Crime News: ಪ್ರೇಮ ಸಮಸ್ಯೆಯಿಂದ 17 ವರ್ಷದ ಯುವತಿ ಮೇಲೆ ಯುವಕನಿಂದ ಗುಂಡಿನ ದಾಳಿ

|

Updated on: Sep 09, 2024 | 7:09 PM

ಮಧುರೈನ ಮೇಲೂರು ಜಿಲ್ಲೆಯ ಯುವಕ ಸೆಲ್ವಂ ಎಂಬಾತ ದಿಂಡಿಗಲ್ ಸಮೀಪದ ನಟ್ಟಂ ಪ್ರದೇಶದ 17 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಆಗಾಗ ಭೇಟಿಯಾಗಿ ಮಾತನಾಡುತ್ತಿದ್ದರು. ಈ ವೇಳೆ 2 ದಿನಗಳ ಹಿಂದೆ ಸೆಲ್ವಂ ಸಂಬಂಧಿಕರ ಮದುವೆಗೆ ತೆರಳಿದ್ದ. ಅಲ್ಲಿ ಅವನು ತನ್ನ ಪ್ರೇಯಸಿಯಾದ 17 ವರ್ಷದ ಹುಡುಗಿಯನ್ನು ಮನೆಗೆ ಕರೆದಿದ್ದ.

Crime News: ಪ್ರೇಮ ಸಮಸ್ಯೆಯಿಂದ 17 ವರ್ಷದ ಯುವತಿ ಮೇಲೆ ಯುವಕನಿಂದ ಗುಂಡಿನ ದಾಳಿ
ಸಾಂದರ್ಭಿಕ ಚಿತ್ರ
Follow us on

ಮಧುರೈ: ಯುವಕನೊಬ್ಬ ಪಿಸ್ತೂಲ್​ನಿಂದ ಬಾಲಕಿಗೆ ಗುಂಡು ಹಾರಿಸಿದ ಘಟನೆ ದಿಂಡಿಗಲ್ ಜಿಲ್ಲೆಯ ನಥಂ ಬಳಿ ನಡೆದಿದೆ. ಈತ 17 ವರ್ಷದ ಬಾಲಕಿಯ ಮೇಲೆ ಕಂಟ್ರಿ ಗನ್ ನಿಂದ ಹಲ್ಲೆ ನಡೆಸಿರುವ ಘಟನೆ ಭಾರೀ ಆಘಾತಕ್ಕೆ ಕಾರಣವಾಗಿದೆ. ಮಧುರೈನ ಮೇಲೂರು ಜಿಲ್ಲೆಯ ಯುವಕ ಸೆಲ್ವಂ ದಿಂಡಿಗಲ್ ಸಮೀಪದ ನಟ್ಟಂ ಪ್ರದೇಶದ 17 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಆಗಾಗ ಭೇಟಿಯಾಗಿ ಮಾತನಾಡುತ್ತಿದ್ದರು. ಈ ವೇಳೆ 2 ದಿನಗಳ ಹಿಂದೆ ಸೆಲ್ವಂ ಸಂಬಂಧಿಕರ ಮದುವೆಗೆ ತೆರಳಿದ್ದ. ಅಲ್ಲಿ ತನ್ನ ಪ್ರೇಯಸಿಯಾದ 17 ವರ್ಷದ ಹುಡುಗಿಯನ್ನು ಕರೆದು ಮಾತನಾಡಿಸಿದ್ದ. ಆಗ ಸೆಲ್ವಂ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು.

ಇದರಿಂದ ಕುಪಿತಗೊಂಡ ಸೆಲ್ವಂ ತನ್ನ ಸಂಬಂಧಿಕರ ಮನೆಯಲ್ಲಿದ್ದ ಕಂಟ್ರಿ ಗನ್ ತೆಗೆದುಕೊಂಡು ಆಕೆಯನ್ನು ನೋಡಲು ಹೋಗಿದ್ದ. ನಂತರ ಆ ಹುಡುಗಿಯನ್ನು ಕಂಟ್ರಿ ಗನ್ ನಿಂದ ಶೂಟ್ ಮಾಡಿದ್ದಾನೆ. ಇದರಿಂದ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾಳೆ. ಇದನ್ನು ನೋಡಿದ ಸೆಲ್ವಂ ಆಘಾತಕ್ಕೊಳಗಾಗಿ, ಕೋಪದಲ್ಲಿ ತಾನು ತಪ್ಪು ಮಾಡಿದೆ ಎಂದು ಪಶ್ಚಾತ್ತಾಪ ಪಟ್ಟಿದ್ದಾನೆ. ನಂತರ ಭಯದಿಂದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿ: Crime News: ಟಿವಿ ವಾಲ್ಯೂಮ್ ಯಾಕಿಷ್ಟು ಜೋರಾಗಿದೆ? ಎಂದ ವ್ಯಕ್ತಿಯ ಕತ್ತು ಕತ್ತರಿಸಿ ಕೊಲೆ

ಇದನ್ನು ಕಂಡ ಅಕ್ಕಪಕ್ಕದ ಮನೆಯವರು ಕೂಡಲೇ ಇಬ್ಬರನ್ನೂ ರಕ್ಷಿಸಿ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಇಬ್ಬರನ್ನೂ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ