ಡಿಆರ್​ಐ ಭರ್ಜರಿ ಕಾರ್ಯಚರಣೆ: 5.43 ಕೋಟಿ ರೂ. ಸೇರಿ ಚಿನ್ನ, ಬೆಳ್ಳಿ ಜಪ್ತಿ, 12 ಜನರ ಬಂಧನ

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳಿಂದ ಬಿಹಾರದ ಅರಾರಿಯಾ, ಮುಂಬೈ, ಮಥುರಾ, ಗುರುಗ್ರಾಮದಲ್ಲಿ ಕಾರ್ಯಾಚರಣೆ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ 40 ಕೆ.ಜಿ ಚಿನ್ನ, 6 ಕೆ.ಜಿ ಬೆಳ್ಳಿ 5.43 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮಿಜೋರಾಂನ ಚಂಫೈನಲ್ಲಿ ಸೇನೆ ಮತ್ತು ಪೊಲೀಸ ಕಾರ್ಯಾಚರಣೆಯಿಂದಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 47 ಕೋಟಿ ರೂ. ಮೌಲ್ಯದ ಡ್ರಗ್ಸ್​​ನ್ನು ಜಪ್ತಿ ಮಾಡಲಾಗಿದೆ.

ಡಿಆರ್​ಐ ಭರ್ಜರಿ ಕಾರ್ಯಚರಣೆ: 5.43 ಕೋಟಿ ರೂ. ಸೇರಿ ಚಿನ್ನ, ಬೆಳ್ಳಿ ಜಪ್ತಿ, 12 ಜನರ ಬಂಧನ
ಜಪ್ತಿ ಮಾಡಿರುವ ಹಣ, ಚಿನ್ನ
Edited By:

Updated on: Mar 07, 2024 | 9:35 PM

ದೆಹಲಿ, ಮಾರ್ಚ್​​ 07: ಅಕ್ರಮವಾಗಿ ಸಂಗ್ರಹಿಸಿದ್ದ 40 ಕೆ.ಜಿ ಚಿನ್ನ, 6 ಕೆ.ಜಿ ಬೆಳ್ಳಿ 5.43 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳಿಂದ (DRI) ಬಿಹಾರದ ಅರಾರಿಯಾ, ಮುಂಬೈ, ಮಥುರಾ, ಗುರುಗ್ರಾಮದಲ್ಲಿ ಕಾರ್ಯಾಚರಣೆ ಮಾಡಿ ಜಪ್ತಿ ಮಾಡಲಾಗಿದೆ. ಸದ್ಯ 12 ಆರೋಪಿಗಳನ್ನು ಬಂಧಿಸಿ ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿದೇಶದಿಂದ ಅಕ್ರಮವಾಗಿ ಚಿನ್ನ ತರಿಸಿ ಸಂಗ್ರಹಿಸಿದ್ದರು.

ಅಕ್ರಮವಾಗಿ ಸಾಗಿಸುತ್ತಿದ್ದ 47 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ

ಮತ್ತೊಂದು ಪ್ರಕರಣದಲ್ಲಿ ಮಿಜೋರಾಂನ ಚಂಫೈನಲ್ಲಿ ಸೇನೆ ಮತ್ತು ಪೊಲೀಸ ಕಾರ್ಯಾಚರಣೆಯಿಂದಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 47 ಕೋಟಿ ರೂ. ಮೌಲ್ಯದ ಡ್ರಗ್ಸ್​​ನ್ನು ಜಪ್ತಿ ಮಾಡಲಾಗಿದೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯಲ್ಲಿ ಸ್ನೈಪರ್ ರೈಫಲ್ನ, 10 ನಿಷ್ಕ್ರಿಯ ನೈಟ್ ವಿಷನ್ (ಪಿಎನ್ಎಸ್) ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಪಡೆ ತಿಳಿಸಿದೆ. ಜೊತೆಗೆ ರಾಜ್ಯದ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ರಮ ದಂಧೆಯಲ್ಲಿ ತೊಡಗಿದ್ದ ಹಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಎಎನ್​ಐ ಟ್ವೀಟ್​ 

ಖಚಿತ ಮಾಹಿತಿ ಮೇರೆಗೆ ಅಸ್ಸಾಂ ರೈಫಲ್ಸ್ ಪಡೆಗಳು ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನಗಳನ್ನು ತಡೆದು ಪರಿಶೀಲಿಸಿದ ಬಳಿಕ ನೈಟ್ ವಿಷನ್​ ಸಾಧನಗಳೊಂದಿಗೆ ಸ್ನೈಪರ್ ರೈಫಲ್‌ನ ಮದ್ದುಗುಂಡುಗಳು ಇರುವುದು ಪತ್ತೆ ಆಗಿದೆ. ಬಳಿಕ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬಿಹಾರ: ಮನೆಗೆ ಬಂದ ಪ್ರಿಯಕರನ ಗುಪ್ತಾಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಯುವತಿ

ಅಸ್ಸಾಂ ರೈಫಲ್ಸ್ ಮಾರ್ಚ್ 06 ರಂದು ಝೋಖಾವ್ಥರ್ ಚಂಫೈ ಜಿಲ್ಲೆಯ ಸಾಮಾನ್ಯ ಪ್ರದೇಶದ ಮೆಲ್ಬುಕ್ ರೋಡ್ ಜಂಕ್ಷನ್‌ನಲ್ಲಿ 37.75 ಕೋಟಿ ರೂ. ಮೌಲ್ಯದ 5394 ಗ್ರಾಂ ತೂಕದ ಹೆರಾಯಿನ್ ನಂ 4 ಅನ್ನು ವಶಪಡಿಸಿಕೊಂಡಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.