AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೊಡ್ಡಬಳ್ಳಾಪುರ ಕೋರ್ಟ್

ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿ ಬಳಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಭೀಕರ ಕೊಲೆ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ ಕೋರ್ಟ್, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮೃತಳ ಪೋಷಕರಿಗೆ ನ್ಯಾಯ ಸಿಕ್ಕಂತಾಗಿದೆ.

ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೊಡ್ಡಬಳ್ಳಾಪುರ ಕೋರ್ಟ್
ಸಾಂದರ್ಭಿಕ ಚಿತ್ರImage Credit source: thedailystar
TV9 Web
| Updated By: Rakesh Nayak Manchi|

Updated on: Jan 27, 2023 | 2:25 PM

Share

ದೊಡ್ಡಬಳ್ಳಾಪುರ: ಅನುಮಾನದ ಪೆಂಡ ಭೂತ ತಲೆಗೆ ಹತ್ತಿಕೊಂಡು ತನ್ನ ಪತ್ನಿಯನ್ನೇ ಭೀಕರವಾಗಿ ಕೊಂದ ಆರೋಪಿ ಪತಿಗೆ (Husband Kills Wife) ದೊಡ್ಡಬಳ್ಳಾಪುರ ನ್ಯಾಯಾಲಯವು (Doddaballapura Court) ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ಆದೇಶಿಸಿದೆ. ಇತ್ತ ಆರೋಪಿಗೆ ತಕ್ಕ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸುತ್ತಿದ್ದಂತೆ ಮೃತಳ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. 2018ರಲ್ಲಿ ಪತಿ ರಾಜೇಶ್ ತನ್ನ ಪತ್ನಿಯಾದ ಲಕ್ಷ್ಮೀ ಎಂಬಾಕೆಯನ್ನು ಭೀಕರವಾಗಿ ಕೊಂದು ದೇಹ ತುಂಡರಿಸಿ ಕೆರೆಯಲ್ಲಿ ಹೂತಿದ್ದನು. ಸುದೀರ್ಘ ತನಿಖೆ ನಂತರ ಕೋರ್ಟ್, ಆರೋಪಿಗೆ‌‌ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ದೊಡ್ಡಬಳ್ಳಾಪುರ ನಗರದಲ್ಲಿ ರಾಜೇಶ್ ಎಂಬಾತ ಲಕ್ಷ್ಮೀಯನ್ನು ವಿವಾಹವಾಗಿದ್ದನು. ಆರಂಭದಲ್ಲಿ ಸುಂದರವಾಗಿಯೇ ಸಂಸಾರ ಸಾಗುತ್ತಿತ್ತು. ಬಳಿಕ ಅದೇನಾಯ್ತು ಗೊತ್ತಿಲ್ಲ ಪತಿ ರಾಜೇಶ್ ತಲೆಯೊಳಗೆ ಅನುಮಾನದ ಪೆಂಡ ಭೂತ ಹೊಕ್ಕಿದೆ. ಅದರಂತೆ ಲಕ್ಷ್ಮೀಯನ್ನು ರಾಜೇಶ್ ಅನುಮಾನದಿಂದಲೇ ನೋಡುತ್ತಿದ್ದನು. ಅಲ್ಲದೆ, ಪತ್ನಿಯನ್ನು 2018ರಲ್ಲಿ ಭೀಕರವಾಗಿ ಕೊಲೆ ಮಾಡಿದ್ದನು.

ಇದನ್ನೂ ಓದಿ: ಹೊಸಕೋಟೆ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ, ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಜಮೀನಿನಲ್ಲಿಯೇ ಹೂತುಹಾಕಿದ ಭೂಪ

ಲಕ್ಷ್ಮೀಯನ್ನು ಕೊಲೆ ಮಾಡಿದ ನಂತರ ಮೃತದೇಹವನ್ನು ಪೀಸ್ ಪೀಸ್ ಮಾಡಿದ ರಾಜೇಶ್ ಕೆರೆಯೊಂದರಲ್ಲಿ ಹೂತಿಟ್ಟಿದ್ದನು. ಪ್ರಕರಣ ಸಂಬಂಧ ತನಿಖೆ ನಡೆಸಿದ ಇನ್ಸಪೇಕ್ಟರ್ ಸಿದ್ದರಾಜು, ರಾಜೇಶ್​ನನ್ನು ಬಂಧಿಸಿದ್ದರು. ಬಳಿಕ ಸುದೀರ್ಘ ತನಿಖೆ ನಡೆಸಿದ ಇನ್ಸಪೇಕ್ಟರ್ ಸಿದ್ದರಾಜು, ಪ್ರಕರಣದ ಸಾಕ್ಷಿ ಕಲೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಆರೋಪಿಗೆ ಶಿಕ್ಷೆಯೂ ಪ್ರಕಟಗೊಂಡಿತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ