[lazy-load-videos-and-sticky-control id=”OOvv86kktkU”]
ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್ವುಡ್ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ.
ಜಮೀರ್ ಪರವಾಗಿ ಶೇಖ್ ಫಾಝಿಲ್ ಹಣ ಹೂಡಿಕೆ ಮಾಡಿರುವ ಅನುಮಾನ ಸಿಸಿಬಿಗೆ ದಟ್ಟವಾಗಿದೆ. ಶ್ರೀಲಂಕಾದಲ್ಲಿ ಕ್ಯಾಸಿನೋಗೆ ಜಮೀರ್ ಪರವಾಗಿ ಫಾಝಿಲ್ ಹಣ ಹೂಡಿಕೆ ಮಾಡಿರಬಹುದು ಎಂಬುದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಶೇಖ್ ಫಾಝಿಲ್ನನ್ನ ಸರೆಂಡರ್ ಮಾಡಿಸುವುದಾಗಿ ಅವನ ಕುಟುಂಬದವರು ಭರವಸೆ ನೀಡಿದ್ದಾರೆ. ಆದ್ರೆ ಸರೆಂಡರ್ ಬಗ್ಗೆ ಒಪ್ಪದೆ ಶೇಖ್ ಬಂಧನಕ್ಕೆ ಸಿಸಿಬಿ ಪ್ಲ್ಯಾನ್ ಹಾಕಿದೆ. ಹಾಗಾಗಿ ಸಿಸಿಬಿಯಿಂದ ಶೇಖ್ ಫಾಝಿಲ್ ಬಂಧನಕ್ಕೆ ಕ್ಷಣಗಣನೆ ಶುರುವಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
Published On - 9:07 am, Tue, 15 September 20