ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಯುವಕರು ಬಲಿ? RSS​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಸಿದ್ದು ಪ್ರಶ್ನೆ

ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಯಾಗ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಯುವಕರು ಬಲಿ? RSS​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಸಿದ್ದು ಪ್ರಶ್ನೆ
ಸಿದ್ದರಾಮಯ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 22, 2023 | 5:00 PM

ಉಡುಪಿ: ಯುವಕರು ಬಿಜೆಪಿ (BJP) ಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಯಾಗ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಉಡುಪಿಯಲ್ಲಿ ಇಂದು (ಜ.22) ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಅವರು ಮಾತನಾಡಿ,  ಬಿಜೆಪಿಯವರು ಹಿಂದೂ ಪರ ಇಲ್ಲ, ಹಿಂದುತ್ವದ ಪರವಾಗಿರುವವರು. ನಾನು, ಡಿಕೆಶಿ, ಹರಿಪ್ರಸಾದ್, ವೀರಪ್ಪ ಮೊಯ್ಲಿ​ ಹಿಂದುತ್ವವಾದಿಗಳಲ್ವಾ ಎಂದು ಪ್ರಶ್ನಿಸಿದರು. ಹಿಂದೂಗಳ ಪರವಾಗಿರುವವರು‌ ಅಂದ್ರೆ ಮನುಷ್ಯತ್ವದ ಪರ ಇರುವವರು. ಕರಾವಳಿ ಭಾಗದಲ್ಲಿ ಕೊಲೆಯಾದವರು ಹಿಂದುಳಿದ ಜಾತಿಯವರು. ಆರ್​ಎಸ್​ಎಸ್​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡ್ತಾರೆ ಎಂದು ಕಿಡಿಕಾರಿದರು.

ನಳಿನ್ ಕುಮಾರ್ ಕಟೀಲು ನಾಲಾಯಕ್ 

ನಳಿನ್ ಕುಮಾರ್ ಕಟೀಲು​ ಬಿಜೆಪಿ ಅಧ್ಯಕ್ಷನಾಗಲು ನಾಲಾಯಕ್. ರಸ್ತೆ, ಚರಂಡಿ ಸಮಸ್ಯೆ ಬಗ್ಗೆ ಮಾತಾಡಬೇಡಿ ಎಂದು ಕಟೀಲು ಹೇಳ್ತಾರೆ. ದಯವಿಟ್ಟು ಬಿಜೆಪಿಯವರ ಮಾತಿಗೆ ಮರುಳಾಗಬೇಡಿ. ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಸಾವರ್ಕರ್ ಮಾಸಾಶನ ಪಡೆದಿದ್ದರು.​ ಕರಾವಳಿಯನ್ನು ಹಿಂದುತ್ವದ ಪ್ರಯೋಗಾಲಯ ಮಾಡಲು ಹೊರಟಿದ್ದಾರೆ. ನಮ್ಮ ವಿರೋಧ ಮನುವಾದಿಗಳಿಗೆ ಹೊರತು ಹಿಂದೂವಾದಿಗೆ ಅಲ್ಲ. ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತಿವೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ: ಸಿದ್ದುಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ

ಬಿಜೆಪಿಗರಿಗೆ ಸಿದ್ಧರಾಮಯ್ಯ ಪ್ರಶ್ನೆ

ಪಿಎಫ್ಐ, ಆರ್​ಎಸ್​ಎಸ್​​ ಇದ್ದ ಹಾಗೆ, SDPI, ಬಿಜೆಪಿ ಇದ್ದ ಹಾಗೆ. RSS, ಬಿಜೆಪಿಯ ಯಾರಾದರೂ ಒಬ್ಬ ಸ್ವಾತಂತ್ರ್ಯಕ್ಕಾಗಿ ಸತ್ತಿದ್ದಾರಾ ಎಂದು ಪ್ರಶ್ನಿಸಿದರು. ಮಾತೆತ್ತಿದ್ರೆ SDPI, ಪಿಎಫ್​ಐನವರನ್ನು ಬಿಡುಗಡೆ ಮಾಡಿದ್ರು ಅಂತಾರೆ. ನಾನು ಜೈಲಿನಿಂದ ಬಿಡುಗಡೆ ಮಾಡಿದವರ ಪಟ್ಟಿ ಕೊಡಿ ಎಂದು ಕೇಳಿದ್ದೆ. ಈ ಬಗ್ಗೆ ಆರಗ ಜ್ಞಾನೇಂದ್ರಗೂ ಪತ್ರ ಬರೆದಿದ್ದೆ, ಪ್ರತಿಕ್ರಿಯೆ ಬಂದಿಲ್ಲ. ವಿದ್ಯಾರ್ಥಿಗಳು, ದಲಿತರು, ರೈತ ಸಂಘಟನೆಯವರ ಪಟ್ಟಿ ಕೊಟ್ಟಿದ್ದರು.

ಇದನ್ನೂ ಓದಿ: ತ್ರಿಶೂಲ ಹಿಡ್ಕೊಂಡು ಬಿಜೆಪಿ ಕಾರ್ಯಕರ್ತರು ಸಾಯ್ತವ್ರೆ, ಯಾವ ಮಂತ್ರಿ ಮಗನೂ ಬಲಿಯಾಗಲ್ಲ: ಡಿ.ಕೆ.ಶಿವಕುಮಾರ್

ಸ್ಯಾಂಟ್ರೋ ರವಿಯಿಂದ ಆರಗ ಜ್ಞಾನೇಂದ್ರ ಬಣ್ಣ ಬಯಲು

ಎಸ್​ಡಿಪಿಐ ಜತೆ ಸಂಬಂಧ ಇಟ್ಟುಕೊಂಡಿರುವುದು ಬಿಜೆಪಿಯವರು. ಈಗ PFI ಸಂಘಟನೆಯನ್ನು ಮಾತ್ರ ರದ್ದು ಮಾಡಿದ್ದಾರೆ. ಸ್ಯಾಂಟ್ರೋ ರವಿಯನ್ನು ಪೊಲೀಸ್​ ಕಸ್ಟಡಿಗೆ ಕೇಳಲೇ ಇಲ್ಲ. ರವಿಯನ್ನು ಕಸ್ಟಡಿಗೆ ಕೇಳಿದರೆ ಇವರ ಜಾತಕವೆಲ್ಲಾ ಹೊರ ಬರುತ್ತೆ. ಸ್ಯಾಂಟ್ರೋ ರವಿಯಿಂದ ಆರಗ ಜ್ಞಾನೇಂದ್ರ ಬಣ್ಣ ಬಯಲಾಗಬಹುದು. ಈ ಕಾರಣಕ್ಕೆ ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ಕೇಳಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.