ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ ವಾಷಿಂಗ್​ ಮಷಿನ್​ನಲ್ಲಿ ಬಚ್ಚಿಟ್ಟಿದ್ದ ಮಹಿಳೆ

ಮಹಿಳೆಯೊಬ್ಬರು ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ ಮನೆಯ ವಾಷಿಗ್ ಮಷಿನ್​ನಲ್ಲಿ ಬಚ್ಚಿಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಂಗಮ್ಮಾಳ್ ಎಂಬಾಕೆ 3 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಮಹಿಳೆ, ಆ ಬಾಲಕನ ತಂದೆಯೊಂದಿಗೆ ದ್ವೇಷವಿದ್ದ ಹಿನ್ನೆಲೆಯಲ್ಲಿ ಬಾಲಕನನ್ನು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಸಂಜಯ್ ಬೆಳಗ್ಗೆ ಮನೆಯ ಬಳಿ ಆಟವಾಡುತ್ತಿದ್ದ, ಆದರೆ ಬಾಲಕನ ತಾಯಿ ರಮ್ಯಾ ಮಗನನ್ನು ಅಂಗನವಾಡಿಗೆ ಕರೆದೊಯ್ಯಬೇಕೆಂದು ಹುಡುಕಾಡಿದಾಗ ಎಲ್ಲೂ ಕಾಣಿಸಿರಲಿಲ್ಲ.

ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ ವಾಷಿಂಗ್​ ಮಷಿನ್​ನಲ್ಲಿ ಬಚ್ಚಿಟ್ಟಿದ್ದ ಮಹಿಳೆ
ಬಾಲಕ
Follow us
|

Updated on: Sep 10, 2024 | 8:57 AM

ಮಹಿಳೆಯೊಬ್ಬರು ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ ವಾಷಿಂಗ್​ ಮೆಷಿನ್​ನಲ್ಲಿ ಬಚ್ಚಿಟ್ಟಿರುವ ಘಟನೆ ತಮಿಳುನಾಡುನಲ್ಲಿ ನಡೆದಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ತಾಲೂಕಿನ ಆತುಕುರಿಚಿ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ. ರಾಧಾಪುರಂ ಪೊಲೀಸರು ಬಾಲಕನನ್ನು ಕಟ್ಟಡ ಕಾರ್ಮಿಕ ವಿಘ್ನೇಶ್ ಅವರ ಪುತ್ರ ಸಂಜಯ್ ಎಂದು ಗುರುತಿಸಿದ್ದಾರೆ.

ತಂಗಮ್ಮಾಳ್ ಎಂಬಾಕೆ 3 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಮಹಿಳೆ, ಆ ಬಾಲಕನ ತಂದೆಯೊಂದಿಗೆ ದ್ವೇಷವಿದ್ದ ಹಿನ್ನೆಲೆಯಲ್ಲಿ ಮಗುವನ್ನು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಸಂಜಯ್ ಬೆಳಗ್ಗೆ ಮನೆಯ ಬಳಿ ಆಟವಾಡುತ್ತಿದ್ದ, ಆದರೆ ಬಾಲಕನ ತಾಯಿ ರಮ್ಯಾ ಮಗನನ್ನು ಅಂಗನವಾಡಿಗೆ ಕರೆದೊಯ್ಯಬೇಕೆಂದು ಹುಡುಕಾಡಿದಾಗ ಎಲ್ಲೂ ಕಾಣಿಸಿರಲಿಲ್ಲ.

ವಿಘ್ನೇಶ್ ರಾಧಾಪುರಂ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ಆತನ ಬೀದಿಯಲ್ಲಿರುವ ಮನೆಗಳಲ್ಲಿ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂಜಯ್ ಅವರ ಮೃತದೇಹವನ್ನು ಗೋಣಿಚೀಲದಲ್ಲಿ ಸುತ್ತಿ ತಂಗಮ್ಮಾಳ್ ಅವರ ಮನೆಯಲ್ಲಿರುವ ವಾಷಿಂಗ್​ ಮೆಷಿನ್​ನಲ್ಲಿ ಬಚ್ಚಿಟ್ಟಿದ್ದನ್ನು ಪೊಲೀಸ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಮತ್ತಷ್ಟು ಓದಿ: Crime News: ಕಿಡ್ನಾಪ್ ಮಾಡಿ ಜೈಲಿಗೆ ಹೋಗಿದ್ದ ಆರೋಪಿಯಿಂದ ಮತ್ತೆ ಅದೇ ಬಾಲಕಿ ಮೇಲೆ ಅತ್ಯಾಚಾರ

ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಎನ್ ಸಿಲಂಬರಸನ್, ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್ ಯೋಗೇಶ್ ಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ವಿಚಾರಣೆ ನಡೆಸಿದರು.

ಪೊಲೀಸರು ತಂಗಮ್ಮಾಳ್ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಿದರು ಎಂದು ಮೂಲಗಳು ತಿಳಿಸಿವೆ. ವಿಘ್ನೇಶ್ ಮತ್ತು ತಂಗಮ್ಮಾಳ್ ನಡುವೆ ಹಿಂದಿನ ದ್ವೇಷವಿತ್ತು ಎಂದು ಮೂಲಗಳು ತಿಳಿಸಿವೆ. ಈ ದ್ವೇಷದ ಹಿನ್ನೆಲೆಯಲ್ಲಿ ತಂಗಮ್ಮಾಳ್ ಬಾಲಕನನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕೊಲೆಯಲ್ಲಿ ಬೇರೆಯವರ ಕೈವಾಡವಿದೆಯೇ ಎಂದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಪಘಾತದಲ್ಲಿ ತಂಗಮ್ಮಾಳ್ ತನ್ನ ಮಗನನ್ನು ಕಳೆದುಕೊಂಡಿದ್ದರಿಂದ ಆಕೆಯ ಮಾನಸಿಕ ಸ್ಥಿತಿ ಅಷ್ಟು ಸರಿಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ