ಬಹುಕೋಟಿ ವಂಚನೆ ಪ್ರಕರಣ: ಕರಣ್ ಗ್ರೂಪ್ ಬಿಲ್ಡರ್ಸ್ & ಡೆವಲಪರ್ಸ್ ಮುಖ್ಯಸ್ಥನನ್ನು ಬಂಧಿಸಿದ ಇಡಿ

ಬಹುಕೋಟಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರಣ್ ಗ್ರೂಪ್ ಬಿಲ್ಡರ್ಸ್ & ಡೆವಲಪರ್ಸ್ ಮುಖ್ಯಸ್ಥನನ್ನು ಇಡಿ ಬಂಧಿಸಿದೆ.

ಬಹುಕೋಟಿ ವಂಚನೆ ಪ್ರಕರಣ:  ಕರಣ್ ಗ್ರೂಪ್ ಬಿಲ್ಡರ್ಸ್ & ಡೆವಲಪರ್ಸ್ ಮುಖ್ಯಸ್ಥನನ್ನು ಬಂಧಿಸಿದ ಇಡಿ
ಇಡಿ
Edited By:

Updated on: Jan 12, 2023 | 10:46 PM

ಬೆಂಗಳೂರು: 500 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಕರಣ್ ಗ್ರೂಪ್ ಬಿಲ್ಡರ್ಸ್ & ಡೆವಲಪರ್ಸ್ (karan group builders And developers )ಮುಖ್ಯಸ್ಥ ಮಹೇಶ್ ಬಿ.ಓಜಾ ಎನ್ನುವರನ್ನು ಇಂದು(ಜನವರಿ 12) ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಮುಂಬೈ ಮೂಲದ ಮಹೇಶ್ ಭೂಪತ್​ ಕುಮಾರ್​ ಓಜಾ ಬಂಧಿತ ಆರೋಪಿ.

ಬಂಧಿತ ಮಹೇಶ್ ಭೂಪತ್​ ಕುಮಾರ್​ ಓಜಾರನ್ನು ಬೆಂಗಳೂರಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು ಪಿಎಂಎಲ್‌ಎ ವಿಶೇಷ 10 ದಿನಗಳ ಇಡಿ ಕಸ್ಟಡಿಗೆ ನೀಡಿದೆ.

ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆಯ ಹೆಸರಿನಲ್ಲಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಓಜಾ ವಿರುದ್ಧ ಕರ್ನಾಟಕದಲ್ಲಿ ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಅಲ್ಲದೇ ಈ ಹಿಂದೆ ಮಹೇಶ್ ಭೂಪತ್​ ಕುಮಾರ್​ ಓಜಾರನ್ನು ಸಿಐಡಿ ಬಂಧಿಸಿತ್ತು.

ವಿವಿಧ ಗುಂಪುಗಳು ಮತ್ತು ವ್ಯಕ್ತಿಗಳು ಕೈಗೊಂಡ ವಿವಿಧ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ದೂರುದಾರರು ಒಟ್ಟು 526 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರುದಾರರು ಮಾಡಿದ ಒಟ್ಟು 526 ಕೋಟಿ ರೂಪಾಯಿ ಹೂಡಿಕೆಯಲ್ಲಿ 121.5 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಓಜಾ ನೇತೃತ್ವದ ಕರಣ್ ಗ್ರೂಪ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕೈಗೊಂಡ ರಿಯಲ್ ಎಸ್ಟೇಟ್ ಯೋಜನೆಯಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.

Published On - 10:45 pm, Thu, 12 January 23