ಪ್ರೀತಿಸಲು ನಿರಾಕರಿಸಿದ ಯುವತಿಗೆ ಚೂರಿ ಇರಿತ ಕೇಸ್​: ಆರೋಪಿಗೆ 18 ವರ್ಷ ಒಂದು ತಿಂಗಳು ಸಜೆ

ಪ್ರೀತಿಸಲು ನಿರಾಕರಿಸಿದ ಯುವತಿಗೆ ಚೂರಿ ಇರಿದಿದ್ದವನಿಗೆ 18 ವರ್ಷ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ನಿಂದ ಆದೇಶ ಹೊರಡಿಸಲಾಗಿದೆ. ದಂಡದ ರೂಪದಲ್ಲಿ ಸಂತ್ರಸ್ತೆಗೆ 2 ಲಕ್ಷ ರೂ. ಹಣ ನೀಡುವಂತೆ ಕೋರ್ಟ್ ಆದೇಶಿಸಿದೆ. 2019ರ ಜೂನ್ 28ರಂದು ಯುವತಿಗೆ 12 ಬಾರಿ ಅಪರಾಧಿ ಸುಶಾಂತ್ ಅಲಿಯಾಸ್ ಶಾನ್​ ಚೂರಿ ಇರಿದಿದ್ದ.

ಪ್ರೀತಿಸಲು ನಿರಾಕರಿಸಿದ ಯುವತಿಗೆ ಚೂರಿ ಇರಿತ ಕೇಸ್​: ಆರೋಪಿಗೆ 18 ವರ್ಷ ಒಂದು ತಿಂಗಳು ಸಜೆ
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Jan 12, 2024 | 7:37 PM

ಮಂಗಳೂರು, ಜನವರಿ 12: ಪ್ರೀತಿಸಲು ನಿರಾಕರಿಸಿದ ಯುವತಿಗೆ ಚೂರಿ (stabbing) ಇರಿದಿದ್ದವನಿಗೆ 18 ವರ್ಷ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ನಿಂದ ಆದೇಶ ಹೊರಡಿಸಲಾಗಿದೆ. ದಂಡದ ರೂಪದಲ್ಲಿ ಸಂತ್ರಸ್ತೆಗೆ 2 ಲಕ್ಷ ರೂ. ಹಣ ನೀಡುವಂತೆ ಕೋರ್ಟ್ ಆದೇಶಿಸಿದೆ. 2019ರ ಜೂನ್ 28ರಂದು ಯುವತಿಗೆ 12 ಬಾರಿ ಅಪರಾಧಿ ಸುಶಾಂತ್ ಅಲಿಯಾಸ್ ಶಾನ್​ ಚೂರಿ ಇರಿದಿದ್ದ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಬಗಂಬಿಲ ರಸ್ತೆಯಲ್ಲಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕೃತ್ಯವೆಸಗಿದ್ದ.

ನಂತರ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಚಿಕಿತ್ಸೆ ಪಡೆದು ಯುವತಿ ಗುಣಮುಖಳಾಗಿದ್ದಳು. ಕೃತ್ಯವೆಸಗಿದ ದಿನವೇ ಸುಶಾಂತ್ ಅಲಿಯಾಸ್ ಶಾನ್​ನನ್ನು ಪೊಲೀಸರು ಬಂಧಿಸಿದ್ದರು. ಯುವತಿಗೆ ಚೂರಿ ಇರಿತದ ದೃಶ್ಯ ಮೊಬೈಲ್, ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಉಳ್ಳಾಲ ಠಾಣೆ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದರು.

ಕ್ರಿಕೆಟ್​​​ ಆಡಿ ಕುಳಿತಿದ್ದ ಪಶು ವೈದ್ಯ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು: ಕ್ರಿಕೆಟ್​​​ ಆಡಿ ಕುಳಿತಿದ್ದ ಪಶು ವೈದ್ಯ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ನಗರದ ಸುಭಾಷ್​​​ ಚಂದ್ರ ಬೋಸ್​​​​​ ಕ್ರೀಡಾಂಗಣದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಪಶುವೈದ್ಯ ಶಿವಪ್ಪ(56) ಮೃತ ಪಶು ವೈದ್ಯ. ಪಶು ಇಲಾಖೆಯಿಂದ ಕ್ರಿಕೆಟ್​​​ ಟೂರ್ನ್‌ಮೆಂಟ್‌ ಆಯೋಜನೆ ಮಾಡಿದ್ದು, ಇಂದಿನಿಂದ 2 ದಿನಗಳ ಕಾಲ ನಡೆಯಬೇಕಿತ್ತು. ಕೊಡಗು ಕ್ರಿಕೆಟ್​​​ ತಂಡದಲ್ಲಿ ಮೃತ ಶಿವಪ್ಪ ಬಾದಾಮಿ ಆಟವಾಡುತ್ತಿದ್ದರು.

ಹೊಸ ವರ್ಷ ಸಂಭ್ರಮಾಚರಣೆಗೆ ಕೇಕ್ ತರಲು ಬಂದವನ ಕೊಲೆ

ಬಳ್ಳಾರಿ: ವರ್ಷದ ಅಂತ್ಯದ ದಿನದಂದೇ ಗಣಿನಾಡು ಬಳ್ಳಾರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಸಹೋದರಿಬ್ಬರ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಓರ್ವನನ್ನ ಕೊಲೆ ಮಾಡಿದ ಘಟನೆ ನಡೆದಿತ್ತು. ಎಸ್ ಸೈಯದ್ ವಾಲಿ (23) ಮತ್ತು ರಜಾಕ ವಾಲಿ (26) ಈ ಇಬ್ಬರು ಸಹೋದರರು ಹೊಸ ವರ್ಷ ಸಂಭ್ರಮಾಚರಣೆ ಮಾಡಬೇಕು ಎಂದು ವಡ್ಡರಬಂಡೆಯಲ್ಲಿರುವ ಎಮ್.ಎಮ್ ಬೇಕರಿಗೆ ಕೇಕ್ ತರಲು ರಾತ್ರಿ 8:30 ಕ್ಕೆ ಬಂದಿದ್ದರು.

ಇದನ್ನೂ ಓದಿ: ವಾಟ್ಸಾಪ್​​ ಮೂಲಕ ಲೈಂಗಿಕ ಆಮಿಷವೊಡ್ಡಿ ಹಣ ವಸೂಲಿ ಆರೋಪ: ವ್ಯಕ್ತಿ ಸೆರೆ

1.5 kg ಕೇಕ್ ತೆಗೆದುಕೊಂಡು ಬೇಕರಿಗೆ ಮುಂದೆ ನಿಲ್ಲಿಸಿದ್ದ ಬೈಕ್ ಹತ್ತಿ ಮನೆಗೆ ಹೊರಡಬೇಕಿತ್ತು. ಅಷ್ಟರಲ್ಲಿ ಇವರು ನಿಲ್ಲಿಸಿದ್ದ ಬೈಕ್ ಪಕ್ಕದಲ್ಲಿ ಇನ್ನೊಂದು ಬೈಕ್ ನಿಂತಿದೆ. ಆಗ ಆ ಬೈಕ್ ಯಾರದು ಅಂತಾ ನೋಡುವಾಗ ಅಲ್ಲಿಯೇ ಮೂವರು ಯುವಕರು ಅದೇ ಬೇಕರಿ ಮುಂದೆ ಕೇಕ್ ತೆಗೆದುಕೊಳ್ಳಲು ನಿಂತಿದ್ದಾರೆ. ಬೈಕ್‌ಗೆ ಅಡ್ಡವಾಗಿ ನಿಮ್ಮ ಬೈಕ್ ನಿಲ್ಲಿಸಿದ್ದಿರೀ ಸ್ವಲ್ಪ ಜಾಗ ಬಿಡಿಸಿ ಅಂತಾ ಸೈಯದ್ ಮತ್ತು ರಜಾಕ ಆ ಮೂವರಿಗೆ ಹೇಳಿದ್ದಾರೆ.

ಆಗ ಆ ಯುವಕರು ಸ್ವಲ್ಪ ತಡಿ ನಾವು ಕೇಕ್ ತೆಗೆದುಕೊಳ್ಳಬೇಕು ನಿಲ್ಲು ಅಂತಾ ಹೇಳಿದ್ದಾರೆ. ಅಷ್ಟಕ್ಕೆ ಮಾತಿಗೆ ಮಾತು ಬೆಳೆದಿದೆ. ಕುಡಿದ ಮತ್ತಿನಲ್ಲಿ ಆರೋಪಿ ರಾಜೇಶ್, ವೆಂಕಟೇಶ ಮತ್ತು ಮುಕೇಶ ಸಹೋದರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಜಗಳ ತಾರಕಕ್ಕೇರಿದೆ ಅಷ್ಟರಲ್ಲಿ A 1 ಆರೋಪಿ ಮುಕೇಶ ತನ್ನ ಬೈಕ್‌ನಲ್ಲಿದ್ದ ಚಾಕು ತೆಗೆದು ಸೈಯದ್ ವಾಲಿ ಮತ್ತು ರಜಾಕ ಮೇಲೆ ಹಲ್ಲೆ ಮಾಡಿದ್ದ. ಪರಿಣಾಮ ಸೈಯದ್ ಸಾವನ್ನಪ್ಪಿದ್ದು ರಜಾಕ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ. A 1 ಆರೋಪಿ ಮುಖೇಶ್ ರೌಡಿ ಪ್ರವೃತ್ತಿಯವನ್ನಾಗಿದ್ದು ಸದಾ ತನ್ನ ಬೈಕ್‌ನಲ್ಲಿ ಮಾರಕಾಸ್ತ್ರಗಳನ್ನ ಇಟ್ಟುಕೊಂಡು ಓಡಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ಆತನ ಮೇಲೆ ಸೆ 324 ಕೇಸ್ ಕೂಡ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.