ಸಿದ್ಧರಾಮಯ್ಯ ಹೇಳಿಕೆಗೆ ಆಕ್ರೋಶಭರಿತರಾಗಿ ಭಾವನಾತ್ಮಕರಾದ ಸಿಎಂ ಬೊಮ್ಮಾಯಿ

ವಿಪಕ್ಷ ನಾಯಕರು ನನ್ನ ಮನೆ ಹಾಳಾಗಲಿ ಎಂದು ಹೇಳಿದ್ದಾರೆ. ಇದು ದೊಡ್ಡವರ ಸಣ್ಣತನ ಅಷ್ಟೇ, ಇದು ನಾಡಿನ ಸಂಸ್ಕೃತಿ ಅಲ್ಲ. ನಡೆ ನುಡಿಯ ಬಗ್ಗೆ ಯಾವತ್ತಿಗೂ ಎಚ್ಚರಿಕೆಯಿಂದ ಇರಬೇಕು ಎಂದ ಸಿಎಂ ಬೊಮ್ಮಾಯಿ.

ಸಿದ್ಧರಾಮಯ್ಯ ಹೇಳಿಕೆಗೆ ಆಕ್ರೋಶಭರಿತರಾಗಿ ಭಾವನಾತ್ಮಕರಾದ ಸಿಎಂ ಬೊಮ್ಮಾಯಿ
ಬೊಮ್ಮಾಯಿ ಸಿದ್ಧರಾಮಯ್ಯ,
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 22, 2023 | 8:21 PM

ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ಮನೆ ಹಾಳಾಗ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಹೇಳಿದ್ದಾರೆ. ಸದ್ಯ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ಮೈಸೂರಿನ ಸೂತ್ತೂರು ಜಾತ್ರೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಅತ್ಯಂತ ಆಕ್ರೋಶಭರಿತರಾಗಿ ಭಾವನಾತ್ಮಕವಾದರು. ಕ್ಷುಲ್ಲಕ ಕಾರಣಕ್ಕೆ ಧರ್ಮದ ಬಗ್ಗೆ ಮಾತನಾಡಿ ಘಾಸಿ ಮಾಡುವುದು, ಸಾರ್ವಜನಿಕವಾಗಿ ಮಾತನಾಡದ ಶಬ್ದಗಳಿಂದ ಘಾಸಿ ಮಾಡುತ್ತಿದ್ದಾರೆ. ಜನರ ಭಾವನೆಗಳಿಗೆ ಸಿದ್ದರಾಮಯ್ಯನವರು ನೋವು ಮಾಡುತ್ತಿದ್ದಾರೆ. ಬೇರೆಯವರಿಗೆ ನೋವಾಗಬಾರದು ಎಂಬ ಕನಿಷ್ಠ ಜ್ಞಾನ ಇರಬೇಕು. ಇಲ್ಲವಾದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ನಿನ್ನ ಜಗತ್ತು ಬೇರೆ, ನನ್ನ ಜಗತ್ತೇ ಬೇರೆ. ನಿನ್ನ ಪ್ರಪಂಚವೇ ಬೇರೆ, ನನ್ನ ಪ್ರಪಂಚವೇ ಬೇರೆ. ನಿನ್ನ ನಂಬಿಕೆಯೇ ಬೇರೆ, ನನ್ನ ನಂಬಿಕೆಯೇ ಬೇರೆ. ನಮ್ಮ ನಂಬಿಕೆ ಅತ್ಯಂತ ಕೀಳಾಗಿ ಮಾತನಾಡುವುದು ಯಾವ ಧರ್ಮ. ಅಂಥವರಿಗೆ ಯಾವುದು ನಿಮ್ಮ ಆದರ್ಶವೆಂದು ಪ್ರಶ್ನೆ ಮಾಡಬೇಕಾಗುತ್ತೆ. ಜಾತಿ ಅನ್ನೋ ವಿಷ ಬೀಜ ದಾಸೋಹದಿಂದ ಒಡೆದು ಹಾಕಿದ್ದಾರೆ. ನಾನು ಸಿಎಂ ಆಗಿ ಮಾತನಾಡಿಲ್ಲ, ಮಠದ ಭಕ್ತನಾಗಿ ಮಾತನಾಡಿದ್ದೇನೆ. ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ ಎಂದರು.

ಇದನ್ನೂ ಓದಿ: ಉಡುಪಿ: ಕರಾವಳಿ ಹಿಂದೂ ಧರ್ಮದ ಪ್ರಯೋಗಶಾಲೆ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯಗೆ ಟಾಂಗ್​ ನೀಡಿದ ಸಿಎಂ ಬೊಮ್ಮಾಯಿ

ವಿಪಕ್ಷ ನಾಯಕರು ನನ್ನ ಮನೆ ಹಾಳಾಗಲಿ ಎಂದು ಹೇಳಿದ್ದಾರೆ. ಇದು ದೊಡ್ಡವರ ಸಣ್ಣತನ ಅಷ್ಟೇ, ಇದು ನಾಡಿನ ಸಂಸ್ಕೃತಿ ಅಲ್ಲ. ನಡೆ ನುಡಿಯ ಬಗ್ಗೆ ಯಾವತ್ತಿಗೂ ಎಚ್ಚರಿಕೆಯಿಂದ ಇರಬೇಕು. ಉತ್ತರಿಸಲು ಅವರ ಮಟ್ಟಕ್ಕಿಳಿದ್ರೆ ಅವರಿಗೂ ನನಗೂ ವ್ಯತ್ಯಾಸವೇನು ಎಂದರು. ದೊಡ್ಡ ಸ್ಥಾನದಲ್ಲಿರುವವರು, ತಾವೇ ಪ್ರಭಾವಿ ಅಂದುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಟಾಂಗ್​ ನೀಡಿದರು.

ಇದನ್ನೂ ಓದಿ: ಕನ್ನಡದ ಕಾನೂನು ನಿಘಂಟು ರಚಿಸುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದ ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ

ಇನ್ನು ಕೊಟ್ಟ ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ. ಸಿದ್ದರಾಮಯ್ಯ ಸಾಧ್ಯವಾಗದ ಭರವಸೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಆಡಳಿತದಿಂದ ಇಂಧನ ಇಲಾಖೆ ದುಸ್ಥಿತಿಯಲ್ಲಿತ್ತು. ನಮ್ಮ ಸರ್ಕಾರ ಬಂದ ಮೇಲೆ ಸುಧಾರಿಸಿದೆ. ನಾವು SC, ST ಸಮುದಾಯಕ್ಕೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ.

ಕಾಂಗ್ರೆಸ್ ನಾಯಕರು ಅಸಾಧ್ಯವಾದ ಭರವಸೆಯನ್ನು ಕೊಡ್ತಿದ್ದಾರೆ. ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಅದು ಎಷ್ಟರ ಮಟ್ಟಿಗೆ ಸರಿ ಅಂತಾ ಅವರೇ ಯೋಚನೆ ಮಾಡಲಿ. ವೈಯಕ್ತಿಕ ಟೀಕೆಗೆ ಉತ್ತರಿಸದಿರಲು ನಿರ್ಧಾರ ಮಾಡಿದ್ದೇನೆ. ನಾವು ಕೂಡ ಸಿದ್ದರಾಮಯ್ಯ ಸರ್ಕಾರದ ದುರಾಡಳಿತ ಟೀಕಿಸಿದ್ದೇವೆ. ಆದರೆ ವೈಯಕ್ತಿಕ ಟೀಕೆ ಮಾಡಿರಲಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.