ದುರ್ಜನರ ಸಂಗ ಮಾಡಿ ಮಾಡದ ತಪ್ಪಿಗೆ ಜೀವ ತೆತ್ತ ಮೈಸೂರಿನ ಯುವಕ, ಸಜ್ಜನರ ಸಂಗ ಹೆಜ್ಜೇನ ಸವಿದಂತೆ ಎಂದು ಹೇಳಿದ್ದು ಇದಕ್ಕೆ

TV9kannada Web Team

TV9kannada Web Team | Edited By: Ramesh B Jawalagera

Updated on: Jan 21, 2023 | 8:16 PM

ಸಜ್ಜನರ ಸಂಗ ಹೆಜ್ಜೇನ ಸವಿದಂತೆ ದುರ್ಜನರ ಸಂಗ ಬಚ್ಚಲ ಕೊಚ್ಚೆಯಂತೆ. ಆದ್ರೆ, ಮೈಸೂರಿನ ಈ ಯುವಕ ದುರ್ಜನರ ಸಂಗ ಮಾಡಿ ಮಾಡದಿರುವ ತಪ್ಪಿಗೆ ಬಲಿಯಾಗಿದ್ದಾನೆ. ಯುವಕನ ಆತ್ಮಹತ್ಯೆಗೆ ಕಾರಣ ಏನು ಎಂದು ಗೊತ್ತಾಗಬೇಕಾದರೆ ಆತ ಬರೆದಿಟ್ಟ ಡೆತ್ ನೋಟ್ ಬಗ್ಗೆ ತಿಳಿದುಕೊಳ್ಳಲೇಬೇಕು. ಅದು ಈ ಕೆಳಗಿನಂತಿದೆ.

ದುರ್ಜನರ ಸಂಗ ಮಾಡಿ ಮಾಡದ ತಪ್ಪಿಗೆ ಜೀವ ತೆತ್ತ ಮೈಸೂರಿನ ಯುವಕ, ಸಜ್ಜನರ ಸಂಗ ಹೆಜ್ಜೇನ ಸವಿದಂತೆ ಎಂದು ಹೇಳಿದ್ದು ಇದಕ್ಕೆ
ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ಯುವಕ.

ಮೈಸೂರು: ಕೆಟ್ಟ ಅಭ್ಯಾಸಗಳಿಂದ ಮಾತ್ರ ಜೀವಕ್ಕೆ‌ ಸಂಚಕಾರ ಬರುವುದಿಲ್ಲ. ಕೆಟ್ಟ ಅಭ್ಯಾಸಗಳಿರುವವರ ಸಹವಾಸ ಮಾಡಿದ್ರೂ ಜೀವ ಹಾಗೂ ಜೀವನಕ್ಕೆ ಸಂಚಕಾರ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಸುದ್ದಿ ಸಾಕ್ಷಿ. ಹೌದು…ಬಾಳೆಹಣ್ಣು ತಿಂದವನು ತಪ್ಪಿಸಿಕೊಂಡ ಸಿಪ್ಪೆ‌ ಹಿಡಿದುಕೊಂಡಿದ್ದವನು ಸಿಕ್ಕಿ ಹಾಕಿಕೊಂಡ ಎನ್ನುವಂತೆ ಸ್ನೇಹಿತರು ಮಾಡಿದ್ದ ತಪ್ಪಿಗೆ ಮೈಸೂರಿನ (Mysuru) ಯುವಕನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಅವಮಾನ ತಾಳಲಾರದೇ ಯುವಕ ಡೆತ್​ ನೋಟ್ (Death Note(​ ಬರೆದಿಟ್ಟು ಆತ್ಮಹತ್ಯೆಗೆ(Suicide) ಶರಣಾಗಿದ್ದಾನೆ.

ಇದನ್ನೂ ಓದಿ: ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದ ಯುವತಿ ಮರುದಿನ ಬೆಡ್​ ರೂಮ್​ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ

ಸ್ನೇಹಿತರು ಮಾಡಿದ್ದ ತಪ್ಪಿಗೆ ಮೈಸೂರಿನ ಅಶೋಕಪುರಂ ನಿವಾಸಿ ಅಭಿಷೇಕ್ ಪೊಲೀಸರ ಕೈಗೆ ಸಿಕ್ಕಿಬಿದ್ದು ಕೊನೆಗೆ ಅವಮಾನ ತಾಳಲಾರದೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಯುವಕನ ಆತ್ಮಹತ್ಯೆಗೆ ಶರಣಾಗುವ ಮುನ್ನ ಅಭಿಷೇಕ್ ಡೆತ್ ನೋಟ್ ಬರೆದಿಟ್ಟಿದ್ದು, ಅದು ಟಿವಿ9 ಲಭ್ಯವಾಗಿದೆ. ಹಾಗಾದ್ರೆ, ಅಭಿಷೇಕ್ ಬರೆದಿದ್ದ ಡೆತ್​ ನೋಟ್​ನಲ್ಲಿ ಏನಿದೆ? ಏಕೆ ಆತ್ಮಹತ್ಯೆ ಮಾಡಿಕೊಂಡ? ಸ್ನೇಹಿತರ ಮಾಡಿದ ತಪ್ಪಿಗೆ ತಾನು ಹೇಗೆ ಸಿಕ್ಕಿಬಿದ್ದ ಎನ್ನುವ ವಿವರವನ್ನು ಡೆತ್​ ನೋಟ್​ನಲ್ಲಿ ಉಲ್ಲೇಖಿಸಿದ್ದು ಅದು ಈ ಕೆಳಗಿನಂತಿದೆ ನೋಡಿ.

ಅಭಿಷೇಕ್ ಡೆತ್​ ನೋಟ್​ನಲ್ಲೇನಿದೆ?

ಸ್ನೇಹಿತನೊಬ್ಬನಿಂದ ಬರಬೇಕಿದ್ದ ಸಾಲದ ಹಣ ಪಡೆಯಲು ತೆರಳಿದ್ದೆ. ಅಲ್ಲಿ ಕೆಲವರು ಗಾಂಜಾ ಸೇವನೆ ಮಾಡಿದ್ದರು. ಆ ಸಮಯದಲ್ಲಿ ಆ ಸ್ಥಳಕ್ಕೆ ಪೊಲೀಸರು ಬಂದರು. ನನ್ನನ್ನು ಅವರೊಂದಿಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ನೀನು ಗಾಂಜಾ ವ್ಯಸನಿಯೇ ಎಂದು ಕೀಳಾಗಿ ನೋಡಿ ಹಿಯಾಳಿಸಿದರು. ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ತರಹದ ದೂರುಗಳು ಸಹಿಸಲು ಅಸಾಧ್ಯ. ನನ್ನನ್ನು ದಯವಿಟ್ಟು ಕ್ಷಮಿಸಿ, ಏನೇ ಕಷ್ಟ ಬಂದರು ಇರುವರೆಗೂ ಹೇಡಿತನ ಮಾಡದೆ ಇದ್ದಿದಕ್ಕೆ ನನಗೆ ಸಿಕ್ಕ ಪ್ರತಿಫಲ ಇದು. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರು ಕೊಲೆಗಾರ ಆಗುವುದಿಲ್ಲ. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. I AM VERY SORRY MOM DAD ಎಂದು ಅಭಿಷೇಕ್ ಈ ರೀತಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ತುಮಕೂರು ಜಿಲ್ಲೆಯಲ್ಲಿ ದಾರುಣ ಘಟನೆ: ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು

ಪ್ರಕರಣ ಹಿನ್ನೆಲೆ

ಕೆಲ ದಿನಗಳ ಹಿಂದೆ ಅಭಿಷೇಕ್‌ನನ್ನು ಕುವೆಂಪು ನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಕಾರಣ ಗಾಂಜಾ ಸೇವನೆ. ಕೆಲ ಯುವಕರು ಗಾಂಜಾ ಸೇವಿಸುತ್ತಿರುವ ನಿಖರ ಮಾಹಿತಿ ಆಧಾರಿಸಿ ಕುವೆಂಪು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ಯುವಕರನ್ನು ಠಾಣೆಗೆ ಕರೆ ತಂದಿದ್ದರು. ಅದರಲ್ಲಿ ಅಭಿಷೇಕ್ ಸಹ ಇದ್ದ. ಇದೇ ಕಾರಣಕ್ಕೆ ಅವಮಾನ ತಡೆಯಲಾರೆದೆ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನ ಪ್ರಕಾರ ಆತನ ಜೊತೆಗಿದ್ದವರು ಗಾಂಜಾ ಸೇವಿಸಿದ್ದರು. ಆದ್ರೆ, ಏನು ಅಪರಾಧ ಮಾಡದ ಅಭಿಷೇಕ್​ ಸಿಕ್ಕಿಬಿದ್ದಿದ್ದಾನೆ. ಅದೇನೋ ಹೇಳ್ತಾರಲ್ಲ ಬಾಳೆಹಣ್ಣು ತಿಂದೋನು ತಪ್ಪಿಸಿಕೊಂಡ ಸಿಪ್ಪೆ‌ ಹಿಡಿದುಕೊಂಡಿದ್ದವನು ಸಿಕ್ಕಿ ಹಾಕಿಕೊಂಡ ಅನ್ನೋ ರೀತಿ ಅಭಿಷೇಕ್ ಪೊಲೀಸರಿಗೆ ಸಿಕ್ಕಿಬಿದ್ದು, ಕೊನೆಗೆ ಆತ ಸಾವಿನ ಹಾದಿ ಹಿಡಿದಿದ್ದಾನೆ.

ಇನ್ನು ಈ ಸಂಬಂಧ ಅಶೋಕಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೇ ಅಭಿಷೇಕ್ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬರಲಿದೆ. ಇದೆಲ್ಲ ಏನೇ ಇರಲಿ ತಾನಾಯಿತು ತನ್ನ ಪಾಡಾಯ್ತು ಎಂದು ಇದ್ದ ಅಭಿಷೇಕ್ ತನ್ನ ಸಹವಾಸ ದೋಷದಿಂದ ಬಲಿಯಾಗಿದ್ದು ಮಾತ್ರ ದುರಂತವೇ ಸರಿ.

ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada