ಕಾಳಿ ದೇವಿಯ ಬಗ್ಗೆ ಅವಹೇಳನಕಾರಿ ಪೋಸ್ಟ್: ಪ್ರಸಿದ್ದ ಜಾಲತಾಣ ಟ್ವೀಟರ್ ಸಂಸ್ಥೆ ಮೇಲೆ FIR ದಾಖಲು
ಕಿರಣ್ ಅರಾಧ್ಯ ಎಂಬುವರು ನೀಡಿದ ದೂರಿನನ್ವಯ FIR ದಾಖಲು ಮಾಡಲಾಗಿದೆ. ಅರಮಿನ್ ನವಾಬಿ ಎಂಬ ಟ್ವೀಟರ್ ಖಾತೆಯಿಂದ ಕಾಳಿಕಾ ದೇವಿಯ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಲಾಗಿತ್ತು. ಈ ಕುರಿತು ಟ್ವೀಟರ್ ಸಂಸ್ಥೆಗೆ ಪೋಸ್ಟ್ ತೆಗೆಯುವಂತೆ ಕಿರಣ್ ಅರಾಧ್ಯ ಮನವಿ ಮಾಡಿದ್ದರು.
ಬೆಂಗಳೂರು: ಟ್ವೀಟರ್ನಲ್ಲಿ ಕಾಳಿ ದೇವಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಿಂದಾಗಿ ಪ್ರಸಿದ್ದ ಜಾಲತಾಣ ಟ್ವೀಟರ್ ಸಂಸ್ಥೆ ಮೇಲೆ FIR ದಾಖಲು ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಲಯದ ಅದೇಶದಂತೆ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದ್ದು, ಕಿರಣ್ ಅರಾಧ್ಯ ಎಂಬುವರು ನೀಡಿದ ದೂರಿನನ್ವಯ FIR ದಾಖಲು ಮಾಡಲಾಗಿದೆ. ಅರಮಿನ್ ನವಾಬಿ ಎಂಬ ಟ್ವೀಟರ್ ಖಾತೆಯಿಂದ ಕಾಳಿಕಾ ದೇವಿಯ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಲಾಗಿತ್ತು. ಈ ಕುರಿತು ಟ್ವೀಟರ್ ಸಂಸ್ಥೆಗೆ ಪೋಸ್ಟ್ ತೆಗೆಯುವಂತೆ ಕಿರಣ್ ಅರಾಧ್ಯ ಮನವಿ ಮಾಡಿದ್ದರು.
ಆದರೆ ಪೋಸ್ಟ್ ತೆಗೆಯದ ಕಾರಣ ಕಿರಣ್, ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಪೋಸ್ಟ್ ಮಾಡಿದ್ದ ಅರ್ಮಿನ್ ನವಾಬಿ, ಟ್ವೀಟರ್ ಸಂಸ್ಥೆ, ಸಿ ಇಓ ಜಾಕ್ ಡೋರ್ಸಿ, ಹಾಗೂ ಭಾರತದ ಮೂವರು ಟ್ವೀಟರ್ ನಿರ್ದೇಶಕರಾದ ಮಹೀಮ್ ಕೌಲ್, ಮನೀಷ್ ಮಹೇಶ್ವರಿ, ಮಾಯ ಹರಿ ಸೇರಿ ಒಟ್ಟು ಏಳು ಜನರ ಮೇಲೆ FIR ದಾಖಲು ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ 67(a) ಹಾಗೂ ಐಪಿಸಿಯ 292a 295a, ಹಾಗೂ 298 ಕಾಯ್ದೆಯಡಿಯಲ್ಲಿ FIR ದಾಖಲಿಸಲಾಗಿದೆ.
ಹಿಂದೂ ಧರ್ಮದ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ ಕಿಡಿಗೇಡಿಗೆ ಬಿತ್ತು ಚಪ್ಪಲಿ ಏಟು