ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ

ಜಮೀನು ವಿವಾದ ಪ್ರಕಣದಲ್ಲಿ ತೀರ್ಪು ತನ್ನ ವಿರುದ್ಧವಾಗಿ ಬಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸಂಬಂಧಿಕನನ್ನೇ ಕುಡುಗೋಲಿನಿಂದ 40ಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡಿದ್ದಾನೆ,

ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ
ಮದ್ದೂರು ತಾಲೂಕು ಕಚೇರಿಯಲ್ಲಿ ಡೆಡ್ಲಿ ಅಟ್ಯಾಕ್
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jan 24, 2023 | 5:53 PM

ಮಂಡ್ಯ: ಜಮೀನು ವ್ಯಾಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಕುಡುಗೋಲಿನಿಂದ 40ಕ್ಕೂ ಹೆಚ್ಚು ಬಾರಿ ಕೊಚ್ಚಿ ಕೊಲೆ ಯತ್ನಿಸಿರುವ ಭಯಾನಕ, ಭೀಕರ ಘಟನೆ ಇಂದು(ಜನವರಿ 24) ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ನಂದನ್​ ಎನ್ನುವ ವ್ಯಕ್ತಿ ಚೆನ್ನರಾಜ್​ ಮೇಲೆ ಕುಡುಗೋಲಿನಿಂದ ದಾಳಿ ಮಾಡಿದ್ದು, ಇದೀಗ ನಂದನ್​ ಸ್ಥಿತಿ ಗಂಭೀರವಾಗಿದೆ. ಮಂಡ್ಯ ಹಲ್ಲೆಗೊಳಗಾದ ಚೆನ್ನಾರಾಜು ಹಾಗೂ ನಂದನ್ ಇಬ್ಬರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ನಿವಾಸಿಗಳು.

ಜಮೀನು ವ್ಯಾಜ್ಯ ಪ್ರಕರಣ ಮದ್ದೂರು ತಾಲೂಕು ಕಚೇರಿಯಲ್ಲಿ ಚೆನ್ನರಾಜ್​ ಪರ ತೀರ್ಪು ಬರುತ್ತಿದ್ದಂತೆ ನಂದನ್ ಕುಪಿತಗೊಂಡಿದ್ದಾನೆ. ಬಳಿಕ ಅಲ್ಲೇ ​ತಾಲೂಕು ಕಚೇರಿಯಲ್ಲೇ ಕ್ಷಣ ಮಾತ್ರದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಚೆನ್ನರಾಜ್​ ಮೇಲೆ ಕುಡುಗೋಲಿನಿಂದ 40ಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡಿದ್ದಾನೆ.

ಸ್ಥಳೀಯರು ಬಿಡಿಸಲು ಎಷ್ಟೇ ಪ್ರಯತ್ನಿಸಿದರೂ ಬಿಡದ ನಂದನ್, ಕೊನೆಗೆ ಆತನ ಮೇಲೆ ಕಲ್ಲು ತೂರಿ ಚೆನ್ನರಾಜ್​ನನ್ನು ರಕ್ಷಿಸಿದ್ದಾರೆ. ಆದ್ರೆ, ಚೆನ್ನರಾಜ್​ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ಚೆನ್ನರಾಜು ಹಾಗೂ ನಂದನ್​ ನಿವಾಸದ ಬಳಿ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.

ಏನಿದು ಪ್ರಕರಣ?

ಮಂಡ್ಯ ಹಲ್ಲೆಗೊಳಗಾದ ಚೆನ್ನಾರಾಜು ಹಾಗೂ ನಂದನ್ ಇಬ್ಬರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ನಿವಾಸಿಗಳು. ಮುಖ್ಯವಾಗಿ ಇಬ್ಬರು ಸಂಬಂಧಿಕರು. ಚೆನ್ನರಾಜು ಬಳಿ 40 ಎಕರೆ ಜಮೀನು ಇತ್ತು. ಇನ್ನು ನಂದನ್ ಹತ್ತಿರ 3.20 ಗುಂಟೆ ಜಮೀನು ಇತ್ತು. ಆದ್ರೆ, ಚೆನ್ನರಾಜು 3.20 ಗುಂಟೆ ಜಮೀನು ನನಗೆ ಸಿಗಬೇಕು ಎಂದು ಕೋರ್ಟ್​ಗೆ ಕೇಸ್ ಹಾಕಿದ್ದ. 4 ವರ್ಷದಿಂದ ತಾಲೂಕು ಅಧಿಕಾರಿಯ ಬಳಿ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಅದು ಇಂದು ಮದ್ದೂರು ತಾಲೂಕು ಆಡಳಿತಾದಿಕಾರಿ ಚೆನ್ನರಾಜು ಪರ ತೀರ್ಪು ನೀಡದ್ದಾರೆ. ಇದರಿಂದ ಸಿಟ್ಟಿಗೆದ್ದು ನಂದನ್ ಈ ಕೃತ್ಯ ಎಸಗಿದ್ದಾನೆ.

ಹಲ್ಲೆಗೊಳಗಾದ ಚೆನ್ನರಾಜು ಪತ್ನಿ ಹೇಳಿದ್ದೇನು?

ನಮಗೂ ಜಮೀನಿನಲ್ಲಿ ಪಾಲು ಬರಬೇಕು ಎಂದು ನಂದನ್ ಕೋರ್ಟ್‌ಗೆ ಕೇಸ್ ಹಾಕಿದ್ದ. ಇವತ್ತು ತಹಶಿಲ್ದಾರ್ ಕೋರ್ಟ್ ಇದ್ದ ಕಾರಣ ತಾಲೂಕು ಕಚೇರಿ ಬಂದಿದ್ದೆವು. ನನ್ನ ಮಗಳನ್ನು ನಂದನ್ ಸೇರಿ 6 ಮಂದಿ ಬೇರೊಬ್ಬರ ಜೊತೆ ಮದುವೆ ಮಾಡಿಸಿದ್ದರು. ನಂದನ್ ತನ್ನ ಮದುವೆ ಮಾಡಿಸಿದ್ದಾಗಿ ಸ್ವತಃ ಮಗಳೇ ಹೇಳಿದ್ದಳು. ಅಲ್ಲಿಂದ ನಮಗೂ ಅವರ ನಡುವೆ ದ್ವೇಷ ಬೆಳೆದಿತ್ತು. ಈ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ನಮ್ಮನ್ನು ಕೊಲ್ಲುವುದಾಗಿ ನಂದನ್ ಬೆದರಿಕೆ ಹಾಕಿದ್ದ. ಈ ಬಗ್ಗೆ ಅವರ ವಿರುದ್ಧ ದೂರು ನೀಡಿದ್ದೆವು. ಅದು ಕೇಸ್ ನಡೆಯುತ್ತಿದೆ. ನಮಗೂ ಅವನಿಗೂ ಸಂಬಂಧ ಇಲ್ಲ. ಹೀಗೀದ್ದರು ಜಮೀನು ನನಗೆ ಬರಬೇಕೆಂದು ಕೇಸ್ ಹಾಕಿದ್ದ. ಈ ಬಗ್ಗೆ ನಿನ್ನೆ ರಾಜಿ ಪಂಚಾಯಿತಿ ಸಹ ನಡೆದಿತ್ತು. ಜಮೀನು ಪಿತ್ರಾರ್ಜಿತವಾಗಿ ಬಂದದ್ದು, ನನ್ನ ಗಂಡ ನನ್ನ ಹಾಗೂ ಮಗಳ ಹೆಸರಿಗೆ ಮಾಡಿದ್ದರು. ಇವತ್ತು ಅದೇ ವಿಚಾರವಾಗಿ ತಹಶಿಲ್ದಾರ್ ಕೋರ್ಟ್ ಇತ್ತು. ಅಧಿಕಾರಿಯನ್ನು ಕಾಣಲು ನನ್ನ ಗಂಡ ಕಚೇರಿ ಒಳಗೆ ಹೋಗಿದ್ದರು. ಈ ವೇಳೆ ಆಗಮಿಸಿದ ನಂದನ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ಹೇಳಿದರು.

ಮನಸ್ಸೋ ಇಚ್ಛೆ ಥಳಿಸುತ್ತಿದ್ದರೀ ಯಾರೋಬ್ಬರು ಬಿಡಿಸಲಿಲ್ಲ. ಬಳಿಕ ವಕೀಲರೊಬ್ಬರು ಕಲ್ಲಿನಲ್ಲಿ ಹೊಡೆದಾಗ ನಂದನ್ ಹಲ್ಲೆ ಮಾಡುವುದನ್ನು ನಿಲ್ಲಿಸಿದ್ದಾನೆ. ಹಲ್ಲೆ ನಡೆಯುವಾಗ ನನ್ನ ಗಂಡನನ್ನ ರಕ್ಷಿಸಿ ಎಂದು ಅಂಗಲಾಚಿದೆ. ಎಲ್ಲರ ಕಾಲುಕಟ್ಟಿ ಬೇಡಿಕೊಂಡೆನು. ಆದರೂ ಯಾರು ಸಹಾಯಕ್ಕೆ ಬರಲಿಲ್ಲ. ಈ ಹಿಂದೆಯೂ ಕುಡಿದು ಬಂದು ಮನೆ ಮುಂದೆ ಜಗಳವಾಡುತ್ತಿದ್ದ ಮನೆಗೆಲ್ಲಾ ಕಲ್ಲು ಹೊಡೆದು ದಾಂದಲೆ ನಡೆಸುತ್ತಿದ್ದ. ನಿಮ್ಮಪ್ಪನ್ನ ಉಳಿಸಲ್ಲ ಕೊಲೆ ಮಾಡ್ತೀನಿ ಎಂದು ನನ್ನ ಮಗಳಿಗೆ ಹೆದರಿಸಿದ್ದಾನೆ. ಎರಡು ವರ್ಷಗಳಿಂದ ನಮ್ಮ ಮತ್ತು ಅವನ ನಡುವೆ ಜಗಳ ನಡೆಯುತ್ತಿದೆ. ನನ್ನ ಮಗಳು ಪ್ರೀತಿಸಿದವನನ್ನು ನಾವು ನಿರಾಕರಿಸಿದ್ದೆವು. ಆದರೆ ಪೋಷಕರ ಏನು ಮಾಡ್ತಾರೆ ಎಂದು ನನ್ನ ಮಗಳನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಸಿದ್ದರು. ಆಗ ಪೊಲೀಸರಿಗೆ ಅಪಹರಣ ದೂರು ದಾಖಲಿಸಿದ್ದೆವು ಇವತ್ತಿನವರೆಗೂ ಅದರ ವಿಚಾರಣೆ ನಡೆಯುತ್ತಿದೆ ಎಂದು ಕಣ್ಣೀರು ಹಾಕುತ್ತ ಪರಿಸ್ಥಿತಿ ವಿವರಿಸಿದಳು.

ಇನ್ನಷ್ಟು ಮಂಡ್ಯ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:25 pm, Tue, 24 January 23