ಮುಂಬೈ ನವೆಂಬರ್ 01: ಆರು ತಿಂಗಳ ಅವಧಿಯಲ್ಲಿ ಮುಂಬೈನ (Mumbai) ಜೆಮ್ಸ್ ಕಂಪನಿಯ ಅಂಗಡಿಯಿಂದ ₹ 5.62 ಕೋಟಿ ಮೌಲ್ಯದ ವಜ್ರಗಳನ್ನು (Diamond) ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಸಂಸ್ಥೆಯ ಇಬ್ಬರು ಉದ್ಯೋಗಿಗಳು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಇಲ್ಲಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಭಾರತ್ ಡೈಮಂಡ್ ಬೋರ್ಸ್‌ನಲ್ಲಿ (Bharat Diamond Bourse) ಮಳಿಗೆ ಹೊಂದಿರುವ ಜೆಬಿ ಅಂಡ್ ಬ್ರದರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಲ್ಲಿ ಒಬ್ಬರಾದ ಸಂಜಯ್ ಶಾ ಅವರು ತಮ್ಮ ಸ್ಟಾಕ್‌ನಿಂದ ₹ 5.62 ಕೋಟಿ ಮೌಲ್ಯದ ವಜ್ರಗಳು ಕಾಣೆಯಾಗಿದೆ ಎಂದು ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಬಿಕೆಸಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಸಂಸ್ಥೆಯ ಉದ್ಯೋಗಿಗಳಾದ ಕಾಂದಿವಲಿಯ ಪ್ರಶಾಂತ್ ಶಾ ಮತ್ತು ವಿಶಾಲ್ ಶಾ ಅವರು ಏಪ್ರಿಲ್‌ನಿಂದ ತಮ್ಮ ಅಂಗಡಿಯಿಂದ ವಜ್ರಗಳನ್ನು ಕದಿಯುತ್ತಿದ್ದಾರೆ ಎಂದು ದೂರುದಾರರು ಶಂಕಿಸಿದ್ದಾರೆ ಎಂದು ಅವರು ಹೇಳಿದರು.
ಸಂಸ್ಥೆಯ ಮಾಜಿ ಉದ್ಯೋಗಿ ನೀಲೇಶ್ ಶಾ, ಕದ್ದ ವಜ್ರಗಳನ್ನು ಮಾರಾಟ ಮಾಡಲು ಇಬ್ಬರಿಗೆ ಸಹಾಯ ಮಾಡಿದ್ದಾರೆ ಎಂದು ಎಫ್‌ಐಆರ್ ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿದೇಶದಿಂದ ಪಂಜಾಬ್ಗೆ ಬಂದು ಪತ್ನಿಯನ್ನು ಹೊಡೆದು ಕೊಂದ ಪತಿ
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ 420 (ವಂಚನೆ) ಸೇರಿದಂತೆ ಸಂಬಂಧಿತ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ