Bengaluru: ಬಿ.ಎಸ್ ಯಡಿಯೂರಪ್ಪರವರನ್ನ ನಿಧಾನವಾಗಿ ಬಿಜೆಪಿ ಕಡೆಗಣಿಸುತ್ತಿದೆಯಾ..?
ಬಿಎಸ್ವೈ ರವರು ಯಾವಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೊ ಅಂದಿನಿಂದ ಬಿಜೆಪಿ ಅವರನ್ನ ಕಡೆಗಣಿಸುತ್ತಾ ಬರುತ್ತಿದೆಯಾ...?
ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ರಾಜಿನಾಮೆ ಕೊಟ್ಟ ಮೇಲೆ ಬಿಜೆಪಿ ಕಡೆಗಣಿಸುತ್ತಿದೆಯಾ ಅವರನ್ನ ಎಂಬ ಮಾತು ಕೇಳಿಬರುತ್ತಿದೆ. ಒಂದಲ್ಲಾ ಎರಡಲ್ಲಾ ಅನೇಕ ಸಭೆ ಸಮಾರಂಭಗಳಿಗೆ ಬಿಎಸ್ವೈ ಅವರಿಗೆ ಆಹ್ವಾನ ನೀಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ನಿನ್ನೆ(ಜ.21) ಮಲ್ಲೆಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ತಂತ್ರಗಾರಿಕೆ ಸಭೆಗೆ ಬಿಎಸ್ವೈ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರೂ ಅವರನ್ನ ಬಿಟ್ಟು ಸಭೆ ನಡೆಸಲಾಗಿದೆ. ಇದು ಬಿಎಸ್ವೈ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದು ಪೂರ್ವಭಾವಿ ಸಭೆ ಅಂತಿಮ ಸಭೆಗೆ ಬಿಎಸ್ವೈ ಅವರನ್ನ ಕರೆಯುತ್ತೆವೆ ಎಂದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 22, 2023 09:08 AM
Latest Videos