AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಪ್ರಜಾಧ್ವನಿ ಯಾತ್ರೆಯಲ್ಲಿ ತಾಳ ಹಾಕುತ್ತಿದ್ದ ಸಿದ್ದುಗೆ ಡಿಕೆಶಿ ಕೈ ಹಿಡಿಯಿರಿ ಎಂದ ಸುರ್ಜೇವಾಲ

ಉಡುಪಿ: ಪ್ರಜಾಧ್ವನಿ ಯಾತ್ರೆಯಲ್ಲಿ ತಾಳ ಹಾಕುತ್ತಿದ್ದ ಸಿದ್ದುಗೆ ಡಿಕೆಶಿ ಕೈ ಹಿಡಿಯಿರಿ ಎಂದ ಸುರ್ಜೇವಾಲ

TV9 Web
| Updated By: Rakesh Nayak Manchi

Updated on:Jan 22, 2023 | 6:24 PM

Share

Karnataka Election 2023: ಉಡುಪಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆದಿದ್ದು, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಭಾಗಿಯಾದರು.

ಉಡುಪಿ: ಜಿಲ್ಲೆಯಲ್ಲಿ ಇಂದು ಕರ್ನಾಟಕ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Prajadhwavi Yatra) ನಡೆಯಿತು. ಈ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಭಾಗಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅಬ್ಬರದ ಭಾಷಣ ಕೂಡ ಮಾಡಿದರು. ಹೇಳಿ ಕೇಳಿ ಎಲ್ಲರಿಗೂ ತಿಳಿದಿರುವಂತೆ ಒಂದೇ ವೇದಿಕೆಯಲ್ಲಿ ಸಿದ್ದು-ಡಿಕೆಶಿ ಅಕ್ಕ ಪಕ್ಕ ಕುಳಿತಿದ್ದರೂ ಒಬ್ಬರಿಗೊಬ್ಬರು ಮಾತನಾಡುವುದಿಲ್ಲ. ಆದರೆ ಇವರಿಬ್ಬರ ನಡುವಿನ ಮುನಿಸು ಶಮನಕ್ಕೆ ಯತ್ನ ನಡೆಯುತ್ತಲೇ ಇದೆ. ಇದೀಗ ಉಡುಪಿಯಲ್ಲಿ ನಡೆದ ಬಸ್​ ಯಾತ್ರೆಯಲ್ಲಿ ತಾಳ ಹಾಕುತ್ತಿದ್ದ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಕೈ ಹಿಡಿಯುವಂತೆ ಸುರ್ಜೇವಾಲ ಅವರು ಸೂಚಿಸಿದರು. ಅದರಂತೆ ಸಿದ್ದು ಮತ್ತು ಡಿಕೆಶಿ ಕೈ ಹಿಡಿದು ಮೇಲಕ್ಕೆತ್ತಿದರು. ಈ ಹಿಂದೆ ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯರನ್ನು ಅಪ್ಪಿಕೊಳ್ಳುವಂತೆ ರಾಹುಲ್ ಗಾಂಧಿ (Rahul Gandhi) ಡಿಕೆಶಿಗೆ ಸೂಚಿಸಿದ್ದರು. ಅದರಂತೆ ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಂಡಿದ್ದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 22, 2023 06:24 PM