ಟಿ.ನರಸೀಪುರದಲ್ಲಿ ಚಿರತೆ ದಾಳಿಗೆ ಬಾಲಕ ಸಾವು: ಘಟನೆ ಮರುಕಳಿಸಿದರೇ ಕೊಲೆ ಮಾಡುವುದಾಗಿ ಬಾಲಕನ ತಾತನಿಂದ ಅಧಿಕಾರಿಗೆ ಬೆದರಿಕೆ

TV9kannada Web Team

TV9kannada Web Team | Edited By: Vivek Biradar

Updated on: Jan 22, 2023 | 12:40 PM

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಟಿ.ನರಸೀಪುರದಲ್ಲಿ ಚಿರತೆ ದಾಳಿಗೆ ಬಾಲಕ ಸಾವು: ಘಟನೆ ಮರುಕಳಿಸಿದರೇ ಕೊಲೆ ಮಾಡುವುದಾಗಿ ಬಾಲಕನ ತಾತನಿಂದ ಅಧಿಕಾರಿಗೆ ಬೆದರಿಕೆ
ಚಿರತೆ, ಮೃತ ಬಾಲಕ

ಮೈಸೂರು: ಜಿಲ್ಲೆಯ ಟಿ.ನರಸೀಪುರ (T Narasipura) ತಾಲೂಕಿನಲ್ಲಿ ಚಿರತೆ (Leopard) ದಾಳಿಗಳು ನಿಲ್ಲುತ್ತಿಲ್ಲ. ಚಿರತೆ ದಾಳಿಯಿಂದ ಅನೇಕರು ಗಾಯಗೊಂಡಿದ್ದಾರೆ ಮತ್ತು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಮತ್ತೆ ತಾಲೂಕಿನ ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಜಯಂತ್​ (11) ಮೃತ ಬಾಲಕ. ಜಯಂತ ನಿನ್ನೆ (ಜ.21) ರಂದು ನಾಪತ್ತೆಯಾಗಿದ್ದನು. ಇಂದು ಗ್ರಾಮದ ಹೊರವಲಯದಲ್ಲಿ ರುಂಡವಿಲ್ಲದೆ ಬಾಲಕನ ಶವ ಪತ್ತೆಯಾಗಿದೆ. ನಿನ್ನೆ ರಾತ್ರಿ ಬಾಲಕನನ್ನು ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.

ಅರಣ್ಯ ಸಂರಕ್ಷಣಧಿಕಾರಿಗೆ ಬಾಲಕನ ತಾತನಿಂದ ಧಮ್ಕಿ

ಇನ್ನೊಂದು ಸಾರಿ ಇಂತಹ ಪ್ರಕರಣ ನಡೆದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಅರಣ್ಯ ಸಂರಕ್ಷಣಧಿಕಾರಿ ಮಾಲತಿ ಪ್ರಿಯ ಮೃತ ಬಾಲಕನ ತಾತ ಅಪ್ಪಯ್ಯಗೌಡ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಚಿರತೆ ಓಡಾಡುತ್ತಿದೆ ಎಂದು ಎರಡು ಬಾರಿ ದೂರು ಕೊಟ್ಟಿದ್ದೇನೆ. ದೂರು ಕೊಟ್ಟರು ಕ್ರಮ ತೆಗೆದುಕೊಂಡಿಲ್ಲ. ತಾಲೂಕಿನಲ್ಲಿ ಇಂತಹದೇ ಇನ್ನೊಂದು ಸಾರಿ ಇಂತಹ ಪ್ರಕರಣ ನಡೆದರೆ ನಿನ್ನನ್ನೇ ಕೊಲೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇನ್ನು ಚಿರತೆ ನಾಲ್ವರನ್ನು ಬಲಿ ಪಡೆದರು ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಎಸ್​. ಸೋಮಶೇಖರ್ ಭೇಟಿ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇವರು ಬರಲು ಇನ್ನೆಷ್ಟು ಜನರ ಬಲಿ ಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿದರವಳ್ಳಿ ಗ್ರಾಮದಲ್ಲಿ 3 ಚಿರತೆ ಮರಿಗಳು ಪತ್ತೆ

ಟಿ.ನರಸೀಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಿರತೆ ಹಾವಳಿ ಹೆಚ್ಚಾಗಿದ್ದು, ಟಿ.ನರಸೀಪುರ ತಾಲೂಕಿನ ಚಿದರವಳ್ಳಿ ಗ್ರಾಮದ ಮಾದೇಗೌಡ ಎಂಬುವವರ ಕಬ್ಬಿನ ಗದ್ದೆಯಲ್ಲಿ 3 ಚಿರತೆ ಮರಿಗಳು ಪತ್ತೆಯಾಗಿವೆ. ಚಿರತೆ ಮರಿಗಳು ಸಿಕ್ಕಿರುವ ಸ್ವಲ್ಪ ದೂರದಲ್ಲೇ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

4 ತಿಂಗಳಲ್ಲಿ 4ನೇ ಬಲಿ

ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 4 ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಂದು (ಜ.22) ಚಿರತೆ ದಾಳಿಗೆ 11 ವರ್ಷದ ಬಾಲಕ ಜಯಂತ್​ ಸಾವನ್ನಪ್ಪಿದ್ದಾನೆ. ಈ ಹಿಂದೆ ತಾಲೂಕಿನಲ್ಲಿ ಚಿರತೆ ದಾಳಿಗೆ 3 ಮೃತಪಟ್ಟಿದ್ದರು. 2022ರ ಅ.31ರಂದು ಚಿರತೆ ದಾಳಿಗೆ ಎಂ.ಎಲ್. ಹುಂಡಿ ಗ್ರಾಮದ ಮಂಜುನಾಥ್ ಚೆನ್ನಮಲ್ಲಿಕಾರ್ಜುನ ಬೆಟ್ಟದಲ್ಲಿ ​ಮೃತಪಟ್ಟಿದ್ದರು.

2022ರ ಡಿ.1ರಂದು ಚಿರತೆ ದಾಳಿಯಿಂದ ಕೆಬ್ಬೆ ಹುಂಡಿ ಗ್ರಾಮದ ಮೇಘನಾ(23), 3 ದಿನದ ಹಿಂದೆ ಜ.20ರಂದು ಕನ್ನಾನಾಯಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ ವೃದ್ಧೆ ಸಿದ್ದಮ್ಮ(60) ಸಾವನ್ನಪ್ಪಿದ್ದರು.

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ

ತುಮಕೂರು: ಗುಬ್ಬಿ ತಾಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಹಲವು ತಿಂಗಳಿನಿಂದ ಆತಂಕ ಸೃಷ್ಟಿಸಿದ್ದ ಚಿರತೆ‌ ಕೊನೆಗೂ ಸೆರೆಯಾಗಿದ್ದು, ಚಿರತೆ ಸೆರೆಯಿಂದ ಅಕ್ಕ ಪಕ್ಕದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada