ಬೈಕ್​ ಅಡ್ಡ ಗಟ್ಟಿ ಯುವಕನನ್ನ ಕಲ್ಲಿನಿಂದ ಜಜ್ಜಿ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಬೈಕ್ ಅಡ್ಡ ಗಟ್ಟಿ ಕಲ್ಲಿನಿಂದ ಜಜ್ಜಿ ಯುವಕನನ್ನು ಬರ್ಬರ್ ಹತ್ಯೆ ಮಾಡಿದ ಘಟನೆ ಬೀದರ್(Bidar) ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ವ್ಯಕ್ತಿ ಯಾರ ಜೊತೆಗೂ ಜಗಳ ಮಾಡಿಕೊಂಡ ಉದಾಹರಣೆ ಇಲ್ಲ. ಆದರೆ, ಆತ ಕೊಲೆಯಾಗಲು ಕಾರಣ ಮಾತ್ರ ನಿಗೂಢವಾಗಿಯೇ ಇದೆ.

ಬೈಕ್​ ಅಡ್ಡ ಗಟ್ಟಿ ಯುವಕನನ್ನ ಕಲ್ಲಿನಿಂದ ಜಜ್ಜಿ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೃತ ವ್ಯಕ್ತಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 12, 2023 | 4:20 PM

ಬೀದರ್, ನ.12: ಬೈಕ್ ಅಡ್ಡ ಗಟ್ಟಿ ಕಲ್ಲಿನಿಂದ ಜಜ್ಜಿ ಯುವಕನನ್ನು ಬರ್ಬರ್ ಹತ್ಯೆ ಮಾಡಿದ ಘಟನೆ ಬೀದರ್(Bidar) ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ತಾಲೂಕಿನ ವಿಳಾಸಪೂರ ನಿವಾಸಿಯಾದ ಅಮೀತ್ ಮಾನಾಜಿ(35) ಕೊಲೆಯಾದ ಯುವಕ. ನಿನ್ನೆ(ನ.11) ರಾತ್ರಿ 9:30 ರ ಸುಮಾರಿಗೆ ಬೈಕ್ ಮೇಲೆ ಬರುತ್ತಿದ್ದಾ ತಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಈ ಘಟನೆ ಜನವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನು ಮೃತ ಯುವಕ ಹಾಗೂ ಆತನ ತಂದೆ-ತಾಯಿಯ ಊರು ಬೀದರ್ ತಾಲೂಕಿನ ವಿಳಾಸಪುರ ಗ್ರಾಮವಾದರೂ ಕೂಡ ಅವರು ನೆಲೆಸಿದ್ದು ಮೈಸೂರಿನಲ್ಲಿ. ಅಮೀತ್ ಮಾನಾಜಿ ಅಲ್ಲಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಮೀತ್​ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ. ಜೊತೆಗೆ ಒಂದು ಮುದ್ದಾದ ಮಗು ಕೂಡ ಇತ್ತು. ಹೆಂಡತಿ, ಮಕ್ಕಳು ತಂದೆ-ತಾಯಿ ಎಲ್ಲರೂ ಕೂಡ ಮೈಸೂರಿನಲ್ಲಿಯೇ ವಾಸವಿದ್ದಾರೆ. ಆದರೆ, ಅಮೀತ್ ಮಾತ್ರ ಕೃಷಿ ಮಾಡಬೇಕು ಎನ್ನುವ ಉದ್ದೇಶದಿಂದ ಲಾಕ್ ಡೌನ್ ಅವಧಿಯಲ್ಲಿ ಬೀದರ್ ತಾಲೂಕಿನ ತನ್ನ ತಂದೆಯ ಊರಾದ ವಿಳಾಸಪುರ ಗ್ರಾಮಕ್ಕೆ ಬಂದಿದ್ದ.

ತನ್ನ ತಂದೆಯ 35 ಎಕರೆಯಷ್ಟು ನೀರಾವರಿ ಜಮೀನಿರುವ ಕಾರಣ ಕೃಷಿಯಲ್ಲಿಯೇ ಏನಾದರೂ ಹೊಸದನ್ನ ಮಾಡಬೇಕು ಎನ್ನುವ ಉದ್ದೇಶದಿಂದ ಎರಡು ವರ್ಷದ ಹಿಂದೆ ಬಂದಿದ್ದ. ಜೊತೆಗೆ ಕಳೆದ ಎರಡು ವರ್ಷದಿಂದ ಕಷ್ಟಪಟ್ಟು ಟೋಮ್ಯಾಟೋ ತರಕಾರಿ ಬೆಳೆಸಿಕೊಂಡು ಕೈ ತುಂಬಾ ಆದಾಯ ಗಳಿಸುತ್ತಿದ್ದ. ಬಿಡುವಿನ ವೇಳೆಯಲ್ಲಿ ಮೈಸೂರಿಗೆ ಹೋಗಿ ಬಂದು ಮಾಡುತ್ತಿದ್ದ, ಇತ್ತ ಹೆಂಡತಿಯೂ ಕೂಡ ಆಗಾಗ ಗಂಡನನ್ನ ನೋಡಲು ಬೀದರ್​ಗೆ ಬರುತ್ತಿದ್ದರು. ಸಂಸಾರವೂ ಕೂಡ ಚನ್ನಾಗಿಯೇ ಇತ್ತು. ಇನ್ನೂ ಊರವರ ಜೊತೆಗೆ ಕೂಡ ಅಮೀತ್ ಚನ್ನಾಗಿಯೇ ಇದ್ದು, ಊರಿನ ಜನರ ಪ್ರೀತಿ ವಿಶ್ವಾಸವನ್ನ ಘಳಿಸಿಕೊಂಡಿದ್ದ. ಆದರೆ, ನಿನ್ನೆ ರಾತ್ರಿ ಏಕಾಏಕಿ ಅಮೀತ್ ಕೊಲೆಯಾಗಿ ಹೋಗಿದ್ದಾನೆ. ಇದು ಸಹಜವಾಗಿಯೇ ಗ್ರಾಮಸ್ಥರ ಅಶ್ಚರ್ಯಕ್ಕೂ ಕೂಡ ಕಾರಣವಾಗಿದೆ.

ಇದನ್ನೂ ಓದಿ:ಬೆಂಗಳೂರು: ಡಿಜೆಯಲ್ಲಿ ಕನ್ನಡ, ತಮಿಳು ಹಾಡು ಹಾಕಲು ಸ್ನೇಹಿತರ ಮಧ್ಯೆ ವಾಗ್ವಾದ, ಕೊಲೆಯಲ್ಲಿ ಅಂತ್ಯ

ಭೀಕರವಾಗಿ ಕೊಲೆಯಾಗಿರುವ ಅಮೀತ್ ಮಾನಾಜಿ, ತನ್ನ ಹೊಲದಲ್ಲಿ ಸುಮಾರು 10 ಎಕರೆಯಷ್ಟೂ ಈ ಸಲ ಟೊಮ್ಯಾಟೋ ನಾಟಿ ಮಾಡಬೇಕು ಎಂದು ಯೋಚನೆ ಮಾಡಿದ್ದ. ಈ ಹಿನ್ನಲೆ ಅಮೀತ್ ಟೋಮೋಟೋ ಬೇಸಾಯದ ಬಗ್ಗೆ ಅರಿವಿದ್ದ ಹೊನ್ನಕೇರಿಯ ಪ್ರಗತಿ ಪರ ರೈತನಿಗೆ ಭೇಟಿಯಾಗಿ ಬೆಳೆ, ಮಾರುಕಟ್ಟೆ ಹಾಗೂ ಅದಕ್ಕೆ ಬರುವ ರೋಗದ ಬಗ್ಗೆ ಚರ್ಚೆ ಮಾಡಿ ರಾತ್ರಿ 9:30 ಸುಮಾರಿಗೆ ಮನೆಗೆ ಬರುತ್ತಿದ್ದಾಗ. ಇತನನ್ನು ಕೊಲೆ ಮಾಡಬೇಕು ಎಂದು ಯೋಜನೆ ಮಾಡಿಕೊಂಡಿದ್ದ ಹಂತಕ ಪಡೆ, ಆತ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಅಡ್ಡ ಗಟ್ಟಿದ್ದಾರೆ. ಮೊದಲು ಹೊಡೆದು, ನಂತರ ಕಲ್ಲಿನಿಂದ ತಲೆ, ಬೆನ್ನಿಗೆ, ಕಾಲಿಗೆ ಜಜ್ಜಿದ್ದಾರೆ. ಬಳಿಕ ಜಾಕುವಿನಿಂದ ಹಿಂಬದಿ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ.

ಕೊಲೆ ಮಾಡಿದವರ್ಯಾರು ಎಂಬ ಯಕ್ಷ ಪ್ರಶ್ನೆ

ಹೌದು, ಮೃತ ವ್ಯಕ್ತಿ ಯಾರ ಜೊತೆಗೂ ಜಗಳ ಮಾಡಿಕೊಂಡ ಉದಾಹರಣೆ ಇಲ್ಲ. ಆದರೆ, ಆತ ಕೊಲೆಯಾಗಲು ಕಾರಣ ಮಾತ್ರ ನಿಗೂಢವಾಗಿಯೇ ಇದೆ. ಇನ್ನು ಕೊಲೆಯಾದ ವಿಷಯ ತಿಳಿಯುತ್ತಿದಂತೆ ಜನವಾಡ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಜರ ತಂಡ ಬಂದು ಕೊಲೆಗಾರರ ಸುಳಿವು ಪತ್ತೆ ಹಚ್ಚಲು ಮಾಹಿತಿ ಕಲೆಹಾಕಿ ಹೋಗಿದ್ದಾರೆ. ಘಟನಾ ಸ್ಥಳದಲ್ಲಿಯೇ ಜನಸಾಗರವೇ ತುಂಬಿಕೊಂಡಿತ್ತು, ಕುಟುಂಬಸ್ಥರ ಆಕ್ರಂಧನ ಕೂಡ ಮುಗಿಲು ಮುಟ್ಟಿತ್ತು, ಈ ಕೊಲೆಗೆ ಕಾರಣರಾದವರನ್ನ ಬೇಗ ಪತ್ತೆ ಹಚ್ಚಿ ಅವರಿಗೆ ಉಗ್ರವಾದ ಶಿಕ್ಷ ಕೊಡಬೇಕು ಎಂದು ಕುಟುಂಬಸ್ಥರ ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ