500 ರೂ. ಕದ್ದನೆಂಬ ಅನುಮಾನದಿಂದ 10 ವರ್ಷದ ಮಗನಿಗೆ ಹೊಡೆದು ಕೊಂದ ತಂದೆ

|

Updated on: Sep 28, 2024 | 10:01 PM

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ತಂದೆಯೊಬ್ಬ ತನ್ನ 10 ವರ್ಷದ ಮಗನನ್ನು ಹೊಡೆದು ಕೊಂದಿದ್ದಾನೆ. ತಂದೆಯೇ ತನ್ನ ಮಗನನ್ನು ಹೊಡೆದು ಕೊಂದಿದ್ದಾನೆ. ಈ ಕೊಲೆಗೆ ಅನುಮಾನವೇ ಕಾರಣ. ತನ್ನ ಬಳಿಯಿದ್ದ 500 ರೂ.ಗಳನ್ನು ಮಗ ಕದ್ದಿದ್ದಾನೆ ಎಂದು ತಂದೆ ಶಂಕಿಸಿ, ಹೊಡೆದಿದ್ದಾರೆ.

500 ರೂ. ಕದ್ದನೆಂಬ ಅನುಮಾನದಿಂದ 10 ವರ್ಷದ ಮಗನಿಗೆ ಹೊಡೆದು ಕೊಂದ ತಂದೆ
ಅಪರಾಧ
Follow us on

ನೊಯ್ಡಾ: ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ತಂದೆಯೊಬ್ಬ ತನ್ನ 10 ವರ್ಷದ ಮಗನನ್ನು ಹೊಡೆದು ಕೊಂದಿದ್ದಾನೆ. ತಂದೆಯೇ ಮಗನನ್ನು ಕೊಲೆ ಮಾಡಿದ್ದಾನೆ. ಈ ಕೊಲೆಗೆ ಅನುಮಾನವೇ ಕಾರಣ. ತನ್ನ ಬಳಿಯಿದ್ದ 500 ರೂ.ಗಳನ್ನು ಮಗ ಕದ್ದಿದ್ದಾನೆ ಎಂದು ತಂದೆ ಶಂಕಿಸಿದ್ದಾರೆ. ಈ ಅನುಮಾನದ ಆಧಾರದ ಮೇಲೆ ತಂದೆ ಮಗನಿಗೆ ಬೆಲ್ಟ್ ಮತ್ತು ಕಿಚನ್ ರೋಲಿಂಗ್ ಪಿನ್ ನಿಂದ ಹೊಡೆದು ಕೊಂದಿದ್ದಾನೆ. ಮೋದಿನಗರದ ಭೋಜ್‌ಪುರ ಪೊಲೀಸ್ ಠಾಣೆಯ ತ್ಯೋಡಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಈ ಹತ್ಯೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪರಾಧಕ್ಕೆ ಬಳಸಿದ ರೋಲಿಂಗ್ ಪಿನ್ ಅನ್ನು ವಶಪಡಿಸಿಕೊಂಡರು. ಮಗುವಿನ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಗುವಿನ ಸಾವಿನಿಂದ ಇಡೀ ಕುಟುಂಬವು ದುಃಖಿತವಾಗಿದೆ.

ಇದನ್ನೂ ಓದಿ: ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್

ಮಾಹಿತಿ ಪ್ರಕಾರ, ಆರೋಪಿ ನೌಶಾದ್ ತನ್ನ 10 ವರ್ಷದ ಮಗ ಅಹದ್ 500 ರೂ. ಹಣವನ್ನು ಕದ್ದಿದ್ದಾನೆ ಎಂದು ಆರೋಪಿಸಿದ್ದಾನೆ. 500 ರೂ. ಕದ್ದಿದ್ದಕ್ಕೆ ಕೋಪಗೊಂಡ ತಂದೆ ನೌಶಾದ್ ತನ್ನ ಮಗ ಅಹದ್‌ಗೆ ಬೆಲ್ಟ್‌ನಿಂದ ಮೊದಲು ಥಳಿಸಿದ್ದು, ಇದರಿಂದ ಸಮಾಧಾನವಾಗದೇ ಮನೆಯೊಳಗೆ ಹೋಗಿ ಅಡುಗೆ ಮನೆಯಲ್ಲಿದ್ದ ರೋಲಿಂಗ್ ಪಿನ್ ತಂದು ತಲೆಗೆ ಪದೇಪದೇ ಹೊಡೆದಿದ್ದಾನೆ. ಅಹದ್‌ನನ್ನು ಆತನ ತಂದೆ 30 ನಿಮಿಷಗಳ ಕಾಲ ಅಮಾನುಷವಾಗಿ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಅಹದ್‌ನನ್ನು ರಕ್ಷಿಸುವಂತೆ ಅಜ್ಜ-ಅಜ್ಜಿಯರು ಕೂಗುತ್ತಿದ್ದಾಗ ಹೊಡೆತದ ಏಟಿನಿಂದ ಅಹದ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಇದನ್ನೂ ಓದಿ: ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್

ಮಗನಿಗೆ ಕೆಟ್ಟದಾಗಿ ಥಳಿಸಿದ ಬಳಿಕ ಆರೋಪಿ ತಂದೆ ಆತನನ್ನು ಹಾಗೆಯೇ ಬಿಟ್ಟು ಮನೆಯಿಂದ ಹೋಗಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅಹದ್ ನೌಶಾದ್ ಅವರ ಮೊದಲ ಹೆಂಡತಿಯ ಮಗ; ಆತ ಕೂಡ ಅವರೊಂದಿಗೆ ವಾಸಿಸುತ್ತಿದ್ದ. ನೌಶಾದ್‌ನ ಮೊದಲ ಪತ್ನಿ ಆತನನ್ನು ತೊರೆದು ಹೋಗಿದ್ದು, ಬಳಿಕ ನೌಷಾದ್‌ ಎರಡನೇ ಮದುವೆಯಾಗಿದ್ದರು. ನೌಶಾದ್‌ಗೆ ಎರಡನೇ ಪತ್ನಿಯಿಂದ ಮಗಳಿದ್ದಾಳೆ. ಅಹದ್ ವಿಚಾರವಾಗಿ ಎರಡನೇ ಪತ್ನಿ ಹಾಗೂ ನೌಶಾದ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ