AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivamogga: ಕಾರ್ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್, ಕಾರ್ ಮಾಲೀಕನೇ ಅಂದರ್ ಆದ ಕತೆಯಿದು!

ಆರೋಪಿ ಕಾರ್ ಮಾಲೀಕ ಚಂದ್ರಕುಮಾರ್ ತನ್ನ ಕಾರಿನ ಮೇಲೆ ಇದ್ದ ₹ 10 ಲಕ್ಷ ವಾಹನ ಸಾಲ ಕಟ್ಟದೇ ಹಣಕಾಸು ಸಂಸ್ಥೆಗೆ ಮೋಸ ಮಾಡಿದ್ದನು. ಇನ್ನು ಕಾರ್ ಕಳ್ಳತನ ಕೇಸ್ ದಾಖಲಿಸಿದ್ರೆ ಲಕ್ಷ ಲಕ್ಷ ವಿಮಾ ಹಣ ಬರುತ್ತದೆಂದು ಆತ ಲೆಕ್ಕಾಚಾರ ಹಾಕಿದ್ದನಂತೆ.

Shivamogga: ಕಾರ್ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್, ಕಾರ್ ಮಾಲೀಕನೇ ಅಂದರ್ ಆದ ಕತೆಯಿದು!
ಕಾರ್ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್, ಕಾರ್ ಮಾಲೀಕನೇ ಅಂದರ್ ಆದ ಕತೆಯಿದು!
TV9 Web
| Updated By: ಸಾಧು ಶ್ರೀನಾಥ್​|

Updated on:Jan 12, 2023 | 1:53 PM

Share

ಹೊಸ ಕಾರು ತೆಗೆದುಕೊಂಡು ಆತ ಖುಷಿ ಖುಷಿ ಆಗಿದ್ದ ಹೊಸ ಕಾರ್ ತೆಗೆದುಕೊಂಡ ಖುಷಿ ಆತನಿಗೇನೂ ತುಂಬಾ ದಿನ ಇರಲಿಲ್ಲ. ಸಾಲ ಮಾಡಿ (vehicle loan) ತೆಗೆದುಕೊಂಡು ಕಾರ್ ನ ಕಂತು ತುಂಬುವುದು ಕಷ್ಟವಾಯಿತು. ಇದರ ಜೊತೆಗೆ ಕಾರ್ ಇನ್ಸೂರೆನ್ಸ್ ಕಟ್ಟುವುದು ತಲೆ ಮೇಲೆಯಿತ್ತು. ಹಣ ಇಲ್ಲದೇ ಕಂಗಾಲಾಗಿದ್ದ ಕಾರ್ ಮಾಲೀಕ ಮಾಡಿದ್ದು ಮಾತ್ರ ದೊಡ್ಡ ಪ್ಲ್ಯಾನ್.. ಕಾರ್ ಮಾಲೀಕನ ಮಸಲತ್ತು ಕುರಿತು ಒಂದು ವರದಿ ಇಲ್ಲಿದೆ. ಕಾರಿನ ಸಾಲದ ಕಂತು (emi) ಕಟ್ಟುವುದನ್ನು ತಪ್ಪಿಸಲು ಅದು ಕಳುವಾಗಿದೆ (car theft) ಎಂದು ಶಿವಮೊಗ್ಗದ (shivamogga) ಕಾರ್ ಮಾಲೀಕ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ. ಈ ನಡುವೆ ಕಳ್ಳತನವಾಗಿರುವ ಕಾರ್ ಪತ್ತೆಯಾಗಿ ತುಂಗಾ ನಗರ ಪೊಲೀಸರು ಮುಂದಾಗಿದ್ದರು. ತುಂಗಾ ನಗರ ಪೊಲೀಸರ ಕಾರ್ ಕಳ್ಳತನ ಪತ್ತೆಯ ತನಿಖೆ ವೇಳೆಯಲ್ಲಿ ಒಂದು ಘಟನೆಯು ಅವರಿಗೆ ಬೆಚ್ಚಿಳಿಸುತ್ತದೆ. ಕಾರ್ ಕಂತು ತುಂಬಲು ಆಗದೇ ಕಾರ್ ಮಾಲೀಕನು ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದ.

ಶಿವಮೊಗ್ಗದ ಹೊರವಲಯದಲ್ಲಿರುವ ಸೂಳೆಬೈಲಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರ್ ಕಳ್ಳತನವಾಗಿತ್ತು ಅಂತಾ ಕಾರ್ ಮಾಲೀಕ ದೂರು ಕೊಟ್ಟಿದ್ದ. ತುಂಗಾ ನಗರ ಪೊಲೀಸರು ಹೊಸ ಕಾರಿನ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಕಳ್ಳತನವಾಗಿರುವ ಕಾರ್ ದಾವಣಗೆರೆಯಲ್ಲಿ ಪತ್ತೆಯಾಗುತ್ತದೆ. ಆ ಕಾರ್ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಶಿವಮೊಗ್ಗಕ್ಕೆ ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಾರೆ. ಈ ವೇಳೆ ಯಾರು ಕಾರ್ ಕಳ್ಳತನವಾಗಿದೆ ಅಂತಾ ದೂರ ಕೊಟ್ಟಿದ್ದರೂ (ಮೂಲ ಮಾಲೀಕ) ಕಾರ್ ಕಳ್ಳತನ ಹಿಂದಿರುವ ಮಾಸ್ಟರ್ ಮೈಂಡ್ ಎನ್ನುವ ಅಚ್ಚರಿ ಸಂಗತಿ ಪೊಲೀಸರಿಗೆ ತನಿಖೆ ವೇಳೆ ತಿಳಿದುಬರುತ್ತದೆ.

ಶಿವಮೊಗ್ಗದ ವಿದ್ಯಾನಗರ ನಿವಾಸಿ ಚಂದ್ರಕುಮಾರ್, ಸೂಳೆಬೈಲಿನಲ್ಲಿ ತೋಟದ ಮನೆಯ ಬಳಿ ನಿಲ್ಲಿಸಿದ್ದ ತನ್ನ ಟೊಯೊಟಾ ಯಾರಿಸ್ ಕಾರನ್ನು ಕಳವು ಮಾಡಲಾಗಿದೆ ಎಂದು ತುಂಗಾನಗರ ಠಾಣೆಗೆ ಕಳೆದ ಮೇ 6ರಂದು ದೂರು ಕೊಟ್ಟಿದ್ದನು. ತುಂಗಾ ನಗರದ ಇನ್‌ಸ್ಪೆಕ್ಟರ್ ಬಿ. ಮಂಜುನಾಥ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಈ ಕಳ್ಳತನ ಪ್ರಕರಣದಲ್ಲಿ ಕಾರ್ ಮಾಲೀಕ ಚಂದ್ರಕುಮಾರ್ (28) ಹಾಗೂ ದಾವಣಗೆರೆಯ ಸರಸ್ವತಿ ನಗರದ ನಿವಾಸಿ ಜಿ. ಪ್ರಶಾಂತ್ (29) ಎಂಬಿಬ್ಬರನ್ನು ಬಂಧಿಸಿದ್ದಾರೆ.

ಆರೋಪಿ ಕಾರ್ ಮಾಲೀಕ ಚಂದ್ರಕುಮಾರ್ ತನ್ನ ಕಾರಿನ ಮೇಲೆ ಇದ್ದ ₹ 10 ಲಕ್ಷ ವಾಹನ ಸಾಲ ಕಟ್ಟದೇ ಹಣಕಾಸು ಸಂಸ್ಥೆಗೆ ಮೋಸ ಮಾಡಿದ್ದನು. ಇನ್ನು ಕಾರ್ ಕಳ್ಳತನ ಕೇಸ್ ದಾಖಲಿಸಿದ್ರೆ ಲಕ್ಷ ಲಕ್ಷ ವಿಮಾ ಹಣ ಬರುತ್ತದೆಂದು ಆತ ಲೆಕ್ಕಾಚಾರ ಹಾಕಿದ್ದನಂತೆ. ಅದರಂತೆ ದಾವಣಗೆರೆಯಲ್ಲಿದ್ದ ಸ್ನೇಹಿತ ಪ್ರಶಾಂತ್ ಗೆ ತನ್ನ ಕಾರನ್ನು ಗಪ್ ಚುಪ್ ಆಗಿ ಕೊಟ್ಟಿದ್ದನು.

ಇನ್ನು ಸ್ನೇಹಿತರ ಪ್ರಶಾಂತ್ ಕಾರಿನ ನಂಬರ್ ಪ್ಲೇಟ್ ಬದಲಿಸಿ ದಾವಣಗೆರೆಯಲ್ಲಿ ಬಿಂದಾಸ್ ಆಗಿ ಓಡಾಡಿಕೊಂಡಿದ್ದನು. ಕಾರ್ ಮಾಲೀಕನ ಕಳ್ಳತನ ದೂರಿನಂತೆ ಪೊಲೀಸರು ಕಾರ್ ಅನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ದೂರು ಕೊಟ್ಟ ಕಾರ್ ಮಾಲೀಕನೇ ಇಲ್ಲಿ ಎ1 ಅರೋಪಿ ಆಗಿದ್ದು ವಿಚಿತ್ರವಾಗಿದೆ. ತುಂಗಾ ನಗರ ಪೊಲೀಸರು ಕಾರ್ ಸೀಜ್ ಮಾಡಿದ್ದು, ಕಾರ್ ಮಾಲೀಕ ಮತ್ತು ಆತನ ಸ್ನೇಹಿತ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ತನ್ನದೇ ಕಾರ್ ಕಳ್ಳತನ ಕೇಸ್ ಕೊಟ್ಟಿದ್ದೇ ಆತನಿಗೆ ಮುಳುವಾಗುತ್ತದೆ ಅಂತಾ ಆತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಸ್ನೇಹಿತರ ಜೊತೆ ಸೇರಿ ಆಡಿದ ಕಾರ್ ಕಳ್ಳತನ ಆಟದಲ್ಲಿ ಸ್ವತಃ ಸಿಕ್ಕಿಬಿದ್ದಿದ್ದಾನೆ. ಕಾರ್ ಕಂತಿನಿಂದ ಬಚಾವ್ ಆಗಲು ಹೋಗಿ ಕಾರ್ ಮಾಲೀಕನು ಈಗ ಕಂಬಿ ಎಣಿಸುವಂತೆ ಆಗಿದೆ.

ವರದಿ: ಬಸವರಾಜ್ ಯರಗಣವಿ, ಟವಿ9, ಶಿವಮೊಗ್ಗ

Published On - 12:52 pm, Thu, 12 January 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ