ಕನ್ನಡದ ಕಾನೂನು ನಿಘಂಟು ರಚಿಸುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದ ಸಿಎಂ ಬೊಮ್ಮಾಯಿ

TV9kannada Web Team

TV9kannada Web Team | Edited By: ಗಂಗಾಧರ್​ ಬ. ಸಾಬೋಜಿ

Updated on: Jan 22, 2023 | 6:59 PM

ಕನ್ನಡದಲ್ಲಿ ತೀರ್ಪು ಕೊಡುವುದು ಸುಲಭವಲ್ಲ. ಕನ್ನಡದಲ್ಲಿ ತೀರ್ಪು ನೀಡಿ‌ ನೀವೆಲ್ಲ ಸಾಧನೆ ಮಾಡಿದ್ದೀರಾ. ಅಧೀನ‌ ನ್ಯಾಯಾಲಯದಲ್ಲಿ ಇದೆ, ಉಚ್ಚ ನ್ಯಾಯಾಲಯದಲ್ಲೂ ಕೂಡ ಇದು ಬರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕನ್ನಡದ ಕಾನೂನು ನಿಘಂಟು ರಚಿಸುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದ ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Image Credit source: kannadaprabha.com

ಬೆಂಗಳೂರು: ಕನ್ನಡದಲ್ಲಿ ತೀರ್ಪು ಕೊಡುವುದು ಸುಲಭವಲ್ಲ. ಕನ್ನಡದಲ್ಲಿ ತೀರ್ಪು ನೀಡಿ‌ ನೀವೆಲ್ಲ ಸಾಧನೆ ಮಾಡಿದ್ದೀರಾ. ಅಧೀನ‌ ನ್ಯಾಯಾಲಯದಲ್ಲಿ ಇದೆ, ಉಚ್ಚ ನ್ಯಾಯಾಲಯದಲ್ಲೂ ಕೂಡ ಇದು ಬರಬೇಕು. ಕಷ್ಟ ಇದೆ ಆದ್ರೆ ಸಾಧ್ಯವಿದೆ. ಕನ್ನಡದ ಕಾನೂನು ನಿಘಂಟು (Kannada Legal Dictionary) ರಚಿಸಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಸಿಎಂ ಬಸವರಾಜ ಬೊಮ್ಮಯಿ ಸಲಹೆ  ನೀಡಿದರು. ನ್ಯಾಯಾಂಗ ಕ್ಷೇತ್ರದಲ್ಲಿ 2019-2020, 2020-21ನೇ ಸಾಲಿನ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ತಜ್ಞರ ತಂಡದಿಂದ ಕನ್ನಡ ಕಾನೂನು ನಿಘಂಟು ರಚಿಸಬೇಕು. ಇದರಿಂದ ವಕೀಲರಿಗೆ, ನ್ಯಾಯಾಧೀಶರಿಗೆ ಅನೂಕುಲವಾಗಲಿದೆ. ಕನ್ನಡದಲ್ಲಿ‌ ತೀರ್ಪು ಕೊಡುವುದು ಜನರ ದೃಷ್ಟಿಯಿಂದ ಸಾಕಷ್ಟು ಒಳಿತು ಎಂದು ಹೇಳಿದರು.

ಆಡಳಿತದಲ್ಲಿ ಕನ್ನಡ ಇರಬೇಕು ಎಂಬುದಕ್ಕೆ ದೊಡ್ಡ ಚಳುವಳಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಕನ್ನಡವನ್ನು ಕಾಯುವ, ಉಳಿಸುವ, ಬೆಳೆಸುವ ಜವಾಬ್ದಾರಿ ಪ್ರಾಧಿಕಾರಕ್ಕಿದೆ. ಕೊವಿಡ್​ ಕಾರಣದಿಂದ ಕಳೆದ ಎರಡು ಸಾಲು ಪ್ರಶಸ್ತಿ ನೀಡಲು ಆಗಿರಲಿಲ್ಲ. ಬದುಕಿನ ಎಲ್ಲ ಸ್ತರದಲ್ಲಿ ಕನ್ನಡ ಇರಬೇಕು ಎಂಬುದು ನಮ್ಮ ಬಯಕೆ. ಆಡಳಿತದಲ್ಲಿ ಕನ್ನಡ ಇರಬೇಕು ಎಂಬುದಕ್ಕೆ ದೊಡ್ಡ ಚಳುವಳಿ ನಡೆದಿದೆ. ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಕರ್ನಾಟಕ ಸರ್ಕಾರ ಅನೇಕ‌ ಕಾನೂನು, ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿ

ಕನ್ನಡವನ್ನು ಕಾನೂನಾತ್ಮಕ ಜಾರಿಗೆ ಪ್ರಯತ್ನ

ಅಷ್ಟಾದರೂ ಕೂಡ ಸರ್ವೋಚ್ಚ ನ್ಯಾಯಾಲಯ ಶಿಕ್ಷಣ ಆಯ್ಕೆಯಲ್ಲಿ ಐಚ್ಚಿಕ ವಿಷಯದಲ್ಲಿ ಸ್ವಾತಂತ್ರ್ಯವಿರಬೇಕು ಎಂದು ಹೇಳಿರುವುದರಿಂದ ಕೆಲ ಜಾರಿಗೆ ಸಾಧ್ಯವಾಗಿಲ್ಲ. ಮೋದಿಯವರ ನೇತೃತ್ವದ NEPಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡಕ್ಕೆ ಸ್ಥಾನ ನೀಡಿದೆ. ಇಂಜಿನಿಯರ್‌ ಕೂಡ ಕನ್ನಡದಲ್ಲಿ ಕಲಿಯಲು ವ್ಯವಸ್ಥೆ ರೂಪಿಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಕಾನೂನಾತ್ಮಕ ಜಾರಿಗೆ ತರಲು ಸಕಲ‌ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಕನ್ನಡದಲ್ಲಿ ತೀರ್ಪು ಕೊಡುವುದು ಸುಲಭದ ಕೆಲಸವಲ್ಲ

ಪ್ರಜಾಪ್ರಭುತ್ವ ಬರುವ ಮುನ್ನ ಕಾನೂನುಗಳಿದ್ದವು. ಮೊದಲು ಕಾನೂನುಗಳು ನಂತರ ಪ್ರಜಾಪ್ರಭುತ್ವ ಬಂದಿದ್ದು, ಕಾನೂನು ಇಂಗ್ಲೆಂಡ್ ಮತ್ತಿತರ ದೇಶಗಳಿಂದ ಬಂದಿದೆ. ಪ್ರಜಾಪ್ರಭುತ್ವ ಬಂದು ಎಲ್ಲ ವಿಚಾರ ಚರ್ಚೆ ಆಗಲು ಶುರುವಾದ ಮೇಲೆ ವ್ಯವಸ್ಥಿತ ಕಾನೂನು ರೂಪುಗೊಂಡಿದೆ. ಕನ್ನಡದಲ್ಲಿ ತೀರ್ಪು ಕೊಡುವುದು ಸುಲಭದ ಕೆಲಸವಲ್ಲ. ಆದರೂ ಅನೇಕ ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪು ಕೊಟ್ಟು ಅಭೂತಪೂರ್ವ ಕೆಲಸ ಮಾಡಿದ್ದಾರೆ ಎಂದು ಸಿಎಂ ಬೊಮ್ಮಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada