AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುತ್ತು ನೀಡುತ್ತಿದ್ದ ದೊಡ್ಡಮ್ಮನನ್ನೇ ಕೊಂದುಬಿಟ್ಟ ಮಗ, ಎರಡು ಕುಟುಂಬಗಳು ಕಣ್ಣೀರು ಕಣ್ಣೀರು

ಸಂಜಯ ಸಂಜೆಯಾದ್ರೇ ಕುಡಿದು ಬಂದು ಗಲಾಟೆ ಮಾಡ್ತಿದ್ದ, ಇದರಿಂದ ಆಕ್ರೋಶಗೊಂಡು ಈ ರೀತಿ ಕುಡಿಯುವುದು ಸರಿಯಲ್ಲ, ನೀನು ಮದುವೆ ಮಾಡಿಕೊಂಡು ನಿನ್ನ ಜೀವನ ನಡೆಸು ಅಂತಾ ದೊಡ್ಡಮ್ಮ ಮಂಗಲಾ ಬುದ್ದಿವಾದ ಹೇಳಿದ್ದರು. ಇದಾದ ಬಳಿಕ ಜನವರಿ 8ರಂದು ರಾತ್ರಿ...

ತುತ್ತು ನೀಡುತ್ತಿದ್ದ ದೊಡ್ಡಮ್ಮನನ್ನೇ ಕೊಂದುಬಿಟ್ಟ ಮಗ, ಎರಡು ಕುಟುಂಬಗಳು ಕಣ್ಣೀರು ಕಣ್ಣೀರು
ತುತ್ತು ನೀಡುತ್ತಿದ್ದ ದೊಡ್ಡಮ್ಮನನ್ನೇ ಕೊಂದುಬಿಟ್ಟ ಮಗ
ಸಹದೇವ್​ ಮಾನೆ
| Edited By: ಸಾಧು ಶ್ರೀನಾಥ್​|

Updated on: Jan 13, 2024 | 2:44 PM

Share

ಆತನಿಗೆ ಇನ್ನೂ ಮದುವೆ ಆಗಿರಲಿಲ್ಲ. ಡ್ರೈವರ್ ಕೆಲಸ ಮಾಡಿಕೊಂಡಿದ್ದವನ ತಾಯಿ ತೀರಿ ಹೋಗಿ ದೊಡ್ಡಮ್ಮನ ಮನೆಯಲ್ಲೇ ಜೀವನ ನಡೆಸುತ್ತಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಆತನಿಗೆ ಆಗಾಗ ದೊಡ್ಡಮ್ಮ ಬೈದು ಬುದ್ದಿವಾದ ಹೇಳುತ್ತಿದ್ದಳು. ಮೊನ್ನೆ ಅದೊಂದು ಸಣ್ಣ ವಿಚಾರಕ್ಕೆ ಸಾಕುತ್ತಿದ್ದ ದೊಡ್ಡಮ್ಮನ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಕೊಲೆ ಮಾಡಿ ಪರಾರಿಯಾಗಿದ್ದವ ಕಡೆಗೂ ಅಂದರ್ ಆಗಿದ್ದು, ಅಷ್ಟಕ್ಕೂ ಅದ್ಯಾವ ಕಾರಣಕ್ಕೆ ದೊಡ್ಡಮ್ಮನನ್ನ ಕೊಂದ ಅಂತೀರಾ ಈ ಸ್ಟೋರಿ ನೋಡಿ.

ಫೋಟೊದಲ್ಲಿರುವ ಯುವಕನ ಹೆಸರು ಸಂಜಯ್ ಸಾವಡ್ಕರ್ ಅಂತಾ, 27 ವರ್ಷದ ಈತ ತನ್ನ ದೊಡ್ಡಮ್ಮನನ್ನೇ ಕೊಂದು ಇದೀಗ ಜೈಲು ಸೇರಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ (Athani, Belagavi) ಸಂಜಯ್, ಟಿಪ್ಪರ್ ಡ್ರೈವರ್ ಆಗಿದ್ದ. ಈತ ಇನ್ನೂ ಮದುವೆ ಆಗಿಲ್ಲ. ಮೂರು ತಿಂಗಳ ಹಿಂದೆ ತಾಯಿಯನ್ನ ಕಳೆದುಕೊಂಡಿದ್ದ, ಈತನ ತಂದೆಯೂ ಮಗಳ ಮನೆ ಸೇರಿಕೊಂಡಿದ್ದ. ಇನ್ನು ಒಬ್ಬನೇ ಇದ್ದ ಈತ ತನ್ನ ದೊಡ್ಡಮ್ಮ ಮಂಗಲಾ ಸಾವಡ್ಕರ್ ಮನೆಯಲ್ಲೇ ಊಟ ಮಾಡಲು ಹೇಳಿದ್ದರು.

ಅಲ್ಲಿಯೇ ಇದ್ದ ಸಂಜಯ್ ಸಂಜೆಯಾದ್ರೇ ಕುಡಿದು ಬಂದು ಗಲಾಟೆ ಮಾಡ್ತಿದ್ದ, ಇದರಿಂದ ಆಕ್ರೋಶಗೊಂಡು ಈ ರೀತಿ ಕುಡಿಯುವುದು ಸರಿಯಲ್ಲ, ನೀನು ಮದುವೆ ಮಾಡಿಕೊಂಡು ನಿನ್ನ ಜೀವನ ನಡೆಸು ಅಂತಾ ಮಂಗಲಾ ಬುದ್ದಿವಾದ ಹೇಳಿದ್ದರು. ಇದಾದ ಬಳಿಕ ಜನವರಿ 8ರಂದು ಒಳ್ಳೆಯ ದಿನ ಅಂತಾ ಮಂಗಲಾ ಮಕ್ಕಳು ಸೇರಿಕೊಂಡು ಹೊಸದೊಂದು ಸ್ಕೂಟಿ ಖರೀದಿಸಿಕೊಂಡು ಬಂದಿದ್ದಾರೆ.

ಸಂಜೆ ಪೂಜೆ ಮಾಡಿಕೊಂಡು ಮನೆ ಮುಂದೆ ಸ್ಕೂಟಿ ನಿಲ್ಲಿಸಿದ್ದಾರೆ. ಈತ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಸ್ಕೂಟಿ ನೋಡಿ ಹದಿನೈದು ವರ್ಷದ ತನ್ನ ತಂಗಿ ಬಳಿ ಕೀ ಕೊಡುವಂತೆ ಕೇಳಿದ್ದಾನೆ. ಆಗ ಕೊಡಲ್ಲ ಅಂತಾ ತನ್ನ ತಾಯಿ ಮಂಗಲಾ ಕೈಯಲ್ಲಿ ಕೀ ನೀಡಿದ್ದಾಳೆ. ಈ ವೇಳೆ ಕೀ ಕೊಡಲ್ಲ, ನೀನು ಕುಡಿದು ಬಂದಿದೀಯಾ ಅಂತಾ ಮಂಗಲಾ ಹೇಳಿದ್ದಾರೆ. ಅದಾಗಿಯೂ ಕೀ ಬೇಕು ಅಂತ ಹಠ ಹಿಡಿದಾಗ ಬೈಯ್ದು ಹೊರ ಕಳ್ಸಿದ್ದಾರೆ.

ರಾತ್ರಿ ಊಟ ಮಾಡಿದ ಬಳಿಕ ಮನೆಯಿಂದ ಹೊರ ಬಂದು ನಿಂತಿದ್ದ ಮಂಗಲಾಗೆ ಹಿಂಬದಿಯಿಂದ ರಾಡ್ ನಿಂದ ತಲೆ ಭಾಗಕ್ಕೆ ಹೊಡೆದೇ ಬಿಟ್ಟಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಗಲಾಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ರಾಡ್ ನಿಂದ ಹೊಡೆದ ಸಂಜಯ್ ಕೂಡಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇತ್ತ ಅಥಣಿ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಕೂಡಲೇ ಶವವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮಾಡಿ ಜ. 9ರಂದು ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಸಂಜಯ್ ಗೆ ಹಿಡಿಶಾಪ ಹಾಕ್ತಾನೇ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Also Read: ಪ್ರವಾಸೀ ತಾಣ ಹೊಸಪೇಟೆಯಲ್ಲಿ ವೇಶ್ಯಾವಾಟಿಕೆ, ಲಾಡ್ಜ್ ಸಿಬ್ಬಂದಿಯ ಏರ್ಪಾಟು ನೋಡಿ ಪೊಲೀಸರಿಗೇ ಶಾಕ್!

ಇತ್ತ ತಪ್ಪಿಸಿಕೊಂಡು ಓಡಿ ಹೋಗಿದ್ದ ಆರೋಪಿ ಸಂಜಯ್ ನನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಕಳ್ಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್ ಪಿ ಡಾ. ಭೀಮಾಶಂಕರ್ ಗುಳೇದ್ ಕೊಲೆ ಪ್ರಕರಣ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದಾಗ ಸ್ಕೂಟಿ ಕೀ ವಿಚಾರಕ್ಕೆ ಗಲಾಟೆ ಆಗಿ ಕೊಲೆ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದ್ದು ಈಗಾಗಲೇ ಆರೋಪಿಯನ್ನ ಬಂಧಿಸಿ ಮುಂದಿನ ತನಿಖೆ ನಡೆದಿದೆ ಎಂದಿದ್ದಾರೆ.

ಒಟ್ಟಿನಲ್ಲಿ ತಾಯಿಯಿಲ್ಲದ ಮಗೂ ಅಂತಾ ಮಗನಂತೆ ನೋಡಿಕೊಳ್ತಿದ್ದ ದೊಡ್ಡಮ್ಮನನ್ನೇ ಪಾಪಿ ಕೊಂದಿದ್ದಾನೆ. ಸಣ್ಣ ವಿಚಾರಕ್ಕೆ ಕುಡಿದ ನಶೆಯಲ್ಲಿ ಹೊಡೆದು ಸಾಯಿಸಿ ಜೈಲು ಸೇರಿದ್ದಾನೆ. ಇದ್ದೊಬ್ಬ ಮಗನ ಕಿರಿಕಿರಿ ತಾಳಲಾರದೇ ಇರೋ ಮನೆ ಬಿಟ್ಟು ತಂದೆ ಮಗಳ ಮನೆ ಸೇರಿಕೊಂಡಿದಾನೆ. ಒಟ್ಟಿನಲ್ಲಿ ಒಬ್ಬನ ಕ್ರೌರ್ಯಕ್ಕೆ ಇದೀಗ ಎರಡು ಕುಟುಂಬಗಳು ಕಣ್ಣೀರಿಡುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ