Assembly Polls: ರಾಣೆಬೆನ್ನೂರು ಮಾಜಿ ಶಾಸಕ ಆರ್ ಶಂಕರ್ ಸಹ ಮತದಾರರಿಗೆ ಕುಕ್ಕರ್ ಹಂಚುವ ಕಾರ್ಯವನ್ನು ಆರಂಭಸಿದ್ದಾರೆ!
ಮ್ಮ ರಾಜಕಾರಣಿಗಳ ಹೀಗೆ ಸ್ವಾಮಿ, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಾತದಾರರ ಕುರಿತು ಅವರಲ್ಲಿ ವಿಪರೀತ ಕಾಳಜಿ ಹುಟ್ಟಿಕೊಂಡು ಬಿಡುತ್ತದೆ.
ಹಾವೇರಿ: ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿನ ಮಹಿಳಾ ಮತದಾರರಿಗೆ ಇನ್ನು ಮುಂದೆ ಅಡುಗೆ ಕೆಲಸ ಸುಲಭವಾಗಲಿದೆ, ಎಲ್ಲ 2023 ರ ರಾಜ್ಯ ವಿಧಾನ ಸಭಾ ಚುನಾವಣೆಯ ಮಹಿಮೆ ಮಾರಾಯ್ರೇ! ಬೆಳಗಾವಿ (Belagavi) ವಿಷಯ ನಾವು ಈಗಾಗಲೇ ಚರ್ಚಿಸಿದ್ದೇವೆ. ಮಾಜಿ ಸಚಿವ ಮತ್ತು ಹಾವೇರಿಯ ರಾಣೆಬೆನ್ನೂರು ಕ್ಷೇತ್ರದ ಮಾಜಿ ಶಾಸಕ ಆರ್ ಶಂಕರ್ (R Shankar) ಸಹ ಕುಕ್ಕರ್ ಪಾಲಿಟಿಕ್ಸ್ (cooker politics) ಶುರುವಿಟ್ಟುಕೊಂಡಿದ್ದಾರೆ. ಈ ವಿಡಿಯೋ ನೋಡಿ, ಅವರ ಫೋಟೋ ಮತ್ತು ಆಶ್ವಾಸನೆಗಳುಳ್ಳ ಕುಕ್ಕರ್ ಗಳು ವಿತರಣೆ ಸಿದ್ಧವಾಗಿವೆ. ನಮ್ಮ ರಾಜಕಾರಣಿಗಳ ಹೀಗೆ ಸ್ವಾಮಿ, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಾತದಾರರ ಕುರಿತು ಅವರಲ್ಲಿ ವಿಪರೀತ ಕಾಳಜಿ ಹುಟ್ಟಿಕೊಂಡು ಬಿಡುತ್ತದೆ. ಇರಲಿ ಬಿಡಿ, ಅದನ್ನೆಲ್ಲ ಕೇಳೋದಕ್ಕೆ ಚುನಾವಣಾ ಆಯೋಗವಿದೆ. ಮತದಾರರು ಮಾತ್ರ ಸಿಗುವ ಗಿಫ್ಟ್ ಗಳನ್ನು ತೆಗೆದುಕೊಳ್ಳುತ್ತಾ ಹೋಗಲಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ