ತ್ರಿಶೂಲ ಹಿಡ್ಕೊಂಡು ಬಿಜೆಪಿ ಕಾರ್ಯಕರ್ತರು ಸಾಯ್ತವ್ರೆ, ಯಾವ ಮಂತ್ರಿ ಮಗನೂ ಬಲಿಯಾಗಲ್ಲ: ಡಿ.ಕೆ.ಶಿವಕುಮಾರ್
ಬಿಜೆಪಿ ಕಾರ್ಯಕರ್ತರು ತ್ರಿಶೂಲ ಹಿಡಿದು ಹೋರಾಟ ಮಾಡಿ ಸಾಯ್ತಾ ಇದ್ದಾರೆ. ಯಾವ ಮಂತ್ರಿ ಮಗನೂ ಬಲಿಯಾಗಲ್ಲ. ಇದಕ್ಕೆ ಕಟಿಲ್, ಶೋಭಾ, ಬೊಮ್ಮಾಯಿ, ಯಡಿಯೂರಪ್ಪ ಉತ್ತರಿಸಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಉಡುಪಿ: ಬಿಜೆಪಿ ಕಾರ್ಯಕರ್ತರು ತ್ರಿಶೂಲ ಹಿಡಿದು ಹೋರಾಟ ಮಾಡಿ ಸಾಯುತ್ತಿದ್ದಾರೆ. ಯಾವ ಮಂತ್ರಿ ಮಗನೂ ಬಲಿಯಾಗಲ್ಲ. ಬಡವರ ಮಕ್ಕಳು ಸಾಯುತ್ತಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ (Nalin Kumar Kateel), ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandjale), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ಉತ್ತರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ. ಉಡುಪಿಯಲ್ಲಿ ನಡೆಯುತ್ತಿರುವ ಬಸ್ ಯಾತ್ರೆ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟರು.
ಡಬ್ಬಲ್ ಇಂಜಿನ್ ಸರ್ಕಾರ ಅಂತ ಹೇಳುತ್ತಾರೆ, ಯಾವ ಮಾತು ಉಳಿಸಿಕೊಂಡಿದ್ದಾರೆ ಹೇಳಿ? ಮೀನುಗಾರರಿಗೆ ಸರಿಯಾಗಿ ಸೀಮೆಎಣ್ಣೆ ಕೊಡುತ್ತಿಲ್ಲ, ಗ್ಲೋಬಲ್ ಹೂಡಿಕೆದಾರರ ಸಮಾವೇಶದಲ್ಲಿ ಕರಾವಳಿಗೆ ಏನು ಸಿಕ್ಕಿತ್ತು? ಯಾರು ಕೂಡಾ ಇಲ್ಲಿ ಹೂಡಿಕೆ ಮಾಡಲು ತಯಾರಿಲ್ಲ. ಕೋಮು ಗಲಭೆ ವಿಷ ಭಿತ್ತಿದ ಕಾರಣ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಿಲ್ಲ. ಶಿಕ್ಷಣದಲ್ಲಿ ಮೊದಲ ರ್ಯಾಂಕ್ ಪಡಿತಿದ್ದ ಉಡುಪಿ ಜಿಲ್ಲೆ ಹಿಂದುಳಿದಿದೆ ಎಂದರು.
ಇದನ್ನು ಓದಿ: ಕೋಲಾರದಲ್ಲಿ ಸದ್ದಿಲ್ಲದೆ ಸಿದ್ದವಾಯ್ತು ಸಿದ್ದರಾಮಯ್ಯ ಮನೆ; ವಿಪಕ್ಷ ನಾಯಕರ ಸ್ಪಷ್ಟನೆ ಇಲ್ಲಿದೆ
ಕೋವಿಡ್ ಸಂದರ್ಭದಲ್ಲಿ ಹೆಣ, ಔಷಧಿಯಲ್ಲೂ ಹಣ ಮಾಡಿದರು. ಕರ್ನಾಟಕ 40 ಪರ್ಸೆಂಟ್ ಸರ್ಕಾರ ಬ್ರಾಂಡ್ ಆಗಿದೆ. ಆಮ್ಲಜನಕ ಇಲ್ಲದೆ ಸತ್ತವರ ಮನೆಗೆ ರಾಜ್ಯ ಸರ್ಕಾರ ಭೇಟಿ ಮಾಡಿಲ್ಲ. ಸುರೇಶ್ ಅಂಗಡಿ ಶವವನ್ನೂ ಮನೆಯವರಿಗೆ ಕೊಡಲು ಆಗಿಲ್ಲ ಎಂದರು. ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ 200 ಯೂನಿಟ್ ವಿದ್ಯುತ್ ಉಚಿತ ನೀಡಲು ತೀರ್ಮಾನ ಮಾಡಲಾಗಿದೆ. ಮಹಿಳೆಯರಿಗೆ ಎರಡು ಸಾವಿರ ನೀಡಲು ತೀರ್ಮಾನ ಮಾಡಿದ್ದೇವೆ. ಚುನಾ ಪ್ರಜಾಧ್ವನಿ ಸಮಾವೇಶಕ್ಕೆ ಹಾಸನ, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಲಕ್ಷಾಂತರ ಜನ ಸೇರುತ್ತಿದ್ದಾರೆ. ಜನರಿಗೆ ಬದಲಾವಣೆ ಬೇಕಾಗಿದೆ ಎಂದರು.
ಯಾವುದೇ ಜಾಗದಲ್ಲಿ ನಿಂತರೂ ಪ್ರಮೋದ್ ಮದ್ಚರಾಜ್ನ ಸೊಲಿಸಿ ಎಂದ ಡಿಕೆಶಿ
ಬಸ್ ಯಾತ್ರೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಮೋದ್ ಮದ್ವರಾಜ್ ಅವರನ್ನು ಮಂತ್ರಿ ಮಾಡಿದೆವು. ತಂದೆ, ತಾಯಿ, ಮಗ ಶಾಸಕರು ಮಂತ್ರಿಗಳಾದರು, ಪಕ್ಷ ನಿಮಗೆ ಇನ್ನೇನು ಮಾಡಬೇಕು? ಆದರೆ ಅವರು ಕಾಂಗ್ರೆಸ್ಗೆ ದ್ರೋಹ ಮಾಡಿ ಬಿಜೆಪಿಗೆ ಹೋದರು. ಆದರೆ ಒಬ್ಬನೇ ಒಬ್ಬ ಕಾರ್ಯಕರ್ತ ಬಿಜೆಪಿಗೆ ಹೋಗಿಲ್ಲ. ಬಿಜೆಪಿ ಟಿಕೆಟ್ ಕೊಡುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಪ್ರಮೋದ್ ಮದ್ವರಾಜ್ ಯಾವ ಕ್ಷೇತ್ರದಲ್ಲಿ ನಿಂತರೂ ಸೋಲಿಸಿ ಎಂದರು.
ರಾಜ್ಯದ ಜನರ ಸಮಸ್ಯೆ ಅರಿತು, ಆಚಾರ, ವಿಚಾರ, ಅಭಿಪ್ರಾಯ ತಿಳಿದು ಸ್ಪಂದನೆ ಮಾಡಲು ಯಾತ್ರೆ ಇದಾಗಿದೆ. ಈ ಹಿಂದೆ ಕರಾವಳಿಯ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರಿದ್ದರು, ಈಗ ಒಬ್ಬ ಶಾಸಕ ಮಾತ್ರ ಇದಾರೆ, ನೋವಾಗುತ್ತದೆ. ಇತಿಹಾಸ ಮರೆತವರು ಯಾರೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಬಿಜೆಪಿ ಎಲ್ಲವನ್ನೂ ಖಾಸಗಿಗೆ ಮಾರುತ್ತಿದ್ದಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿಗಿಟ್ಟಿದ್ದಾರೆ, ಇದು ದುರಂತ ಎಂದು ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ