ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆ: ಸಚಿವ ಎಂಬಿ ಪಾಟೀಲ್ ಸುಳಿವು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 13, 2024 | 5:05 PM

ಹೈದರಾಬಾದ್​​ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆಯಾಗಿದ್ದು, 2 ಕೋಟಿ ರೂ. ಮೌಲ್ಯದ ಸಾಮಾಗ್ರಿ ವಶಕ್ಕೆ ಪಡೆಯಲಾಗಿದೆ. ನಕಲಿ ಮೈಸೂರ್ ಸ್ಯಾಂಡಲ್ ಸಾಬೂನು ಹೈದರಾಬಾದ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬಗ್ಗೆ ಸಚಿವ ಎಂಬಿ. ಪಾಟೀಲ್​​ಗೆ ಅನಾಮಧೇಯ ಕರೆ ಬಂದಿದೆ. ಇಬ್ಬರನ್ನು ಬಂಧಿಸಲಾಗಿದೆ.

ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆ: ಸಚಿವ ಎಂಬಿ ಪಾಟೀಲ್ ಸುಳಿವು
ನಕಲಿ ಮೈಸೂರು ಸ್ಯಾಂಡಲ್ ಸೋಪ್
Follow us on

ಬೆಂಗಳೂರು, ಜನವರಿ 13: ಹೈದರಾಬಾದ್​​ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ (Mysore sandal soap) ತಯಾರಿಕಾ ಘಟಕ ಪತ್ತೆಯಾಗಿದ್ದು, 2 ಕೋಟಿ ರೂ. ಮೌಲ್ಯದ ಸಾಮಾಗ್ರಿ ವಶಕ್ಕೆ ಪಡೆಯಲಾಗಿದೆ. ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ನಕಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ. ನಕಲಿ ಉತ್ಪನ್ನ, ಪ್ಯಾಕಿಂಗ್​ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್ ಸೇರಿದಂತೆ ಸಾಮಾಗ್ರಿಗಳು ಪತ್ತೆಯಾಗಿವೆ. ಹೈದರಾಬಾದಿನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವರ ಬಂಧಿಸಲಾಗಿದ್ದು, ಮಾಲಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಸಚಿವ ಎಂಬಿ ಪಾಟೀಲ್​​ಗೆ ಅನಾಮಧೇಯ ಕರೆ

ನಕಲಿ ಮೈಸೂರ್ ಸ್ಯಾಂಡಲ್ ಸಾಬೂನು ಹೈದರಾಬಾದ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬಗ್ಗೆ ಸಚಿವ ಎಂಬಿ. ಪಾಟೀಲ್​​ಗೆ ಅನಾಮಧೇಯ ಕರೆ ಬಂದಿದೆ. ಆ ಮೂಲಕ ಕಾರ್ಖಾನೆ ಎಂಡಿ ಡಾ. ಪ್ರಶಾಂತ್​ಗೆ ನಿಗಾ ವಹಿಸಲು ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಗಳ ಕಾಲೇಜು ಸೀಟ್‌ಗಾಗಿ ಅಡ್ಡದಾರಿ ಹಿಡಿದ ಉದ್ಯಮಿ, ಕೊನೆಗೆ ಆತನೇ ಕಿಡ್ನಾಪ್!

ಕಾರ್ಯಪ್ರವೃತ್ತರಾಗಿದ್ದ ಸಿಕಂದರಾಬಾದಿನಲ್ಲಿರುವ ಕೆಎಸ್​ಡಿಎಲ್ ಅಧಿಕೃತ ಮಾರಾಟ ಕಚೇರಿ ಸಿಬ್ಬಂದಿ ಹೈದರಾಬಾದಿನ ಕೆಲವು ಪ್ರದೇಶಗಳಲ್ಲಿ ನಕಲಿ ಸಾಬೂನು ಮಾರಾಟ ಕಂಡುಬಂದಿದೆ. ಸ್ವತಃ 1 ಲಕ್ಷ ರೂಪಾಯಿ ಬೆಲೆಯ ಉತ್ಪನ್ನ ಖರೀದಿಸಿ ಮೂಲ ಪತ್ತೆಗೆ ಕೆಎಸ್​ಡಿಎಲ್ ಸಿಬ್ಬಂದಿ ಮುಂದಾಗಿದ್ದರು.

ಇದನ್ನೂ ಓದಿ: ಪ್ರೀತಿಸಲು ನಿರಾಕರಿಸಿದ ಯುವತಿಗೆ ಚೂರಿ ಇರಿತ ಕೇಸ್​: ಆರೋಪಿಗೆ 18 ವರ್ಷ ಒಂದು ತಿಂಗಳು ಸಜೆ

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣ ಕೊಟ್ಟು 25 ಲಕ್ಷ ರೂ. ಬೆಲೆಯ ಸೋಪ್ ಖರೀದಿಗೆ ಕೆಎಸ್​ಡಿಎಲ್ ಸಿಬ್ಬಂದಿ ಆರ್ಡರ್ ಕೊಟ್ಟಿದ್ದರು. ಸ್ವತಃ ತಾವೇ ವಾಹನದಲ್ಲಿ ಸಾಗಿಸುವ ನೆಪದಲ್ಲಿ ಉತ್ಪಾದನೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಪತ್ತೆ ಹಚ್ಚಿದ್ದಾರೆ.

ರಾತ್ರಿ ಬೀಗ ಮುರಿದು 50 ಸಾವಿರ ರೂ. ಕಳ್ಳತನ

ಬಾಗಲಕೋಟೆ: ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಚಾಕು ಹಿಡಿದು ಅಂಗಡಿಗೆ ನುಗ್ಗಿ 50 ಸಾವಿರ ರೂಪಾಯಿ ದೋಚಿ ಕಳ್ಳರು ಪರಾರಿ ಆಗಿರುವಂತಹ ಘಟನೆ ನಡೆದಿದೆ. ಬಸವೇಶ್ವರ ಹಾರ್ಡ್​​​​ವೇರ್, ನಂದಿ ಬೇಕರಿ, ಕಿಕ್ ಬೆಲ್ಲದ ಚಹಾ, ಬನಶಂಕರಿ ಬೇಕರಿಯಲ್ಲಿ ಕಳ್ಳತನ ಮಾಡಲಾಗಿದೆ. ಜ.10ರ ರಾತ್ರಿ ನಡೆದ ಘಟನೆಯ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೀಳಗಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.