ಹೊಸಕೋಟೆ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ, ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಜಮೀನಿನಲ್ಲಿಯೇ ಹೂತುಹಾಕಿದ ಭೂಪ

TV9kannada Web Team

TV9kannada Web Team | Edited By: Kiran Hanumant Madar

Updated on: Jan 25, 2023 | 10:52 PM

ಜಿಲ್ಲೆಯ ಬೈರನಹಳ್ಳಿ ಗ್ರಾಮದ ಪ್ರಕಾಶ್ ಎನ್ನುವವನು ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಅನುಮಾನಪಟ್ಟು ಲೇಬರ್ ಕಾಂಟ್ರಕ್ಟರ್ ಆಗಿದ್ದ ನಂದೀಶ್​ ಎಂಬಾತನನ್ನ ಕೊಲೆ ಮಾಡಿದ್ದಾನೆ.

ಹೊಸಕೋಟೆ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ, ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಜಮೀನಿನಲ್ಲಿಯೇ ಹೂತುಹಾಕಿದ ಭೂಪ
ಸಾಂದರ್ಭಿಕ ಚಿತ್ರ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಲೇಬರ್ ಕಾಂಟ್ರಕ್ಟರ್ ನಂದೀಶ್​ ಎಂಬಾತನನ್ನ, ಬೈರನಹಳ್ಳಿ ಗ್ರಾಮದ ಪ್ರಕಾಶ್ ಎನ್ನುವವನು ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಶಂಕಿಸಿ ಕೊಲೆ ಮಾಡಿ ತನ್ನ ಜಮೀನಿನಲ್ಲಿ ಹೂತುಹಾಕಿ ಜಮೀನನ್ನ ಸಮತಟ್ಟು ಮಾಡಿಸಿದ್ದಾನೆ. ಇದೀಗ ಆತನನ್ನ ಕಂಬಿಯ ಹಿಂದೆ ಹಾಕಿದ್ದಾರೆ ಪೊಲೀಸರು. ದೊಡ್ಡನಲ್ಲೂರಹಳ್ಳಿಯ ನಂದೀಶ್​ನು ಕಳೆದ ಹಲವು ವರ್ಷಗಳಿಂದ ನರಸಾಪುರ, ಪಿಲ್ಲಗುಂಪೆ ಮತ್ತು ಮಾಲೂರು ಕೈಗಾರಿಕಾ ಪ್ರದೇಶಗಳಿಗೆ ಜನರನ್ನ ಕೆಲಸಕ್ಕೆ ಸೇರಿಸುವ ಲೇಬರ್ ಕಾಂಟ್ರಕ್ಟರ್ ಕೆಲಸ ಮಾಡ್ತಿದ್ದ. ಹೀಗಾಗಿ ದಿನ ಬೆಳಗಾದರೆ ದಿನಕ್ಕೋಂದು ಊರು ಸುತ್ತಾಡುವ ನಂಧೀಶನಿಗೆ ಬೈರನಹಳ್ಳಿ ಸಹ ಚಿರ ಪಿರಿಚಿತವಾಗಿದ್ದು ಸಾಕಷ್ಟು ಜನರನ್ನ ಗ್ರಾಮದಿಂದ ಕೆಲಸಕ್ಕೆ ಕರೆದುಕೊಂಡು ಹೋಗಿದ್ನಂತೆ. ಆಗಾಗ ಗ್ರಾಮಕ್ಕೆ ಬಂದು ಹೋಗ್ತಿದ್ದ ನಂಧೀಶನಿಗೆ ಇದೇ ಕೊಲೆ ಆರೋಪಿ ಪ್ರಕಾಶನ ಪತ್ನಿ ಜೊತೆ ಪರಿಚಯವಾಗಿದ್ದು ಆಕೆಯ ಜೊತೆ ಪೋನ್​ನಲ್ಲಿ ಮಾತನಾಡ್ತಿದ್ನಂತೆ. ಹೀಗಾಗಿ ಪೋನ್​ನಲ್ಲಿ ಮಾತನಾಡುತ್ತಾ ಆಗಾಗ ಮನೆಗೆ ಬರ್ತಿದ್ದನ್ನು ನೋಡಿದ್ದ ಪ್ರಕಾಶನಿಗೆ ನಂಧೀಶನ ಮೇಲೆ ಕೋಪ ಬಂದಿದ್ದು, ಹಲವು ದಿನಗಳಿಂದ ನಂದೀಶನಿಗಾಗಿ ಕಾದು ಕುಳಿತಿದ್ದಾನೆ.

ಈ ವೇಳೆ ಕಳೆದ 13 ನೇ ತಾರಿಕು ಶುಕ್ರವಾರ ಕಾರ್ಮಿಕರಿಗೆ ಪೇಮೆಂಟ್ ಮಾಡಿ ಬರ್ತಿನಿ ಎಂದು ನಂಧೀಶ ತನ್ನ ಬೈಕ್​ನಲ್ಲಿ ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಿಂದ ಬೈರನಹಳ್ಳಿಗೆ ಬಂದಿದ್ದಾನೆ. ಈ ವೇಳೆ ಪ್ರಕಾಶನ ಮನೆಯಿಂದ ಕೂಗಳತೆ ದೂರದಲ್ಲೆ ನಂಧೀಶನನ್ನ ತಡೆದ ಪ್ರಕಾಶ, ನಿನ್ನ ಜೊತೆ ಮಾತನಾಡಬೇಕು ಅಂದಿದ್ದಾನೆ. ಈ ವೇಳೆ ರಸ್ತೆಯಲ್ಲೆ ಮಾತನಾಡು ಅಂದ್ರೆ ಇಲ್ಲಿ ಮಾತನಾಡಿದ್ರೆ ಅವಮಾನವಾಗುತ್ತೆ ತೋಟದ ಕಡೆ ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಏನೋ ಮಾತನಾಡಲು ಕರೆಯುತ್ತಿದ್ದಾನೆ ಅಂತ ನಂದೀಶ ಸಹ ಬೈಕ್​ನ್ನ ರಸ್ತೆ ಬದಿಯಲ್ಲೆ ನಿಲ್ಲಿಸಿ ತೋಟದ ಕಡೆ ಪ್ರಕಾಶನ ಜೊತೆ ಹೋಗಿದ್ದಾನೆ. ತೋಟದ ಬಳಿ ಹೋಗ್ತಿದ್ದಂತೆ ನಂದೀಶನ ಪೋನ್ ಕೇಳಿದ ಪ್ರಕಾಶ ತನ್ನ ಪತ್ನಿ ನಂಬರ್ ಮತ್ತು ಆಕೆಗೆ ಕರೆ ಮಾಡುವ ಬಗ್ಗೆ ವಿಚಾರಿಸಿದ್ದು ಇದೇ ವಿಚಾರವಾಗಿ ಕೆಲ ಕಾಲ ನಂದೀಶನ ಜೊತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಎಷ್ಟೇ ಹೇಳಿದ್ರು ಅಕ್ರಮ ಸಂಬಂಧವಿಟ್ಟುಕೊಂಡಿದ್ದಿಯಾ ಅಂತ ಗಲಾಟೆ ಮಾಡಿದವನೆ ನಂದೀಶನ ತಲೆಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ:ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ

ನಂದೀಶನ ಶವವನ್ನ ಹೊಲದಲ್ಲಿ ಹೂತುಹಾಕಿ ಜಮೀನನ್ನ ಸಮತಟ್ಟು ಮಾಡಿಸಿದ್ದ ಪ್ರಕಾಶ

ನಂದೀಶ ಸಾವನ್ನಪುತ್ತಿದ್ದಂತೆ ಪ್ರಕಾಶನ ಬಳಿಯಿದ್ದ ಟಾಟಾ ಸುಮೋ ಒಳಗಡೆಗೆ ಪ್ಲಾಸ್ಟಿಕ್ ಪೇಪರ್​ನಲ್ಲಿ ನಂದೀಶನ ಮೃತದೇಹವನ್ನ ಸುತ್ತಿದ್ದು ಟಾಟಾ ಸುಮೋ ಸೀಟ್ ಕೆಳಗಡೆಯಿಟ್ಟು ಕಾರನ್ನ ಜಮೀನಿನ ಬಳಿಯೆ ನಿಲ್ಲಿಸಿ ಹೋಗಿದ್ದಾನೆ. ಇನ್ನೂ ಜಮೀನಿನ ಬಳಿಯೆ ಕಾರನ್ನ ಲಾಕ್ ಮಾಡಿಕೊಂಡು ಹೊರಟ ಪ್ರಕಾಶ ನಂತರ ಗ್ರಾಮದಲ್ಲಿ ಜೆಸಿಬಿಯೊಂದನ್ನ ಜಮೀನಿನಲ್ಲಿ ಕಸ ಹಾಕಲು ಗುಂಡಿ ತೆಗೆಯಬೇಕು ಬಾ ಅಂತ ಕರೆತಂದಿದ್ದು ತೋಟದ ಮಧ್ಯದಲ್ಲಿ ಒಂದಷ್ಟು ಆಳಕ್ಕೆ ಗುಂಡಿಯನ್ನ ಅಗೆಸಿದ್ದಾನೆ. ಅಲ್ಲದೆ ಗುಂಡಿ ಆಳಕ್ಕೆ ಅಗೆಸಿದ ನಂತರ ಆಳ ಜಾಸ್ತಿಯಾಯ್ತು ಅಂತ ಒಂದಷ್ಟು ಮಣ್ಣನ್ನ ಹಳ್ಳಕ್ಕೆ ತುಂಬಿಸಿದ್ದು ನಂತರ ಗುಂಡಿಯನ್ನ ಹಾಗೆ ಉಳಿಸಿ ಜೆಸಿಬಿಯನ್ನ ವಾಪಸ್ ಕಳಿಸಿದ್ದಾನೆ. ಇನ್ನು ಜೆಸಿಬಿಯವನು ಪೇಮೆಂಟ್ ತೆಗೆದುಕೊಂಡು ಹೋಗ್ತಿದ್ದಂತೆ ಹಳ್ಳಕ್ಕೆ ಹಾಕಿದ್ದ ಮಣ್ಣಿನಲ್ಲಿಗೆ ನಂದೀಶನ ಮೃತದೇಹವನ್ನ ಕಾರಿನಿಂದ ತಂದು ಹಾಕಿದ್ದು ನಂತರ ಅಲ್ಲೆ ಮಣ್ಣು ಮಾಡಿ ಮನೆಗೆ ವಾಪಸ್ ಆಗಿದ್ದಾನೆ.

ಬೆಳಗ್ಗೆ ಮತ್ತೆ ಯಾರಿಗಾದ್ರು ಹೆಣದ ಗುರುತು ಸಿಗಬಹುದು ಎಂದು ರೋಲರ್ ಒಂದನ್ನ ಜಮೀನಿಗೆ ಕರೆಸಿದ್ದು ಮೃತದೇಹವನ್ನ ಹೂತಿಟ್ಟಿದ್ದ ಜಮೀನಿನ ತುಂಬಾ ರೋಲರ್ ಹಾಕಿಸಿ ಕ್ಲೀನ್ ಮಾಡಿಸಿದ್ದು ನಂತರ ಏನು ಆಗಿಲ್ಲ ಎಂಬಂತೆ ಮನೆಯತ್ತ ಬಂದಿದ್ದಾನೆ. ಇನ್ನು ಈ ವೇಳೆ ಕೊಲೆಯಾದ ನಂದೀಶ ಬಂದಿದ್ದ ಬೈಕ್ ಮತ್ತು ಆತನ ಮೊಬೈಲ್ ಅನ್ನ ಎತ್ತಿಕೊಂಡವನೆ ಬೈಕ್ ಅನ್ನ ಗಿಡಗಳ ಮಧ್ಯೆ ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದು ಮೊಬೈಲ್​ನ್ನ ತೆಗೆದುಕೊಂಡು ನೆರವಾಗಿ ಕೋಲಾರ ಹೊಸಕೋಟೆಯ ಹೈವೆಗೆ ಬಂದಿದ್ದಾನೆ. ಈ ವೇಳೆ ನಂದೀಶನ ಮೊಬೈಲ್​ನ್ನ ಹೆದ್ದಾರಿಯಲ್ಲಿದ್ದ ಮಂಗಳ ಮುಖಿಯರ ಮನೆ ಬಳಿ ಹಾಕಿ ನಂತರ ಸೈಲೆಂಟ್ ಆಗಿ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ:‘ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಯುವಕರು ಬಲಿ? RSS​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಸಿದ್ದು ಪ್ರಶ್ನೆ

ಆರೋಪಿ ಪ್ರಕಾಶ ಸಿಕ್ಕಿಬಿದ್ದಿದ್ದೆ ರೋಚಕ

ಕಾರ್ಮಿಕರಿಗೆ ಹಣ ಕೊಟ್ಟು ಬರ್ತಿನಿ ಅಂತ ಹೋಗಿದ್ದ ನಂದೀಶ ಎರಡು ದಿನಗಳಾದ್ರು ಮನೆಗೆ ವಾಪಸ್ ಬಾರದಿದ್ದು, ಪೋನ್ ಸಹ ಸ್ವಿಚ್ ಆಪ್ ಆಗಿದ್ದ ಕಾರಣ ಆತಂಕಗೊಂಡ ಕುಟುಂಬಸ್ಥರು ಘಟನೆ ನಡೆದ ಎರಡು ದಿನಗಳ ಬಳಿಕ ನಂದಗುಡಿ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದಾರೆ. ಈ ವೇಳೆ ಠಾಣೆಯಲ್ಲಿದ್ದ ಸಬ್ ಇನ್ಸಪೇಕ್ಟರ್ ಶಂಕರಪ್ಪ 53 ವರ್ಷದ ನಂದೀಶ ಎಲ್ಲಿಗೆ ಹೋದ? ಹಣದೊಂದಿಗೆ ಹೋಗಿದಕ್ಕೆ ಯಾರಾದ್ರು ಏನಾದ್ರು ಮಾಡಿದ್ರಾ ಎನ್ನುವ ಅನುಮಾನದಲ್ಲೆ ನಾಪತ್ತೆ ದೂರನ್ನ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಶೋದ ಕಾರ್ಯ ನಡೆಸಿದಾಗ ಮಂಗಳ ಮುಖಿಯರ ಮನೆಯ ಬಳಿ ನಂದೀಶನ ಮೊಬೈಲ್ ಪತ್ತೆಯಾಗಿದೆ.

ಎಲ್ಲ ಕಡೆಗಳಿಂದ ಹುಡುಕಾಡಿ ಯಾವುದಕ್ಕೂ ಇರಲಿ ಅಂತ ನಂದೀಶನ ಕಾಲ್ ಲಿಸ್ಟ್ ಚೆಕ್ ಮಾಡಿಸಿದ್ದಾರೆ. ಈ ವೇಳೆ ನಂದೀಶನ ಮೊಬೈಲ್​ನಿಂದ ಕೊನೆಯದಾಗಿ ಪ್ರಕಾಶನ ಪತ್ನಿಗೆ ಕಾಲ್ ಹೋಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಪ್ರಕಾಶನ ಮನೆಯ ಬಳಿಗೆ ತೆರಳಿದ ಪೊಲೀಸರು ಪ್ರಕಾಶನ ಪತ್ನಿಯನ್ನ ವಿಚಾರಣೆ ಮಾಡಿದ್ದು ನಂತರ ಗಂಡ ಎಲ್ಲಿ ಅತ ಕೇಳಿದಾಗ ಆತ ಮನೆಯಲ್ಲಿಲ್ಲದಿರುವುದು ಗೊತ್ತಾಗಿದೆ. ಅಲ್ಲದೆ ಅಷ್ಟೊತ್ತಿಗಾಗಲೆ ಮನೆಗೆ ಪೊಲೀಸರು ಹಡುಕಿಕೊಂಡು ಬಂದಿರುವ ವಿಚಾರ ತಿಳಿದುಕೊಂಡ ಪ್ರಕಾಶ ನಂತರ ತನ್ನ ಪೋನ್ ಸ್ವಿಚ್ ಆಪ್ ಮಾಡಿಕೊಂಡು ಆ ಊರು ಈ ಊರು ಅಂತ ಸುತ್ತಾಡಲು ಮುಂದಾಗಿದ್ದಾನೆ.

ಇಷ್ಟೆಲ್ಲ ಆಗ್ತಿದ್ದಂತೆ ಪ್ರಕಾಶನ ಮೇಲಿನ ಅನುಮಾನಾ ನಂದಗುಡಿ ಎಸ್ಐ ಶಂಕರಪ್ಪ ಅಂಡ್ ಟೀಂ ಗೆ ಬಲವಾಗಿ ಕಾಡಿದ್ದು, ನಂತರ ಪ್ರಕಾಶನಿಗಾಗಿ ಪ್ರತ್ಯೇಕ ತಂಡವನ್ನ ರಚನೆ ಮಾಡಿ ಒಂದೇ ದಿನದಲ್ಲಿಯೇ ಪ್ರಕಾಶನನ್ನ ಕರೆತಂದು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನ ಪತ್ನಿ ಬಳಿ ನಂದೀಶ ಅನೈತಿಕ ಸಂಬಂಧವಿಟ್ಟುಕೊಂಡಿದ್ದು ಪೋನ್​ನಲ್ಲಿ ಹೆಚ್ಚಾಗಿ ಮಾತನಾಡ್ತಿದ್ದ ಎಂದು ತಾನೆ ಕೊಲೆ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಜೊತೆಗೆ ಕೊಲೆ ಮಾಡಿ ಎಲ್ಲಿ ಮೃತದೇಹ ಹಾಕಿದ್ದಿಯಾ ಅಂತ ಕೇಳಿದಾಗ ತನ್ನದೆ ಊರಿನ ತನ್ನದೆ ಜಮೀನಿನಲ್ಲಿ ಹೂತಿಟ್ಟಿದ್ದ ನಂದೀಶನ ಮೃತದೇಹದ ಜಾಗವನ್ನ ತೋರಿಸಿದ್ದಾನೆ. ಇನ್ನು ಪೊಲೀಸರು ಮೃತದೇಹವನ್ನ ಹೊರತೆಗೆದು ಶವಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ:ಟಿ.ನರಸೀಪುರದಲ್ಲಿ ಚಿರತೆ ದಾಳಿಗೆ ಬಾಲಕ ಸಾವು: ಘಟನೆ ಮರುಕಳಿಸಿದರೇ ಕೊಲೆ ಮಾಡುವುದಾಗಿ ಬಾಲಕನ ತಾತನಿಂದ ಅಧಿಕಾರಿಗೆ ಬೆದರಿಕೆ

ಪತ್ನಿಯ ಮೇಲಿನ ಅನುಮಾನದಿಂದ ಯಾವುದು ಸತ್ಯ ಯಾವುದು ಅಸತ್ಯ ಅನ್ನೂದನ್ನ ಸರಿಯಾಗಿ ತಿಳಿದುಕೊಳ್ಳದೆ ನಂದೀಶನನ್ನ ಕೊಲೆ ಮಾಡಿದ ಭೂಪ ಇದೀಗ ಮಾಡಿದ ತಪ್ಪಿಗೆ ಕಂಬಿ ಎಣಿಸಲು ಮುಂದಾಗಿದ್ರೆ ಇತ್ತ ಎರಡು ಕುಟುಂಬಗಳು ಮನೆಗಳಿಗೆ ಆಧಾರವಾಗಿದ್ದ ಮನೆ ಒಡೆಯನನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದು ಮಾತ್ರ ನಿಜಕ್ಕೂ ದುರಂತವೆ ಸರಿ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada