ್ಯೆಗೆ ಕಾರಣವೇನು ಗೊತ್ತಾ?

ಚೌಡಮ್ಮ ಅವರು ನಿನ್ನೆ ಸಹ ಹೊಲದಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಜಗಳವಾಡಿದ್ದರಂತೆ. ಹೌದು ರಾಗಿ ಹೊಲಕ್ಕೆ ದನ-ಕರುಗಳನ್ನು ಬಿಟ್ಟು ಬೆಳೆ ಹಾಳು ಮಾಡುತ್ತಾರೆ ಎಂದು ಕಾವಲಿಗೆ ಹೋಗಿದ್ದ ವೇಳೆ ಮೃತ ವೃದ್ದೆ ಹಾಗೂ ಆರೋಪಿ ನಡುವೆ ಜಗಳವಾಗಿದೆ. ಈ ವಿಷಯವನ್ನು ಮನೆಯವರಿಗೆ ಹೇಳುತ್ತಾಳೆ ಎಂಬ ಭಯದಿಂದ ಹಿಂಬದಿಯಿಂದ ಬಂದು ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.

ಹೊಲಕ್ಕೆ ಹೋಗಿದ್ದ ವೃದ್ದೆಯ ಕೊಲೆ; ಆರೋಪಿ ಬಂಧನ, ಹತ್ಯೆಗೆ ಕಾರಣವೇನು ಗೊತ್ತಾ?
ಆರೋಪಿ
ನವೀನ್ ಕುಮಾರ್ ಟಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on:Nov 12, 2023 | 3:10 PM

Share

ಬೆಂಗಳೂರು ಗ್ರಾಮಾಂತರ, ನ.12: ರಾಗಿ ಹೊಲಕ್ಕೆ ಹೋಗಿದ್ದ ವೃದ್ದೆಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಗುಂಜೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೌಡಮ್ಮ(75) ಮೃತ ವೃದ್ದೆ. ಹೌದು, ವೃದ್ದೆಯನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಗ್ರಾಮದ ಪ್ರಭಾಕರ್ ( 45 ) ಎಂಬಾತನನ್ನು ಇದೀಗ ಬಂಧಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಅಜ್ಜಿ ಹಾಗೂ ಪ್ರಭಾಕರ್ ಕುಟುಂಬಸ್ಥರ ನಡುವೆ ಕಲಹ ನಡೆಯುತ್ತಿದ್ದು, ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

ಘಟನೆ ವಿವರ

ಇನ್ನು ಚೌಡಮ್ಮ ಅವರು ನಿನ್ನೆ ಸಹ ಹೊಲದಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಜಗಳವಾಡಿದ್ದರಂತೆ. ಹೌದು ರಾಗಿ ಹೊಲಕ್ಕೆ ದನ-ಕರುಗಳನ್ನು ಬಿಟ್ಟು ಬೆಳೆ ಹಾಳು ಮಾಡುತ್ತಾರೆ ಎಂದು ಕಾವಲಿಗೆ ಹೋಗಿದ್ದ ವೇಳೆ ಮೃತ ವೃದ್ದೆ ಹಾಗೂ ಆರೋಪಿ ನಡುವೆ ಜಗಳವಾಗಿದೆ. ಈ ವಿಷಯವನ್ನು ಮನೆಯವರಿಗೆ ಹೇಳುತ್ತಾಳೆ ಎಂಬ ಭಯದಿಂದ ಹಿಂಬದಿಯಿಂದ ಬಂದು ತಲೆಗೆ ಹೊಡೆದು, ಸೀರೆಯಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ. ಸಂಜೆ ವೃದ್ದೆ ಮನೆಗೆ ಬಾರದಿದ್ದನ್ನ ಕಂಡು ಪರಿಶೀಲನೆಗೆ ಹೋದ ಚೌಡಮ್ಮ ಅವರು ಶವವಾಗಿ ಪತ್ತೆಯಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:ದೇವನಹಳ್ಳಿ: ಒಂಟಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಚೈನ್ ಎಗರಿಸಿದ್ದ ಸಾಪ್ಟ್ ವೇರ್ ಉದ್ಯೋಗಿ ಅರೆಸ್ಟ್​

ಕಾರಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವ ತೃತೀಯಲಿಂಗಿಗಳು

ಬೆಂಗಳೂರು: ತಾಲೂಕಿನ ಮಾಕಳಿ ಬಳಿ ಕಾರಿನಲ್ಲಿ ಚಿನ್ನಾಭರಣವನ್ನು ತೃತೀಯಲಿಂಗಿಗಳು ಕಳುವು ಮಾಡಿದ್ದಾರೆ. ಬೇಗೂರಿನ ಮಂಜೇಶ್‌ಗೆ ಸೇರಿದ ಕಾರಿನಲ್ಲಿದ್ದ 4 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.ಆರೋಪಿಗಳಾದ ಸಹನಾ, ಮಂಜುಳಾ, ಖುಷಿ, ರಿಷಿಕಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾತ್ರಿ 11.30ರಲ್ಲಿ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದಾಗ ಈ ಘಟನೆ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Sun, 12 November 23

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More