ಉಡುಪಿ: ಕರಾವಳಿ ಹಿಂದೂ ಧರ್ಮದ ಪ್ರಯೋಗಶಾಲೆ ಎಂದ ಸಿದ್ದರಾಮಯ್ಯ
Karnataka Election 2023: ಉಡುಪಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆದಿದ್ದು, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಭಾಗಿಯಾದರು. ಈ ಯಾತ್ರೆಯಲ್ಲಿ ಸಿದ್ದು ಎಂದಿನಂತೆ ತಮ್ಮ ಅಬ್ಬರದ ಭಾಷಣವನ್ನು ಮಾಡಿದರು.
ಉಡುಪಿ: ಜಿಲ್ಲೆಯಲ್ಲಿ ಇಂದು ಕರ್ನಾಟಕ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Prajadhwani Yatra) ನಡೆಯಿತು. ಈ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಭಾಗಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಅಬ್ಬರದ ಭಾಷಣ ಮಾಡಿದ ಸಿದ್ದರಾಮಯ್ಯ (Siddaramaiah), ಕರಾವಳಿ ಹಿಂದೂ ಧರ್ಮದ ಪ್ರಯೋಗ ಶಾಲೆಯಾಗಿದೆ. ನಾವೆಲ್ಲರೂ ಹಿಂದೂ ರಕ್ಷಕರು ಎಂದು ಹೇಳುತ್ತಾರೆ. ಹಾಗಾದರೆ ನಾವೆಲ್ಲಾ ಯಾರು? ಹಿಂದೂಗಳಲ್ಲವಾ? ನಾನು ಕೂಡ ಹಿಂದೂನೆ. ಇಂದು ಆರ್ಎಸ್ಎಸ್ನವರು ಹಿಂದುತ್ವ ಬೆಳೆಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ವಿರೋಧ ಹಿಂದುತ್ವದ ವಿರುದ್ಧಕ್ಕೆ ಹೊರತು ಹಿಂದೂ ಧರ್ಮಕ್ಕಲ್ಲ. ಮನುವಾದಿಗಳು ಹೇಳುತ್ತಾರೆ ಒಂದು ದೇಶ ಒಂದು ಭಾಷೆ ಅಂತಾ. ಈ ದೇಶದಲ್ಲಿ ಇದು ಸಾಧ್ಯನಾ? ಸಾಧ್ಯವೇ ಇಲ್ಲ ಎಂದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ